ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬಸವಣ್ಣನವರ ಕರ್ಮ ಭೂಮಿ ಬೀದರ್ ಜಿಲ್ಲೆಯನ್ನು ಬಿಡದೆ ವಕ್ಫ್ ಬೋರ್ಡ್ ಕಬಳಿಕೆ ಮಾಡುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ದೂರಿದ್ದಾರೆ.
ನಾಡ ದ್ರೋಹಿ ಕಾಂಗ್ರೆಸ್ ಸರ್ಕಾರದ ಬೆಂಬಲದಿಂದ ವಕ್ಫ್ ಬೋರ್ಡ್, ಐತಿಹಾಸಿಕ ಸ್ಮಾರಕಗಳು, ಪ್ರವಾಸಿ ತಾಣಗಳು, ಗ್ರಾಮಕ್ಕೆ ಗ್ರಾಮ, ಸರ್ಕಾರಿ ಆಸ್ಪತ್ರೆ, ಸಹಸ್ರಾರು ರೈತರ ಫಲವತ್ತಾದ ಕೃಷಿ ಭೂಮಿ ಈಗ ವಕ್ಫ್ ಆಸ್ತಿಯಾಗಿ ಪಹಣಿಯಲ್ಲಿ ಬದಲಾಗಿದೆ.
ಬೀದರ್ ಜಿಲ್ಲೆಯಲ್ಲಿ ಒಟ್ಟು 13,295 ಎಕರೆ ಭೂಮಿ ವಕ್ಫ್ ಆಸ್ತಿಯಾಗಿದೆ. ಜಿಲ್ಲೆಯಲ್ಲಿ 2,747 ವಕ್ಫ್ ಸಂಸ್ಥೆಗಳು ಹಾಗೂ 3,822 ವಕ್ಫ್ ಆಸ್ತಿಗಳ ಸಂಖ್ಯೆ ಸೇರಿ ಒಟ್ಟು 13,295 ಎಕರೆ ಜಮೀನು ವಕ್ಫ್ ಆಸ್ತಿಯಾಗಿದೆ.
ಈಗಾಗಲೇ ಜಿಲ್ಲೆಯಲ್ಲಿ 217 ಎಕರೆ ವಕ್ಫ್ ಬೋರ್ಡ್ ತನ್ನ ಸುಪರ್ದಿಗೆ ತೆಗೆದುಕೊಂಡು ಬೇಲಿ ಹಾಕಿದೆ ಎಂದು ಅವರು ದೂರಿದ್ದಾರೆ.
ದುಷ್ಟ ಭ್ರಷ್ಟ ಸಿದ್ದರಾಮಯ್ಯ ಸರ್ಕಾರದ ಚಳಿ ಬಿಡಿಸದೆ ಹೋದರೆ, ಕನ್ನಡಿಗರು ಕರ್ನಾಟಕ ಬಿಟ್ಟು ಓಡಿ ಹೋಗಬೇಕಾದ ಪರಿಸ್ಥಿತಿ ಸದ್ಯದಲ್ಲೇ ಎದುರಾಗಲಿದೆ ಎಂದು ಅಶೋಕ್ ಎಚ್ಚರಿಸಿದ್ದಾರೆ.