ನಗರದ ಸ್ವಚ್ಛತೆಗೆ ಆದ್ಯತೆ ನೀಡಿ ಆರೋಗ್ಯ ಕಾಪಾಡಿಕೊಳ್ಳಬೇಕು-ವಾಸೀಂ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ನಗರಸಭೆ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ನಗರ ಸಭೆ ಸಭಾಂಗಣದಲ್ಲಿ ಶುಕ್ರವಾರ ನಾರಿಯ ನಡೆ ಸ್ವಚ್ಛತೆಯ ಕಡೆಗೆ ಮತ್ತು ಪೌರಕಾರ್ಮಿಕರಿಗೆ ಹಾಗೂ ಕಮ್ಯೂನಿಟಿ ಮೊಬೈಲ್ಸರ್ ಗಳಿಗೆ ಸನ್ಮಾನ ಮತ್ತು ಆರೋಗ್ಯ ತಪಾಸಣೆ ಹಾಗೂ ಸ್ವಚ್ಛತೆ ಬಗ್ಗೆ ಅರಿವು ನೈರ್ಮಲ್ಯ ಮತ್ತು ತ್ಯಾಜ್ಯ ನಿರ್ವಹಣೆಯಲ್ಲಿ ತೊಡಗಿರುವ ಮಹಿಳೆ ಪೌರಕಾರ್ಮಿಕರು  ಸ್ವಸಹಾಯ ಗುಂಪುಗಳ ತರಬೇತಿ ಕಾರ್ಯಗಾರ ಹಮ್ಮಿಕೊಳ್ಳಲಾಯಿತು.

ನಗರ ಸಭೆ ಪೌರಾಯುಕ್ತ ಎ.ವಾಸೀಂ ಮಾತನಾಡಿ ಮಹಿಳೆಯರು ಎಲ್ಲ ರಂಗದಲ್ಲೂ ತಮ್ಮ ಸಾಮರ್ಥ್ಯ ತೋರುತ್ತಿದ್ದಾರೆ ಎಂದು ತಿಳಿಸಿದರು.

- Advertisement - 

ಮಹಿಳೆಯರು ನಗರಸಭೆ ವಾಹನಗಳಿಗೆ ಕಸ ನೀಡುವ ಸಂದರ್ಭದಲ್ಲೇ ಹಸಿ ಮತ್ತು ಒಣ ಕಸ ವಿಂಗಡಿಸಿ ನೀಡಬೇಕು. ಅಲ್ಲದೆ ರಸ್ತೆಗೆ ಕಸ ಹಾಕದಂತೆ ಜಾಗೃತಿ ಮೂಡಿಸಬೇಕು ಎಂದು ಕಿವಿ ಮಾತು ಹೇಳಿದರು.
ನಗರದ ಅಂಗಡಿ ಮಾಲೀಕರಿಗೆ ಹಾಗೂ ಸಾರ್ವಜನಿಕರಿಗೆ ರಸ್ತೆ ಅಕ್ಕ ಪಕ್ಕದಲ್ಲಿ ಕಸ ಹಾಕಬಾರದು ಎಂದು ಪೌರಕಾರ್ಮಿಕರು ಅರಿವು ಮೂಡಿಸಬೇಕು ಎಂದು ವಾಸೀಂ ತಿಳಿಸಿದರು.

ಕಸ ಸಂಗ್ರಹಿಸಿ ನಗರಸಭೆ ಗಾಡಿಗಳಿಗೆ ಹಾಕಬೇಕು. ಎಲ್ಲಂದರೆ ಅಲ್ಲೇ ಕಸ ಹಾಕಿದರೆ ಹಲವಾರು ರೋಗಗಳು ಹರಡುತ್ತವೆ. ಸಾರ್ವಜನಿಕರು ಇದರ ಬಗ್ಗೆ ಅರಿವು ಹೊಂದಬೇಕು. ನಗರವನ್ನು ಸ್ವಚ್ಛವಾಗಿಡಲು ಸಾರ್ವಜನಿಕರ ಸಹಕಾರ ಅಗತ್ಯ ಎಂದು ವಾಸೀಂ ತಿಳಿಸಿದರು.

- Advertisement - 

ಹಿರಿಯೂರು ನಗರದ ಸ್ವಚ್ಛತೆ ನೋಡಿ ಬೇರೆ ತಾಲೂಕು ಜಿಲ್ಲೆ ಜನತೆ ಮೆಚ್ಚಿಗೆ ವ್ಯಕ್ತಪಡಿಸುವ ಮಟ್ಟಿಗೆ ಸ್ವಚ್ಛತೆ ಕಾಪಾಡಿ ಆರೋಗ್ಯವಾಗಿರಲು ಪ್ರಯತ್ನಿಸಬೇಕು ಎಂದು ಪೌರಾಯುಕ್ತ ವಾಸೀಂ ಹೇಳಿದರು.

 ಈ ಕಾರ್ಯಕ್ರಮದಲ್ಲಿ ನಗರ ಸಭೆಯ ಆರೋಗ್ಯ ನಿರೀಕ್ಷಕರಾದ ಸುನಿಲ್ ಕುಮಾರ್, ಸಂಧ್ಯಾ, ಅಶೋಕ್ ಕುಮಾರ್, ಮಹಾಲಿಂಗರಾಜು, ನಯಾಜ್ ಶರೀಫ್ ಕಚೇರಿ ಸಿಬ್ಬಂದಿ ವರ್ಗದವರು ಮಹಿಳಾ ಸ್ವಸಹಾಯ ಸಂಘದವರು ಪೌರಕಾರ್ಮಿಕರು ಇದ್ದರು.

 

Share This Article
error: Content is protected !!
";