ವಕ್ಫ್ ಬೋರ್ಡ್‌ಅಕ್ರಮ, ಅನ್ನದಾತರ ಹಿತ ಕಾಯಲು ಬಿಜೆಪಿ ಬದ್ಧ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅನ್ನದಾತರ ಹಿತ ಕಾಯಲು ಬಿಜೆಪಿ ಸದಾ ಬದ್ಧವಾಗಿದೆ. ರೈತ ಬಾಂಧವರೇ ಅಂಜದಿರಿ
, ಅಳುಕದಿರಿ, ರೈತ ವಿರೋಧಿ ಕಾಂಗ್ರೆಸ್ ಸರ್ಕಾರ ಹಾಗೂ ವಕ್ಫ್ ಬೋರ್ಡ್‌ನ ಅಕ್ರಮದ ವಿರುದ್ಧ  ಹೋರಾಡಲು ಕರ್ನಾಟಕ ಬಿಜೆಪಿ  ಸನ್ನದ್ಧವಾಗಿದೆ ಎಂದು ತಿಳಿಸಿದೆ.

ಕಾಂಗ್ರೆಸ್ ಸುಳ್ಳಿನ ಪರದೆ ಸರಿಸಿದ ಲೋಕಾಯುಕ್ತ ವರದಿ!
ಬಿಜೆಪಿ ಸರ್ಕಾರದ ಅವಧಿಯಲ್ಲಿ ಸರ್ಕಾರದ ಮೇಲೆ ಕಾಂಗ್ರೆಸ್ ಪಕ್ಷ ಹೊರಿಸಲಾದ 40% ಆರೋಪ ಸುಳ್ಳು ಎಂದು ಲೋಕಾಯುಕ್ತ ತನಿಖೆ ಸ್ಪಷ್ಟಪಡಿಸಿದೆ.

ರಾಹುಲ್, ಸೋನಿಯಾ, ಖರ್ಗೆ ಆದಿಯಾಗಿ ಸಿದ್ದರಾಮಯ್ಯ, ಡಿಕೆಶಿ ಸೇರಿದಂತೆ ಕಾಂಗ್ರೆಸ್ಸಿಗೆ ಕಾಂಗ್ರೆಸ್ಸೇ ಬಿಜೆಪಿ ಮೇಲೆ ಸುಳ್ಳು ಭ್ರಷ್ಟಾಚಾರ ಆರೋಪ ಹೊರಿಸಿತ್ತು.

ಬಿಜೆಪಿ ಮೇಲೆ ಅಂದು ಮಾಡಿದ್ದ ಕಮಿಷನ್ ಆರೋಪವು ಚುನಾವಣೆಗೆ ಸೃಷ್ಟಿಸಿದ್ದ ಟೂಲ್ ಕಿಟ್. ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಅಂಬಿಕಾಪತಿ ಅವರು ಬಿಬಿಎಂಪಿಗೆ ಸಂಬಂಧಿಸಿದಂತೆ ಮಾಡಿದ್ದ 40 ಪರ್ಸೆಂಟ್ ಕಮಿಷನ್ ಆರೋಪಗಳು ಸುಳ್ಳೆಂದು ಲೋಕಾಯುಕ್ತ ತನಿಖೆಯಿಂದ ಈಗ ಬಹಿರಂಗವಾಗಿದೆ.

ಕಾಂಗ್ರೆಸ್ ಬೀದಿ ಬೀದಿಯಲ್ಲೂ Pay Cm ಎಂಬ ಬೀದಿ ನಾಟಕ ನಡೆಸಿತ್ತು. ಚುನಾವಣೆಯ ವೇಳೆ 40% ಕಮಿಷನ್ ಆರೋಪವೇ ಕಾಂಗ್ರೆಸ್ಸಿನ ಚುನಾವಣಾ ವಸ್ತುವಾಗಿತ್ತು. ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಅಂಬಿಕಾಪತಿ ಬಿಬಿಎಂಪಿ ಪೂರ್ವ ವಿಭಾಗದಲ್ಲಿ ಕಳೆದ 6 ವರ್ಷಗಳಲ್ಲಿ ಆಟದ ಮೈದಾನಕ್ಕೆ ಸಂಬಂಧಿಸಿದ ಯಾವುದೇ ಗುತ್ತಿಗೆ ಪಡೆಯದೆ ಇರುವುದು ತನಿಖೆಯಲ್ಲಿ ಕಂಡುಬಂದಿದೆ.

ಕನ್ನಡಿಗರ ವಂಚಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಅಧಿಕಾರದಲ್ಲಿ ಮುಂದುವರಿಯುವ ಯೋಗ್ಯತೆ ಹೊಂದಿಲ್ಲ.‌ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಅವರು ಈ ಕೂಡಲೇ ರಾಜ್ಯದ ಜನತೆಯ ಕ್ಷಮೆ ಯಾಚಿಸಬೇಕು ಎಂದು ಆರ್. ಅಶೋಕ್ ಮತ್ತು ಬಿಜೆಪಿ ಆಗ್ರಹ ಮಾಡಿದೆ.

 

- Advertisement -  - Advertisement - 
Share This Article
error: Content is protected !!
";