ಬಹುಮುಖ ಪ್ರತಿಭೆಯ ಶಿಕ್ಷಣ ಶಿಲ್ಪಿ ವೊಡೇ ಪಿ ಕೃಷ್ಣ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಶ್ರೀ ಡಾ. ವೂಡೇ ಪಿ ಕೃಷ್ಣ ರಾಜ್ಯಮಟ್ಟದ ಗಾಂಧಿ ಸ್ಮಾರಕ ನಿಧಿಯ ಅದ್ಯಕ್ಷರು, ಶಿಕ್ಷಣ ತಜ್ಞರು, ಬರಹಗಾರರು. ಇವರು ಬೆಂಗಳೂರಿನವರಾದರೂ ಇವರ ಪೂರ್ವಜರು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಕಡೆವೂಡೇ  ಗ್ರಾಮದವರು. ಇವರ ಪೂರ್ವಜರು ಸರಿಸುಮಾರು 200 ವರ್ಷಗಳ ಹಿಂದೆ ಬೆಂಗಳೂರಿಗೆ ಹೋಗಿ ನೆಲೆಸಿ ಆ ದಿನಮಾನಗಳಲ್ಲಿ ವ್ಯಾಪಾರ ನೀತಿಯಲ್ಲಿ ಜೀವನ ಕಟ್ಟಿಕೊಳ್ಳಲು ದೊಡ್ಡ ಪ್ರಮಾಣದಲ್ಲಿ ಸಫಲತೆ ಕಂಡಿದ್ದಾರೆ.

ವೊಡೇ ಕುಟುಂಬದ ಹೆಸರಿನಲ್ಲಿ ಸಾಮಾಜಿಕ ಕ್ಷೇತ್ರದಲ್ಲಿ ಗುರುತ್ತಿಸಿಕೊಂಡ ಇವರ ಪೂರ್ವಜರು ಸ್ವಾತಂತ್ರ ಸಂಗ್ರಾಮದಲ್ಲಿ ಪಾಲ್ಗೊಂಡಿದ್ದಾರೆ.

ವೊಡೇ ಪಿ ಕೃಷ್ಣ ಅವರ ಅಜ್ಜ  ಮೈಸೂರು ಸಂಸ್ಥಾನದ ಆಡಳಿತದಲ್ಲಿ  ಸಂವಿಧಾನದ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ನಾನು ತಿಳಿದಿದ್ದೇನೆ. ವೊಡೇ ಪಿ ಕೃಷ್ಣ ಅವರ ದೊಡ್ಡಪ್ಪ ಡಬ್ಲ್ಯುಎಚ್ ಹನುಮಂತಪ್ಪನವರು ಬೆಂಗಳೂರಿನ ಪ್ರಥಮ ಕಾರ್ಪೋರೇಶನ್ ಆಡಳಿತಕ್ಕೆ ಮೊದಲ ಮೇಯರ್ ಎಂಬ ವಿಚಾರ ಗೌರವಕ್ಕೆ ಪಾತ್ರವಾಗಿದೆ.

ಹಲವು ವರ್ಷಗಳ ಹಿಂದೆಯೇ ಬೆಂಗಳೂರಿನ ಗಾಂಧಿನಗರದ 5 ನೇ ಮುಖ್ಯ ರಸ್ತೆಗೆ ಡಬ್ಲ್ಯುಎಚ್ ಹನುಮಂತಪ್ಪ ಎಂಬ ಹೆಸರು ನಾಮಕರಣ ಮಾಡಲಾಗಿದೆ ಇದು ವೊಡೇ ಮನೆತನದ ಘನತೆಗೆ ಸಂಕೇತ. ವೊಡೇ ಪಿ ಕೃಷ್ಣ ಅವರು ಮೈಸೂರಿನಲ್ಲಿ ಶ್ರೀ ರಾಮಕೃಷ್ಣ ವಿದ್ಯಾಪೀಠದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಪಡೆದ ಇವರು ಎಂಜಿನಿಯರಿಂಗ್ ಹಾಗೂ ಕಾನೂನಿನಲ್ಲಿ ಸ್ನಾತಕೋತ್ತರ ಪದವಿಗಳನ್ನು ಪಡೆದಿದ್ದಾರೆ.

ವೊಡೇ ಪಿ ಕೃಷ್ಣ ಅವರು ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಹಲವಾರು ಪ್ರಶಸ್ತಿ ಗೌರವಗಳಿಗೆ ಪಾತ್ರರಾಗಿದ್ದಾರೆ. ಅವುಗಳಲ್ಲಿ ಪ್ರಮುಖವಾದವು ಎಮಿನೆಂಟ್ ಮೆಕ್ಯಾನಿಕಲ್ ಇಂಜಿನಿಯರ್ ರಾಷ್ಟ್ರೀಯ ಪ್ರಶಸ್ತಿ, ರಾಜ್ಯ ಯುವ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ನಾಡೋಜ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ ಸೇರಿದಂತೆ ಇನ್ನು ಹಲವು ಪ್ರಶಸ್ತಿಗಳು ಲಭಿಸಿವೆ.

ವೊಡೇ ಪಿ ಕೃಷ್ಣ ಅವರು ಮಹಾತ್ಮ ಗಾಂಧಿ ಹಾಗೂ ಸ್ವಾಮಿ ವಿವೇಕಾನಂದರ ತತ್ವಗಳ ಅನುಯಾಯಿಗಳು. ವೊಡೇ ಪಿ ಕೃಷ್ಣ ಅವರು ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಗೆ ಗೌರವ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ.

ಅವರಲ್ಲಿರುವ ಶಿಕ್ಷಣ ನೀತಿಯ ಜ್ಞಾನ ಹಾಗೂ ಸಾಮಾಜಿಕ ಕ್ಷೇತ್ರದ ಚಟುವಟಿಕೆಗಳನ್ನು ಸಾರ್ವಜನಿಕವಾಗಿ ಸದ್ಬಳಕೆ ಮಾಡಿಕೊಳ್ಳಲು ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರದ ಆಡಳಿತದಲ್ಲಿ ವೊಡೇ ಪಿ ಕೃಷ್ಣ ಅವರಿಗೆ ಮೇಲ್ಮನೆ ಸದಸ್ವತದ ರಾಜ್ಯದ ವಿಧಾನ ಪರಿಷತ್ತಿನ ಶಾಸಕ ಸ್ಥಾನ ಅಥವಾ ಕೇಂದ್ರದ ರಾಜ್ಯಸಭಾ ಸಂಸದ ಸ್ಥಾನ ನೀಡಲಿ ಎಂಬ ಮಹತ್ವದ ಮನವಿ ನಾಗರಿಕ ಸಮಾಜದಿಂದ ಕೇಳಿ ಬಂದಿದೆ. ಈ ವಿಚಾರದಲ್ಲಿ ಸಾಮಾಜಿಕ ಚಿಂತಕರು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಗಮನಕ್ಕೆ ತರಬೇಕಿದೆ.

 ಕಳೆದ ವರ್ಷ ಚಂದನ ಸುದ್ದಿವಾಹಿನಿ ವೊಡೇ ಪಿ ಕೃಷ್ಣ ಅವರನ್ನು ವಾರದ ಅತಿಥಿ ಸಂದರ್ಶನದ ಪೀಠಿಕೆಯಲ್ಲಿ ಅವರ ವಿಚಾರದ ಮೌಲ್ಯಗಳನ್ನು ಸಂದರ್ಶಿಸಿ ಪ್ರಸಾರ ಮಾಡಲಾಗಿದೆ ಮೇಲಿನ ವಿಡಿಯೋವನ್ನು ಸಂಪೂರ್ಣ ಗಮನಿಸಿ ಉತ್ತಮ ಸಮಾಜಕ್ಕೆ ಉತ್ತಮ ಸಂದೇಶವಾಗಿದೆ.
ಲೇಖನ-ರಘು ಗೌಡ 9916101265

- Advertisement -  - Advertisement -  - Advertisement - 
Share This Article
error: Content is protected !!
";