ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ವೀರಶೈವ-ಲಿಂಗಾಯತರು ಮತ್ತು ಒಕ್ಕಲಿಗ ಸಮಾಜದ ನಾಯಕರು ಜಾತಿ ಮರು ಸಮೀಕ್ಷೆ ಕುರಿತ ರಾಜ್ಯ ಸರ್ಕಾರದ ನಿರ್ಧಾರವವನ್ನು ಸ್ವಾಗತಿಸಿದ್ದಾರೆ.
ಹಳೆಯ ವರದಿಯನ್ನು ರದ್ದುಗೊಳಿಸಿ ಹೊಸ ಸಮೀಕ್ಷೆಗೆ ಆದೇಶಿಸುವ ಕಾಂಗ್ರೆಸ್ ನಾಯಕತ್ವದ ನಿರ್ಧಾರವನ್ನು ಶ್ಲಾಘಿಸಿದ್ದಾರೆ.
ಮೀಸಲಾತಿ ವಿಚಾರಕ್ಕೆ ನಮ್ಮ ವಿರೋಧವಿಲ್ಲ. ಆದರೆ, ವೈಜ್ಞಾನಿಕ ಅಧ್ಯಯನಕ್ಕೆ ಒತ್ತಾಯಿಸುತ್ತಿದ್ದೆವು ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಹೇಳಿದೆ.
ನಮ್ಮ ಮುಂದಿನ ನಡೆ ಕುರಿತು ಜೂನ್ 12 ಅಥವಾ 13 ರಂದು ಸಭೆ ನಡೆಸಲಾಗುವುದು ಎಂದು ಭಾರತ ವೀರಶೈವ ಮಹಾಸಭಾ ಕಾರ್ಯದರ್ಶಿ ರೇಣುಕಾ ಪ್ರಸನ್ನ ಅವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.
ರಾಜ್ಯ ಒಕ್ಕಲಿಗರ ಮೀಸಲಾತಿ ಸಮಿತಿಯ ಜಿ.ಎನ್. ಶ್ರೀಕಂಠಯ್ಯ ಮತ್ತು ಇತರರು ಕೂಡ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದಾರೆ.
ಒಕ್ಕಲಿಗ ಕ್ರಿಯಾ ಸಮಿತಿ ಅಧ್ಯಕ್ಷ ಕೆ.ಜಿ. ಕುಮಾರ್ ಅವರು ಮಾತನಾಡಿ, ಕೊನೆಗೂ ಸಮುದಾಯಕ್ಕೆ ನ್ಯಾಯ ಸಿಕ್ಕಿಗೆ ಎಂದು ಹೇಳಿದರು.
ರಾಜ್ಯ ಸರ್ಕಾರ ಅನುಷ್ಠಾನ ಮಾಡಲು ಉದ್ದೇಶಿಸಿದ್ದ ಜಾತಿಗಣತಿ 10 ವರ್ಷಗಳ ಹಳೆಯದು. ಇದನ್ನ ರದ್ದು ಮಾಡಿ ಹೊಸದಾಗಿ ಸಮೀಕ್ಷೆ ಮಾಡುವಂತೆ ಹೋರಾಟವಾಗಿತ್ತು. ನಮ್ಮ ಕಠಿಣ ಪರಿಶ್ರಮಕ್ಕೆ ಜಯ ಸಿಕ್ಕಿದೆ. “ನಾವು ವೈಜ್ಞಾನಿಕ ಮತ್ತು ಸಮಗ್ರವಾದ ಹೊಸ ಸಮೀಕ್ಷೆಯನ್ನು ಒತ್ತಾಯಿಸಿದ್ದೆವು.
ಇಂದು, ಸಿಎಂ, ಡಿಸಿಎಂ ಮತ್ತು ಕಾಂಗ್ರೆಸ್ ಮಂತ್ರಿಗಳು ಮರು ಸಮೀಕ್ಷೆ ಕುರಿತು ಘೋಷಣೆ ಮಾಡಿದ್ದಾರೆ. ನಮ್ಮೊಂದಿಗೆ ನಿಂತ ನಮ್ಮ ಎಲ್ಲಾ ನಾಯಕರಿಗೆ ಧನ್ಯವಾದ ಹೇಳುತ್ತೇನೆ. ಈ ನಿಟ್ಟಿನಲ್ಲಿ ಮುಂದಿನ ಬುಧವಾರ ಸಭೆ ನಡೆಸುತ್ತೇವೆ. ನಮ್ಮ ಮಹಾನ್ ಕವಿ ಕುವೆಂಪು ಹೇಳಿದಂತೆ ಸರ್ವರಿಗು ಸಮಪಾಲು ಸಿಗಬೇಕು. ನಾವು ಬಯಸುತ್ತಿರುವದಷ್ಟೇ ಎಂದು ತಿಳಿಸಿದ್ದಾರೆ.