ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಭಾರತದ ಪ್ರಜೆಗಳಾದ ನಾವು
ಮಂದಿರ ಮಸೀದಿ ಚರ್ಚ್ ಬಸದಿಗೆ ಒಟ್ಟೊಟ್ಟಿಗೆ ಹೋಗೋಣ
ಭಾರತದ ಪ್ರಜೆಗಳಾದ ನಾವು
ಕೆರೆ ಹಳ್ಳ ಕೊಳ್ಳ ನದಿ ನಳ ಸಮುದ್ರ ಝರಿ ಜಲಪಾತದ
ನೀರುಒಟ್ಟೊಟ್ಟಿಗೆ ಕುಡಿದು ಕುಣಿದು ಕುಪ್ಪಳಿಸೋಣ
ಭಾರತದ ಪ್ರಜೆಗಳಾದ ನಾವು
ಮದುವೆ ಹಬ್ಬ ಜಾತ್ರೆ ಹೋಟೆಲ್ ಸಹಬೋಜನವ
ಒಟ್ಟೊಟ್ಟಿಗೆ ಮಾಡೋಣ
ಭಾರತದ ಪ್ರಜೆಗಳಾದ ನಾವು
ಜಾತಿ ಧರ್ಮ ಲಿಂಗ ವರ್ಗ ವರ್ಣ ಬಡವ ಶ್ರೀಮಂತ
ಅಸಮಾನತೆ ತೊಡೆದು
ಸಮಾನತೆಯ ಹೆಜ್ಜೆ ಹಾಕೋಣ
ಭಾರತದ ಪ್ರಜೆಗಳಾದ ನಾವು
ಕಟಿಂಗ್ ಶಾಪ್ ಇಸ್ತ್ರಿ ಅಂಗಡಿ ಮೈಲಿಗೆ ಮಲಿನ ತೊಳೆಯೋಣ
ಭಾರತದ ಪ್ರಜೆಗಳಾದ ನಾವು
ಸ್ವಾತಂತ್ರ್ಯ ಸಮಾನತೆ ಬ್ರಾತೃತ್ವದ ನಾಡಕಟ್ಟೋಣ
ಕವಿತೆ-ಡಾ.ತಿಪ್ಪೇಸ್ವಾಮಿ ಕೆರೆಯಾಗಳಹಳ್ಳಿ, ಕನ್ನಡ ಉಪನ್ಯಾಸಕರು.

