ಚಂದ್ರವಳ್ಳಿ ನ್ಯೂಸ್, ತುಮಕೂರು:
ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿರುವ ೩೫ ವಾರ್ಡ್‌ಗಳಲ್ಲಿ ಅಕ್ಟೋಬರ್ ೫ರಂದು ಬೆಳಿಗ್ಗೆ ೧೦ ರಿಂದ ಸಂಜೆ ೪ ಗಂಟೆವರೆಗೆ ಮತದಾರರ ಆಂದೋಲನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪಾಲಿಕೆ ಆಯುಕ್ತ ಬಿ.ವಿ. ಅಶ್ವಿಜ ತಿಳಿಸಿದ್ದಾರೆ.
ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ೧೩೨-ತುಮಕೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-೨೦೨೫ರ ಸಂಬಂಧ ೨೦೨೫ ಜನವರಿ ೧ನ್ನು ಅರ್ಹತಾ ದಿನಾಂಕವನ್ನಾಗಿರಿಸಿಕೊಂಡು ಈ ಆಂದೋಲನವನ್ನು ಹಮ್ಮಿಕೊಳ್ಳಲಾಗಿದೆ.
ಈ ಆಂದೋಲನದಲ್ಲಿ ಮತದಾರರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಸೇರ್ಪಡೆ, ತಿದ್ದುಪಡಿ, ಪಟ್ಟಿಯಿಂದ ಕೈಬಿಡುವ ಹೆಸರು, ಸ್ಥಳಾಂತರ, ವಿಳಾಸ ಬದಲಾವಣೆ ಸಂಬಂಧ ನಿಗಧಿತ ನಮೂನೆ ೬, ೭, ೮ರಲ್ಲಿ ಅರ್ಜಿ ಸಲ್ಲಿಸಬಹುದು.
ಸಾರ್ವಜನಿಕರು ತಮ್ಮ ಮೊಬೈಲ್‌ನಲ್ಲಿ VOTER HELP LINE APP, NVSP(National Voters Service Portal) ಮೂಲಕವೂ ಸಹ ನೋಂದಣಿ ಮಾಡುಕೊಳ್ಳಬಹುದು. ಅರ್ಹ ಮತದಾರರು ಮತದಾರರ ಆಂದೋಲನದ ಸದುಪಯೋಗ ಪಡೆದುಕೊಳ್ಳಬೇಕೆಂದು ಅವರು ಮನವಿ ಮಾಡಿದ್ದಾರೆ.