ಆಗ್ನೇಯ ಪದವೀಧರ ಕ್ಷೇತ್ರದ ಮತದಾರರು ಹೆಸರು ಸೇರಿಸಿ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ವಿಧಾನ ಪರಿಷತ್ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯ ಮತದಾರರ ಪಟ್ಟಿಗೆ ಅರ್ಹ ಪದವೀಧರ ಮತದಾರರು ತಮ್ಮ ಹೆಸರುಗಳನ್ನು ನೊಂದಾಯಿಸಿಕೊಳ್ಳುವಂತೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ದಾವಣಗೆರೆಯ ಹನೀಸ್‌ ಪಾಷ ಮನವಿ ಮಾಡಿದ್ದಾರೆ.

ಚಿತ್ರದುರ್ಗದಲ್ಲಿ ನಿವೃತ್ತ ಪ್ರಾಚಾರ್ಯ ಜೆ.ಯಾದವರೆಡ್ಡಿರವರ ನಿವಾಸಕ್ಕೆ ಭೇಟಿ ನೀಡಿ ಪದವೀಧರರು ಹೆಸರು ನೊಂದಾಯಿಸಿಕೊಳ್ಳುವಂತೆ ಅರ್ಜಿ ನೀಡಿ ವಿನಂತಿಸಿದ ನ್ಯಾಯವಾದಿ ಹನೀಸ್‌ಪಾಷ ಆಗ್ನೇಯ ಪದವೀಧರ ಕ್ಷೇತ್ರಕ್ಕೆ ಹೆಸರು ನೊಂದಾಯಿಸಿಕೊಳ್ಳಲು ನ. ೬ ಕಡೆಯ ದಿನವಾಗಿದ್ದು, ೨೦೨೨ ನ.೧ ಕ್ಕೂ ಮೊದಲು ಪದವಿಯಲ್ಲಿ ತೇರ್ಗಡೆಯಾಗಿರುವವರು ಘಟಿಕೋತ್ಸವ ಪ್ರಮಾಣ ಪತ್ರ/

- Advertisement - 

ಮೂರು ವರ್ಷದ ಪದವಿಯ ಅಂಕಪಟ್ಟಿ, ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿಗಳನ್ನು ಗೆಜೆಟೆಡ್ ಅಧಿಕಾರಿಗಳಿಂದ ದೃಢೀಕರಿಸಿಕೊಂಡು ಇತ್ತೀಚಿನ ಎರಡು ಕಲರ್ ಫೋಟೋದೊಂದಿಗೆ ಚುನಾವಣಾ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿ ಸ್ವೀಕೃತಿ ಪಡೆಯಬಹುದೆಂದರು.

ನ್ಯಾಯವಾದಿಯಾಗಿ ಬಡವರು, ರೈತರು, ಶೋಷಿತರು, ದಮನಿತರಿಗೆ ನ್ಯಾಯ ಕೊಡಿಸುವಲ್ಲಿ ಸಾಕಷ್ಟು ಶ್ರಮಿಸಿದ್ದೇನೆ. ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯ ಕಾರ್ಯಕರ್ತನಾಗಿ ಹಲವಾರು ವರ್ಷಗಳಿಂದಲೂ ಸೇವೆ ಸಲ್ಲಿಸುತ್ತಿದ್ದು, ಕೆ.ಪಿ.ಸಿ.ಸಿ. ಕರೆಯಂತೆ ಪಕ್ಷದ ವರಿಷ್ಠರಿಗೆ ಅಧಿಕೃತವಾಗಿ ಅರ್ಜಿ ಸಲ್ಲಿಸಿದ್ದೇನೆ.

- Advertisement - 

ಪ್ರಜ್ಞಾವಂತ ಪದವಿಧರರು ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸಿ ಜಯಶಾಲಿಯನ್ನಾಗಿಸಿದರೆ ನಿಮ್ಮಗಳ ಸಮಸ್ಯೆಗಳಿಗೆ ಧ್ವನಿಯಾಗಿರುತ್ತೇನೆಂದು ಹನೀಸ್‌ಪಾಷ ಕೋರಿದರು. ರಹಮತ್‌ವುಲ್ಲಾ, ಟಿ.ಶಫಿವುಲ್ಲಾ ಇವರುಗಳು ಈ ಸಂದರ್ಭದಲ್ಲಿ ಹಾಜರಿದ್ದರು.

 

 

Share This Article
error: Content is protected !!
";