ಜೆಸಿಬಿ ಚಾಲಕನ ನಿರ್ಲಕ್ಷ್ಯದಿಂದ ಪ.ಬಂಗಾಳದ ಕಾರ್ಮಿಕ ಸಾವು

khushihost

ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ : ಜೆಸಿಬಿ ವಾಹನ ಚಾಲಕನ ನಿರ್ಲಕ್ಷ್ಯದಿಂದ ಕಾರ್ಮಿಕನೊಬ್ಬ ಜೀವ ಕಳೆದುಕೊಂಡ ಘಟನೆ ನಗರದ ಸೂಳೇಬೈಲಿನ ಇಂದಿರಾನಗರದಲ್ಲಿ ಸಂಭವಿಸಿದೆ. ಪಶ್ಚಿಮ ಬಂಗಾಳದಿಂದ ಬದುಕು ಕಟ್ಟಿಕೊಳ್ಳಲು ಬಂದಿದ್ದ ಅಜಿತ್ ಕುಮ್ರಿ (೪೧) ಅಸು ನೀಗಿದವನು.

ಶಿವಮೊಗ್ಗದ ಚೇತನ್‌ಕುಮಾರ್ ಅವರ ಅಡಿಕೆ ತೋಟ ಮತ್ತು ಅವರ ಪುಷ್ಪ್ಪಾ ಕ್ರಶರ್‌ನಲ್ಲಿ ಪ. ಬಂಗಾಳದಿಂದ ಅಜಿತ್ ಸಹಿತ ಜಿತನ್ ಕುಮ್ರಿ ಮತ್ತು ಸುಬಾಲ್ ಕುಮ್ರಿ ಎರಡು ವರ್ಷದ ಕೆಳಗೆ ಕೆಲಸಕ್ಕೆ ಬಂದಿದ್ದರು. ಸೆ. ೩ ರಂದು ತೋಟದಲ್ಲಿ ಅಜಿತ್ ಕುಮ್ರಿ, ಫಕೀರಪ್ಪ ತೋಟದಲ್ಲಿ ಕೆಲಸ ಮಾಡುವಾಗ ಕೆಎ ೧೬ ಎಂ ೮೩೩೧ ಕ್ರಮ ಸಂಖ್ಯೆಯ ಜೆಸಿಬಿಯನ್ನು ಚಲಾಯಿಸುತ್ತಿದ್ದ ವಿಜಯಕಾಂತ್ ಎಂಬಾತನು ಮರದ ಬಳಿ ನಿಂತಿದ್ದ ಅಜಿತ್ ಕುಮ್ರಿಗೆ ಹಿಂದಿನಿಂದ ಅಜಾಗರೂಕತೆಯಿಂದ ಜೆಸಿಬಿಯನ್ನು ತಾಗಿಸಿದ್ದಾನೆ. ಜೆಸಿಬಿಯ ಬಕೆಟ್ ಪರಿಣಾಮ ಅಮಿತ್ ಕುಮ್ರಿಯ ಮರ್ಮಾಂಗಕ್ಕೆ ಬಲವಾದ ಪೆಟ್ಟು ಬಿದ್ದಿತ್ತು.

ಉಸಿರುಗಟ್ಟಿ ಒದ್ದಾಡುತ್ತಿದ್ದ ಕುಮ್ರಿಯನ್ನು ಬೈಕ್‌ನಲ್ಲಿ ಕೂಡ್ರಿಸಿಕೊಂಡು ಒಂದು ಆಸ್ಪತ್ರೆಯಿಂದ ಮತ್ತೊಂದು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರೆಯದ ಕಾರಣ ಅಜಿತ್ ಅಸು ನೀಗಿದ್ದಾನೆ.

ಜೆಸಿಬಿ ಚಾಲಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮೃತನ ಕುಟುಂಬ ತುಂಗಾನಗರ ಠಾಣೆಯಲ್ಲಿ ದೂರು ದಾಖಲಿಸಿದೆ.

- Advertisement -  - Advertisement -  - Advertisement - 
Share This Article
error: Content is protected !!
";