ವಿಎಸ್ಎಸ್ಎನ್ ನೂತನ ಅಧ್ಯಕ್ಷರಾಗಿ ನಂಜೇಗೌಡ, ಉಪಾಧ್ಯಕ್ಷರಾಗಿ ಅನುಸೂಯಮ್ಮ ಅವಿರೋಧ ಆಯ್ಕೆ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ಹೋಬಳಿ ಹಾಡೋನಹಳ್ಳಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ನಂಜೇಗೌಡ, ಉಪಾಧ್ಯಕ್ಷರಾಗಿ ಅನುಸೂಯಮ್ಮ ಶೆಟ್ಟಪ್ಪ ಅವಿರೋಧವಾಗಿ ಆಯ್ಕೆಯಾದರು.

- Advertisement - 

ಇನ್ನು ಅಧ್ಯಕ್ಷ ಸ್ಥಾನಕ್ಕೆ ನಂಜೇಗೌಡ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಅನುಸೂಯಮ್ಮ ಶೆಟ್ಟಪ್ಪ ಅವರು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿ ನಾಗವೇಣಿ ಅವಿರೋಧವಾಗಿ ಆಯ್ಕೆಮಾಡಿದರು.

- Advertisement - 

ಅವಿರೋಧವಾಗಿ ಆಯ್ಕೆಯಾದ ಅಧ್ಯಕ್ಷರು ಮತ್ತು ಉಪಾಧ್ಯಕ್ಷರಿಗೆ ಮುಖಂಡರು ಹೂವಿನ ಹಾರಗಳನ್ನು ಹಾಕುವುದರ ಮೂಲಕ ಸಿಹಿಹಂಚಿ ಸಂಭ್ರಮಿಸಿದರು.

ನೂತನ ಅಧ್ಯಕ್ಷರಾದ ನಂಜೇಗೌಡ ಮಾತನಾಡಿ, ಎಲ್ಲಾ ಸದಸ್ಯರ ಬೆಂಬಲವನ್ನು ತೆಗೆದುಕೊಂಡು ನಿರ್ಭೀತಿಯಿಂದ ಕೆಲಸ ಮಾಡುತ್ತೇನೆ. ಅದರಲ್ಲೂ ಮುಖ್ಯವಾಗಿ ಎಪಿಎಂಸಿ ವತಿಯಿಂದ ನೀಡಲಾಗುತ್ತಿರುವ ಆಹಾರಧಾನ್ಯವನ್ನು ನಮ್ಮ ಸಂಘದ ವತಿಯಿಂದಲೇ ಕೊಡಲು ತೀರ್ಮಾನ ಮಾಡಿಕೊಂಡಿದ್ದೇವೆ. ನಮ್ಮ ಸಂಘದ ವತಿಯಿಂದ ಎಲ್ಲಾ ರೈತರಿಗೆ ಸಾಲ ಸೌಲಭ್ಯವನ್ನು ನೀಡಲಾಗುತ್ತಿದೆ. ಇನ್ನು ಹೆಚ್ಚಾಗಿ ಸಾಲವನ್ನು ಕೊಡಲು ಶ್ರಮಿಸುತ್ತೇನೆ. ಎಲ್ಲಾ ಸದಸ್ಯರು ಒಮ್ಮತದಿಂದ ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ ಅವರೆಲ್ಲರಿಗೂ ನಾನು ಚಿರ ಋಣಿಯಾಗಿರುತ್ತೇನೆ ಎಂದರು.

- Advertisement - 

ಕಾರ್ಯಕ್ರಮದಲ್ಲಿ ಘಾಟಿ ದೇವಾಲಯದ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಜಿಎನ್ ರಂಗಪ್ಪ, ಕೆಪಿಸಿಸಿ ಸದಸ್ಯ ಎಸ್. ಆರ್. ಮುನಿರಾಜು, ಕಾಂಗ್ರೆಸ್ ಪ್ರಚಾರ ಸಮಿತಿ ಅದ್ಯಕ್ಷ ಆಂಜನಪ್ಪ, ಹಾಡೋನಹಳ್ಳಿ ವಿವಿಧೊದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನಿರ್ದೇಶಕರಾದ ಜಿ. ಕೆ. ಶ್ರೀಧರ್,ಎಂ. ಮುನೇಗೌಡ,ಹೆಚ್. ಎಸ್. ಪಿಳ್ಳಪ್ಪ,ಆರ್. ಹನುಮಂತರಾಯಪ್ಪ, ಎನ್. ಮುನಿರಾಜು, ಎನ್. ವಿಜಯಕುಮಾರ್, ಬಿ.ವೆಂಕಟೇಶ್, ಗಂಗಲಕ್ಷಮ್ಮ, ರಾಮನಾಯಕ್,ಲೋಕನಾಯಕ್, ಬ್ಯಾಂಕ್ ಸಿಬ್ಬಂದಿ ಟಿ. ಎನ್.ರಾಘವೇಂದ್ರ, ಕಾರ್ಯನಿರ್ವಾಹಕ ಅಧಿಕಾರಿ ಸಂಜಯ್, ಚುನಾವಣೆ ಅಧಿಕಾರಿ ನಾಗವೇಣಿ ಹಾಜರಿದ್ದರು.

 

Share This Article
error: Content is protected !!
";