ಬಿಜೆಪಿಯಲ್ಲಿ VJP vs YJP vs AJP ಬಡಿದಾಟ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
 ಹಿಂದೆ ಬಿಜೆಪಿ vs ಕೆಜೆಪಿ ಬಡಿದಾಟವಿತ್ತು, ಈಗ ಬಿಜೆಪಿಯಲ್ಲಿ VJP vs YJP vs AJP ಬಡಿದಾಟ ನಡೆಯುತ್ತಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ ಮಾಡಿದ್ದಾರೆ.

ಈ ಬಡಿದಾಟವನ್ನು ಮರೆಮಾಚಲು ಹೋರಾಟ ಎಂಬ ನಾಟಕ ಶುರು ಮಾಡಿಕೊಂಡಿದೆ. ನನ್ನ ಮನೆಗೆ ಮುತ್ತಿಗೆ ಹಾಕಲು ಬಿಜೆಪಿಗರನ್ನು ದಾರಾಳವಾಗಿ ಸ್ವಾಗತಿಸುತ್ತೇನೆ, ಕಾಫಿ, ಟೀ, ಬಿಸ್ಕೆಟ್ ಗಳ ಆತಿಥ್ಯವನ್ನೂ ನೀಡುತ್ತೇನೆ ಎಂದು ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದ್ದಾರೆ.
ಬಿಜೆಪಿಗೆ ಅಸ್ತಿತ್ವ ಉಳಿಸಿಕೊಳ್ಳಲು ಈಗ ನನ್ನ ಹೆಸರು ಅನಿವಾರ್ಯವಾಗಿದೆ
, ಹಾಗಾಗಿ ನನ್ನ ವಿರುದ್ಧದ ಪಿತೂರಿಯ ಟೂಲ್ ಕಿಟ್ರೂಪಿಸಿದೆ ಎಂದು ಸಚಿವ ಖರ್ಗೆ ಆರೋಪಿಸಿದ್ದಾರೆ.

ರಾಜ್ಯ ಬಿಜೆಪಿ ನಾಯಕರು ಹೈಕಮಾಂಡಿಗೆ ತಮ್ಮ ಸಾಧನೆಯ ರಿಪೋರ್ಟ್ ಕಾರ್ಡ್ ತೋರಿಸಲು ನನ್ನ ಹೆಸರಿನಲ್ಲಿ ಹೋರಾಟದ ನಾಟಕ ಆರಂಭಿಸಿದ್ದಾರೆ, ನನ್ನ ಹೆಸರಿನ ಮೂಲಕ ವಿಜಯೇಂದ್ರರವರು ಸಂಕ್ರಾಂತಿಯ ಡೆಡ್ ಲೈನ್ದಾಟುವ ಪ್ರಯತ್ನ ನಡೆಸಿದ್ದಾರೆ! ಎಂದು ಬಿಜೆಪಿ ನಾಯಕರ ವಿರುದ್ಧ ಸಚಿವರು ವಾಗ್ದಾಳಿ ಮಾಡಿದ್ದಾರೆ.

Dear @BJP4Karnataka , ಸುಳ್ಳುಗಳ ಆಧಾರದಲ್ಲಿ ನನ್ನ ವಿರುದ್ಧ ಇಷ್ಟೆಲ್ಲಾ ಸುವ್ಯವಸ್ಥಿತವಾದ, ವಿವಿಧ ಮಾದರಿಯ ಹಾಗೂ ವ್ಯಾಪಕವಾದ ಹೋರಾಟ ಮಾಡುವ ಬದಲು ರಾಜ್ಯದ ಜನರೆದುರು ನಿಮ್ಮ ನೈತಿಕತೆಯನ್ನು ನಿರೂಪಿಸುವ ಹೋರಾಟ ಮಾಡಿ ಎಂದು ಪ್ರಿಯಾಂಕ್ ಖರ್ಗೆ ಕಿವಿ ಮಾತು ಹೇಳಿದ್ದಾರೆ.
ಮಹಿಳೆಯರನ್ನು ಅತ್ಯಾಚಾರಗೈದು
, ದಲಿತರನ್ನು ನಿಂದಿಸಿ, ಒಕ್ಕಲಿಗ ಮಹಿಳೆಯರನ್ನು ಮಂಚಕ್ಕೆ ಕರೆದ ಮುನಿರತ್ನರವರ ವಿರುದ್ಧ ಹೋರಾಟ ಮಾಡಿ, ಜನ ಮೆಚ್ಚುತ್ತಾರೆ ಎಂದು ಸಚಿವರು ತಾಕೀತು ಮಾಡಿದ್ದಾರೆ.

ಅಪ್ರಾಪ್ತ ಬಾಲಕಿಯ ಮೇಲೆ ದೌರ್ಜನ್ಯ ಎಸಗಿ ಪೋಕ್ಸೋ ಪ್ರಕರಣ ಎದುರಿಸುತ್ತಿರುವ ಯಡಿಯೂರಪ್ಪನವರ ವಿರುದ್ಧ ಕರಪತ್ರ ಹಂಚಿ, ಜನ ಒಪ್ಪುತ್ತಾರೆ. ಮಹಿಳೆಯರನ್ನು ಅತ್ಯಂತ ಕೊಳಕು ಭಾಷೆಯಲ್ಲಿ ನಿಂದಿಸಿದ ಸಿ.ಟಿ ರವಿಯವರ ಮನೆಗೆ ಮುತ್ತಿಗೆ ಹಾಕಿ, ಜನ ಜೈ ಅನ್ನುತ್ತಾರೆ ಎಂದು ಪ್ರಿಯಾಂಕ್ ಖರ್ಗೆ ಸಲಹೆ ನೀಡಿದ್ದಾರೆ.

ಕೋವಿಡ್ ಕಾಲದಲ್ಲಿ ಹೆಣದ ಮೇಲೆ ಹಣ ಮಾಡಿ, ಭ್ರಷ್ಟಾಚಾರದಿಂದ ಸಾವಿರಾರು ಜೀವ ತೆಗೆದ ಭ್ರಷ್ಟರ ವಿರುದ್ಧ ಕಪ್ಪು ಬಾವುಟ ತೋರಿಸಿ, ಜನ ಸಮಾಧಾನವಾಗುತ್ತಾರೆ. ವಕ್ಫ್ ವರದಿ ಮುಚ್ಚಿ ಹಾಕಲು 150 ಕೋಟಿ ಆಮಿಷ ಒಡ್ಡಿದ ವಿಜಯೇಂದ್ರರವರ ವಿರುದ್ಧ ಪೋಸ್ಟರ್ ಪ್ರದರ್ಶನ ಮಾಡಿ, ಜನ ಬಹುಪರಾಕ್ ಹಾಕುತ್ತಾರೆ ಎಂದು ಬಿಜೆಪಿ ನಾಯಕರ ವಿರುದ್ಧ ಸಚಿವರು ವಾಗ್ದಾಳಿ ಮಾಡಿದ್ದಾರೆ.

ಕರ್ನಾಟಕ ಬಿಜೆಪಿ ನಾಯಕರೇ ಈ ಎಲ್ಲಾ ಕೆಲಸಗಳನ್ನು ಮಾಡಿ, ರಾಜ್ಯದ ಜನಕ್ಕೆ ನೀವು ಎಸಗಿದ ದ್ರೋಹಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳಿ, ನಿಮಗೂ ನೈತಿಕತೆಪದದ ಅರ್ಥ ತಿಳಿದಿದೆ ಎಂಬುದನ್ನು ನಿರೂಪಿಸಿ ಎಂದು ಸಚಿವರು ಆಗ್ರಹ ಮಾಡಿದ್ದಾರೆ.

ಒಂದು ಸುಳ್ಳನ್ನು ನೂರು ಬಾರಿ ಹೇಳಿದರೆ ಅದೇ ಸತ್ಯವಾಗುತ್ತದೆ ಎಂಬ ಗೊಬೆಲ್ಸ್ ಸಿದ್ದಾಂತವನ್ನು ಮೆಚ್ಚಿ ನೆಚ್ಚಿಕೊಂಡಿರುವ ಬಿಜೆಪಿಗರು ಮುಂದಿನ ದಿನಗಳಲ್ಲಿ ಗೊಬೆಲ್ಸ್ ಕೂಡ ನಾಚುವಂತ ಸುಳ್ಳುಗಾರರಾಗಿ ಹೊರಹೊಮ್ಮಲಿದ್ದಾರೆ! ಅಂದಹಾಗೆ, ನನ್ನ ವಿರುದ್ಧ ಬಿಜೆಪಿ ರೂಪಿಸಿರುವ ಸುಳ್ಳುಗಳ ಈ ಬಿಜೆಪಿ ಟೂಲ್ ಕಿಟ್ ತುಂಬಾ ಸೊಗಸಾಗಿದೆ! ಎಂದು ಸಚಿವ ಪ್ರಿಯಾಂಕ್ ಖರ್ಗೆ ಸೋಜಿಗ ವ್ಯಕ್ತಪಡಿಸಿದ್ದಾರೆ.

 

- Advertisement -  - Advertisement - 
Share This Article
error: Content is protected !!
";