ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಇಂಡಿಯಾ ಎಂಬ ಹೆಸರಿನಲ್ಲಿ ಒಕ್ಕೂಟ ರಚಿಸಿದ್ದ ಕಾಂಗ್ರೆಸ್‌ಈಗ ಈಸ್ಟ್‌ಇಂಡಿಯಾ ಕಂಪನಿಯಂತೆ ನಾಮಾವಶೇಷದ ಹಾದಿಯಲ್ಲಿದೆ. ದೇಶವನ್ನು ಬಹುಕಾಲ ಆಳಿದ ಭಾರತೀಯ ಕಾಂಗ್ರೆಸ್ ಪಕ್ಷ ಇಂದು ಅಕ್ಷರಶಃ ನೆಲಕಚ್ಚಿದೆ. ಕಾಂಗ್ರೆಸ್‌ಎಂಬ ಹೆಸರಿನಲ್ಲಿ ನಕಲಿ ಗಾಂಧಿ ಪರಿವಾರದವರು, ಪದಾಧಿಕಾರಿಗಳು ಇರುವಷ್ಟೂ ಮತಗಳು ಕಾಂಗ್ರೆಸ್‌ಪಕ್ಷಕ್ಕೆ ಬೀಳುತ್ತಿಲ್ಲ ಎಂದು ಬಿಜೆಪಿ ವ್ಯಂಗ್ಯವಾಡಿದೆ.
ದೇಶದ ಜನರು ಕಾಂಗ್ರೆಸ್‌ಪಕ್ಷವನ್ನು ಎಡಗಾಲಿನಲ್ಲಿ ಒದ್ದು ತಿರಸ್ಕರಿಸುತ್ತಿರುವುದಕ್ಕೆ ದೆಹಲಿ ಫಲಿತಾಂಶವೇ ಸಾಕ್ಷಿಯಾಗಿದೆ. 70 ಕ್ಷೇತ್ರಗಳ ಪೈಕಿ ಕೇವಲ 3 ಕ್ಷೇತ್ರಗಳಲ್ಲಷ್ಟೇ ಕಾಂಗ್ರೆಸ್‌ಪಕ್ಷ ಠೇವಣಿ ಉಳಿಸಿಕೊಳ್ಳಲು ಶಕ್ತವಾಗಿದೆ. ದೇಶವನ್ನು ಆವರಿಸಿದ್ದ ಕಾಂಗ್ರೆಸ್‌ಎಂಬ ಮಾಯೆ, ದೆಹಲಿಯಲ್ಲಿ ಆಡಳಿತ ನಡೆಸಿದ್ದ ಕಾಂಗ್ರೆಸ್‌ಎಂಬ ದೈತ್ಯ ಪಕ್ಷ 67 ಕ್ಷೇತ್ರಗಳಲ್ಲಿ ಠೇವಣಿ ಕಳೆದುಕೊಳ್ಳುತ್ತಿದೆ ಎಂದರೆ ಕಾಂಗ್ರೆಸ್‌ಪಕ್ಷದ ಬಾಗಿಲು ಬಂದ್‌ಮಾಡುವುದೇ ಸೂಕ್ತವಾಗಿದೆ ಎಂದು ಬಿಜೆಪಿ ಸಲಹೆ ನೀಡಿದೆ.
ದಿನ ಬೆಳಗಾದರೆ ಜಾತಿ, ದಕ್ಷಿಣ – ಉತ್ತರ, ಸಂವಿಧಾನ, ತೆರಿಗೆ ಎಂದು ಬೊಬ್ಬೆ ಹಾಕುವ ರಾಹುಲ್ ಗಾಂಧಿ ಅವರಿಗೆ ಇದಕ್ಕಿಂತ ಮುಖಭಂಗ ಬೇರಾವುದೂ ಇಲ್ಲ, ಸಕ್ರಿಯ ರಾಜಕಾರಣಕ್ಕೆ ರಾಜೀನಾಮೆ ನೀಡುವುದೇ ಒಳಿತು ಎಂದು ಬಿಜೆಪಿ ತಾಕೀತು ಮಾಡಿದೆ.