ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
“ಕಳ್ಳನಿಗೊಂದು ಪಿಳ್ಳೆ ನೆವ” ಎಂಬ ಗಾದೆಮಾತಿನಂತೆ ಗ್ಯಾರಂಟಿ ಹೆಸರಲ್ಲಿ ಭ್ರಷ್ಟ ಕರ್ನಾಟಕ ಕಾಂಗ್ರೆಸ್ ಸರ್ಕಾರ ನಿತ್ಯ ರಾಜ್ಯದ ಜನರನ್ನು ಹಗಲು ದರೋಡೆ ಮಾಡುತ್ತಿದೆ ಎಂದು ಜೆಡಿಎಸ್ ಗಂಭೀರ ಆರೋಪ ಮಾಡಿದೆ.
ಗ್ಯಾರಂಟಿಯಿಂದ ಆಗುತ್ತಿರುವ ಆರ್ಥಿಕ ಹೊರೆ ನಿಭಾಯಿಸಲು ಬೆಲೆ ಏರಿಕೆ ಅನಿವಾರ್ಯ ಎಂದು ಕಾಂಗ್ರೆಸ್ ಶಾಸಕ ಸುಬ್ಬಾರೆಡ್ಡಿ ಭಂಡತನದ ಸಮರ್ಥನೆ ಮಾಡಿಕೊಂಡಿದ್ದಾರೆ.
ಹಾಲು, ವಿದ್ಯುತ್, ನೀರು, ಡೀಸೆಲ್, ಬಸ್, ಮೆಟ್ರೋ ದರ ಸೇರಿದಂತೆ ಎಲ್ಲ ವಸ್ತುಗಳ ಬೆಲೆ ಹೆಚ್ಚಳ ಮಾಡಿ ಜನರ ಸುಲಿಗೆ ಮಾಡಲಾಗುತ್ತಿದೆ.
ದುಷ್ಟ ಸಿದ್ದರಾಮಯ್ಯ ಸರ್ಕಾರ, ಹೀಗೆ ಪ್ರತಿ ನಿತ್ಯ ಒಂದಲ್ಲ ಒಂದು ಅಗತ್ಯ ವಸ್ತುಗಳ ಬೆಲೆ ಏರಿಸುತ್ತಿದ್ದರೆ, ಜನಸಾಮಾನ್ಯರು ಮ್ಯಾಜಿಕ್ ಮಾಡಿ ಹಣ ಹೊಂದಿಸಲು ಸಾಧ್ಯವೇ ? ಜನವಿರೋಧಿ ಕಾಂಗ್ರೆಸ್‌ಸರ್ಕಾರಕ್ಕೆ ಧಿಕ್ಕಾರ ! ಸಾಕಪ್ಪ ಸಾಕು, ಕಾಂಗ್ರೆಸ್‌ಸರ್ಕಾರ.