ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ತಲೆಮಾರುಗಳಿಂದಲೂ ಬಾಳಿ ಬದುಕಿದ ನಮ್ಮ ಮನೆಯನ್ನು ಇನ್ನೊಬ್ಬರು ಬಂದು ತಮ್ಮದು ಎನ್ನುತ್ತಿದ್ದಾರೆ. ನಮ್ಮ ಆಸ್ತಿ ಪಾಸ್ತಿ ಉಳಿಸಿಕೊಳ್ಳಲು ಹೋರಾಟ ಅನಿವಾರ್ಯ ಎಲ್ಲರೂ ಒಂದಾಗಿ ಭ್ರಷ್ಟ ರಾಜ್ಯ ಕಾಂಗ್ರೆಸ್ ಸರ್ಕಾರದ ಕಣ್ತೆರೆಸುವ ಕೆಲಸ ಮಾಡಬೇಕಿದೆ ಎಂದು ನಾಡಿನ ಮಠಾಧೀಶರು ವಕ್ಫ್ ಬೋರ್ಡ್ ವಿರುದ್ಧ ಮಹಾಯುದ್ಧ ಸಾರಿದ್ದಾರೆ ಎಂದು ಬಿಜೆಪಿ ಹೇಳಿದೆ.
ರೈತರು, ಬಡವರು, ಶೋಷಿತರು ಎನ್ನದೇ ಎಲ್ಲರ ಆಸ್ತಿಗಳ ಮೇಲೆ ಭ್ರಷ್ಟ ಸಿದ್ದರಾಮಯ್ಯ ಸರ್ಕಾರದ ವಕ್ರದೃಷ್ಟಿ ಬಿದ್ದಿದೆ. ಸರ್ಕಾರಕ್ಕೆ ತಕ್ಕ ಪಾಠ ಕಲಿಸುವ ಸಮಯ ಬಂದಿದೆ ಎಂದು ಬಿಜೆಪಿ ಹೇಳಿದೆ.