ವಕ್ಫ್ ತಿದ್ದುಪಡಿ ಕಾಯ್ದೆ ಅಂಗೀಕಾರ, ಪ್ರಧಾನಿ ಜಾಣ್ಮೆಗೆ ಮೆಚ್ಚುಗೆ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾಂಗ್ರೆಸ್ ಹಾಗೂ ಇತರ (
INDIA) ವಿರೋಧ ಪಕ್ಷಗಳ ಪ್ರಬಲ ವಿರೋಧವನ್ನೂ ಲೆಕ್ಕಿಸದೆ ವಕ್ಫ್ ತಿದ್ದುಪಡಿ UMEED ಕಾಯ್ದೆ ಅಂಗೀಕಾರವಾಗುವಂತೆ ರಾಜಕೀಯ ಜಾಣ್ಮೆ ಹಾಗೂ ದಿಟ್ಟತೆ ಪ್ರದರ್ಶಿಸಿದ ಹೆಮ್ಮೆಯ ಪ್ರಧಾನಿ  ನರೇಂದ್ರ ಮೋದಿ ಅವರ ನೇತೃತ್ವದ ಎನ್.ಡಿ.ಎ ಸರ್ಕಾರವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಹೃತ್ಪೂರ್ವಕವಾಗಿ ಅಭಿನಂದಿಸಿದ್ದಾರೆ.

ಭಾರತದ ಮೇಲೆ ದಂಡೆತ್ತಿ ಬಂದು ಆಳ್ವಿಕೆ ನಡೆಸಿದ ಮೊಘಲರು ಭಾರತದ ಅನೇಕ ದೇಗುಲಗಳನ್ನು ದ್ವಂಸಗೊಳಿಸಿ, ಭಾರತೀಯ ಸಂಸ್ಕೃತಿಯನ್ನು ಮೂಲೋತ್ಪಾಟನೆ ಮಾಡಲು ನಿರಂತರ ಪ್ರಯತ್ನಿಸಿದರು.

ಇದರ ಮುಂದಿನ ಭಾಗವಾಗಿ WAQF ಹೆಸರಿನಲ್ಲಿ ಭೂಮಿ ಹಾಗೂ ಸ್ಥಿರಾಸ್ತಿಗಳನ್ನು ಆಪೋಶನ ಮಾಡಿಕೊಳ್ಳುವ ಕಾಯ್ದೆಯನ್ನು ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಜಾರಿಗೆ ತರಲಾಯಿತು.

ಇದನ್ನು ವ್ಯವಸ್ಥಿತವಾಗಿ ಬಳಸಿಕೊಂಡು ವಕ್ಫ್ ಹೆಸರಿನಲ್ಲಿ ರೈತರ ಭೂಮಿ, ಮಠಮಾನ್ಯಗಳ ಆಸ್ತಿ- ಪಾಸ್ತಿಗಳನ್ನು ವಶಪಡಿಸಿಕೊಳ್ಳುವ ಹುನ್ನಾರ ವ್ಯವಸ್ಥಿತವಾಗಿ ನಡೆದಿದೆ. ಇದರ ಜತೆಗೆ ವಕ್ಫ್ ಹೆಸರಿನ ಆಸ್ತಿಗಳನ್ನು ಕಾಂಗ್ರೆಸ್ ಬೆಂಬಲಿತ ಶಕ್ತಿಗಳು ವ್ಯವಸ್ಥಿತವಾಗಿ ನುಂಗಿಹಾಕಿವೆ.

ತಿದ್ದುಪಡಿಯ ಅನ್ವಯ ಕೇಂದ್ರ ವಕ್ಫ್ ಕಮಿಟಿಯಲ್ಲಿ ಓರ್ವ ಕೇಂದ್ರ ಸಚಿವರು, 4 ಮುಸ್ಲಿಮೇತರರು, 3 ಸಂಸದರು, 10 ಮುಸ್ಲಿಂ ಸದಸ್ಯರು, 2 ನಿವೃತ್ತ ಜಡ್ಜ್, 1 ವಕೀಲರು ಹಾಗೂ ರಾಜ್ಯ ವಕ್ಫ್ ಕಮಿಟಿಯಲ್ಲಿ ಓರ್ವ ಅಧ್ಯಕ್ಷರು, ಓರ್ವ ಸಂಸದರು, ಓರ್ವ ಶಾಸಕರು, 2 ಮುಸ್ಲಿಮೇತರರು, 4 ಮುಸ್ಲಿಂ ಸದಸ್ಯರು, ಓರ್ವ ವಕೀಲರು ಹಾಗೂ ಓರ್ವ ಜಂಟಿ ಕಾರ್ಯದರ್ಶಿಗಳು ಇರಲಿದ್ದು ಮೊಟ್ಟ ಮೊದಲ ಬಾರಿಗೆ ಮುಸ್ಲಿಂ ಮಹಿಳೆಯರಿಗೂ ವಕ್ಫ್ ಮಂಡಳಿಯಲ್ಲಿ ಸದಸ್ಯ ಸ್ಥಾನ ನೀಡಿರುವುದು ಹೆಮ್ಮೆಯ ಸಂಗತಿ.

ಅನ್ಯ ಆಸ್ತಿಯ ಮೇಲೆ ಹಕ್ಕು ಸಾಧಿಸುವ ವಕ್ಫ್ ಮಂಡಳಿಯ ಪ್ರವೃತ್ತಿಗೆ ಕಡಿವಾಣ, ಮಹಿಳೆಯರಿಗೂ ವಕ್ಫ್ ಮಂಡಳಿಯಲ್ಲಿ ಪ್ರಾತಿನಿಧ್ಯ, ಮಂಡಳಿಯ ಸದಸ್ಯರಾಗಲು ಮುಸ್ಲಿಂಮೇತರರಿಗೂ ಅವಕಾಶ, ವಕ್ಫ್ ಆಸ್ತಿಗಳ ನಿರ್ವಹಣೆಗೆ ಕೇಂದ್ರೀಕೃತ ಮಂಡಳಿ ರಚನೆ,

ಮಹಾಲೇಖಪಾಲರ ಮೂಲಕ ವಕ್ಫ್ ಮಂಡಳಿಯ ಲೆಕ್ಕ ಪರಿಶೋಧನೆ ಸೇರಿದಂತೆ ಪಾರದರ್ಶಕತೆಯನ್ನು ಕಾಯ್ದು ಕೊಳ್ಳಲು ಕಾಯ್ದೆಗೆ ತಿದ್ದುಪಡಿ ತಂದು ಐತಿಹಾಸಿಕ ನಿರ್ಧಾರ ಕೈಗೊಂಡ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಎನ್.ಡಿ.ಎ ಸರ್ಕಾರ ಭಾರತವನ್ನು ಸದೃಗೊಳಿಸಲು ಇಡುತ್ತಿರುವ ದಿಟ್ಟ ಹೆಜ್ಜೆಗಳಿಗೆ ಶತಕೋಟಿ ಭಾರತೀಯರು ಬೆಂಬಲವಾಗಿ ನಿಂತಿದ್ದಾರೆ. ಬರುವ ದಿನಗಳಲ್ಲಿ ಭಾರತ ವಿಜೃಂಭಿಸಲಿದೆ, ಭಾರತೀಯತೆ ತಲೆಯೆತ್ತಿ ನಿಲ್ಲಲಿದೆ ಎಂದು ವಿಜಯೇಂದ್ರ ತಿಳಿಸಿದ್ದಾರೆ.

 

Share This Article
error: Content is protected !!
";