ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ದೇಶದ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಚುನಾವಣೆ ಬಹಳಷ್ಟು ಪ್ರಾಮುಖ್ಯತೆ ಪಡೆದಿರುವ ವಿಚಾರ. ಯಾವುದೇ ಚುನಾವಣೆ ಇರಲಿ ಮತದಾನ ಮಾಡುವುದು ಮತದಾರರ ಜಾಗೃತಿ ಕರ್ತವ್ಯ. ಸ್ಥಳೀಯ ಸಂಸ್ಥೆ, ವಿಧಾನಸಭೆ, ಲೋಕಸಭೆ, ಸಹಕಾರ ಸಂಘ ಸಂಸ್ಥೆಗಳ ಯಾವುದೇ ಚುನಾವಣೆ ಇರಲಿ ನಮ್ಮ ಮತ ನಮ್ಮ ಹಕ್ಕು, ನಮ್ಮ ಭವಿಷ್ಯದ ಮತವನ್ನು ಚಲಾಯಿಸಲು
ಯಾವುದೇ ರೀತಿಯ ಹಣಕಾಸಿನ ಆಮಿಷಗಳಿಗೆ ಒಳಗಾಗದೆ ದೇಶದ ಭವಿಷ್ಯದ ಜೊತೆಜೊತೆಗೆ ನಮ್ಮ ಪ್ರಾಂತ್ಯದ ಒಳಿತಿಗಾಗಿ ಚುನಾವಣೆಯಲ್ಲಿ ನಿಂತಿರುವ ಉತ್ತಮ ವ್ಯಕ್ತಿತ್ವವನ್ನು ಆಯ್ಕೆ ಮಾಡೋಣಾ. ನಾಡಿನ ಜನತೆಯಾದ ನಾವೆಲ್ಲರು ಜವಾಬ್ದಾರಿಯುತವಾಗಿ ಮತ ಚಲಾಯಿಸೋಣ.
ಪ್ರಜಾಪ್ರಭುತ್ವದ ರಾಷ್ಟ್ರೀಯ ಮತದಾರರ ದಿನವಾದ ಇಂದು ಮತದಾನದ ಪ್ರಾಮುಖ್ಯತೆ ಬಗ್ಗೆ ನನಗೆ ತಿಳಿದಷ್ಟು ವಿಚಾರದಲ್ಲಿ ಸೂಕ್ಷ್ಮವಾಗಿ ವಿವರಿಸಿರುವೆ. ಈ ವಿಚಾರವನ್ನು ಗಮನಿಸಿದ ಎಲ್ಲರು ಇನ್ನು ಕೆಲವೇ ತಿಂಗಳಲ್ಲಿ ಬರುವಂತಹ ಗ್ರಾಮೀಣ ಪ್ರಾಂತ್ಯದ ಸ್ಥಳೀಯ ಸಂಸ್ಥೆಯ ಚುನಾವಣೆಯಾದ
ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯತ್ ಚುನಾವಣೆ ದೃಷ್ಟಿಯಿಂದ ಗ್ರಾಮೀಣ ಜನತೆಗೆ ಮತದಾನ ಮಾಡುವ ವಿಚಾರದಲ್ಲಿ ಮನವರಿಕೆ ಮಾಡಿಕೊಡಲು ಒಬ್ಬರಿಂದ ಒಬ್ಬರಿಗೆ ಈ ಸುದ್ದಿ ಹಂಚಿಕೆ ಮಾಡೋಣ. ಇದು ದೇಶ ಸೇವೆಯ ಕೆಲಸ ಜವಾಬ್ದಾರಿ ವಹಿಸೋಣ. ಪ್ರಜಾಪ್ರಭುತ್ವದ ಮತದಾನ ಬದುಕಿನ ಅಸ್ಥಿತ್ವ ಎಂದು ರಘು ಗೌಡ ತಿಳಿಸಿದ್ದಾರೆ.