ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಈ ಕಣ್ಣೀರಿಗೆ ಏನರ್ಥ ? ಮಿಸ್ಟರ್ಡಿ.ಕೆ. ಸುರೇಶ್? ಇದು ನಿಮ್ಮ ಸ್ವಾರ್ಥಕ್ಕೆ, ನಾಟಕೀಯವಾಗಿ ಹರಿಸಿದ ಕಣ್ಣೀರೇ..? ಎಂದು ವಿಡಿಯೋ ಬಿಡುಗಡೆ ಮಾಡಿ ಕಾಂಗ್ರೆಸ್ ನಾಯಕರನ್ನು ಜೆಡಿಎಸ್ ತರಾಟೆ ತೆಗೆದುಕೊಂಡಿದೆ. ಲೋಕಸಭಾ ಚುನಾವಣೆ ಪ್ರಚಾರದ ವೇಳೆ ನೀವು ಸಾರ್ವಜನಿಕವಾಗಿ ಅತ್ತಿದ್ದು ಜನರ ಅನುಕಂಪ ಗಿಟ್ಟಿಸಿಕೊಳ್ಳುವುದಕ್ಕಾ ?
ಅಲ್ಲದೇ ಲೋಕಸಭಾ ಚುನಾವಣೆಯಲ್ಲಿ ಸೋತ ಬಳಿಕ ನೀವು ಎಲ್ಲಾ ಸಭೆ-ಸಮಾರಂಭಗಳಲ್ಲಿ ಬಿಕ್ಕಿ ಬಿಕ್ಕಿ ಅಳುತ್ತ ಇದ್ದಿರಲ್ಲ, ಅದಕ್ಕೇ ಏನನ್ನಬೇಕು ?
ಕನಕಪುರದಲ್ಲಿ ಕಲ್ಲು-ಬಂಡೆಗಳನ್ನು ಕರಗಿಸಿರುವ ಡಿ.ಕೆ. ಬ್ರದರ್ಸ್, ನಿಮ್ಮ ಹೃದಯ ಕಲ್ಲಾಗಿರಬಹುದು. ಕಟುಕರಿಗೆ ಕಣ್ಣೀರು ಬರುವುದಿಲ್ಲ, ನಿಜ. ಆದರೆ ಜನರ ಸಂಕಷ್ಟಗಳಿಗೆ ಸದಾ ಮಿಡಿಯುವ ಜನನಾಯಕನಿಗೆ ಕಣ್ಣೀರು ಬರುವುದು ಸಹಜ.
ಈ ಉಪಚುನಾವಣೆಯಲ್ಲಿ ಚನ್ನಪಟ್ಟಣದಲ್ಲಿ ನಿಮಗೆ ಸೋಲಿನ ಮುನ್ಸೂಚನೆ ಸಿಕ್ಕಿದ್ದು, ಹತಾಶರಾಗಿ ಈ ರೀತಿಯ ವೈಯಕ್ತಿಕ ನಿಂದನೆ, ಟೀಕೆಗಳನ್ನು ಮಾಡುತ್ತಿದ್ದೀರಿ.
ಆದರೆ ನೆನಪಿಡಿ, ಈ ಬಾರಿ ಚನ್ನಪಟ್ಟಣದ ಪ್ರಜ್ಞಾವಂತ ಮತದಾರರು ನಿಮಗೆ ಹಾಗೂ ಭ್ರಷ್ಟ ರಾಜ್ಯ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನಿಶ್ವಿತ ಎಂದು ಜೆಡಿಎಸ್ ತಿಳಿಸಿದೆ.