ಏನಿದು ತಂದೆ ಇಲ್ಲದ ಮಕ್ಕಳಿಗೆ 24 ಸಾವಿರ ಸ್ಕಾಲರ್‌ ಶಿಪ್!?

News Desk

ಚಂದ್ರವಳ್ಳಿ ನ್ಯೂಸ್, ತುಮಕೂರು:

ಇತ್ತೀಚೆಗೆ ತಂದೆ ಇಲ್ಲದ ಮಕ್ಕಳ ಖಾತೆಗೆ ವರ್ಷಕ್ಕೆ ೨೪,೦೦೦ ರೂ.ಗಳ ಸ್ಕಾಲರ್‌ಶಿಪ್ ಸೌಲಭ್ಯ ನೀಡಲಾಗುವುದು ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸುದ್ದಿ ಸುಳ್ಳು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ದಿನೇಶ್ ಸ್ಪಷ್ಟನೆ ನೀಡಿದ್ದಾರೆ.

    ಮಕ್ಕಳ ಖಾತೆಗೆ ೨೪,೦೦೦ ರೂ.ಗಳ ಸ್ಕಾಲರ್‌ಶಿಪ್ ಸೌಲಭ್ಯ ನೀಡುವ ವಿಚಾರ ಜನಸಾಮಾನ್ಯರಿಗೆ ತಿಳಿದೇ ಇಲ್ಲ. ಆದುದರಿಂದ ತಮಗೆ ಗೊತ್ತಿರುವ ಯಾರಾದರೂ ತಂದೆ ಇಲ್ಲದ ಮಕ್ಕಳಿದ್ದಲ್ಲಿ ಅವರ ಪೋಷಕರಿಗೆ ಅರ್ಜಿ ಸಲ್ಲಿಸಲು ತಿಳಿಸಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ದಕ್ಷಿಣ ಕನ್ನಡ, ಮಂಗಳೂರು ಎಂಬ ಮೊಹರು ಹಾಕಿರುವ ಅರ್ಜಿ ಫೋಟೋ ಹೊಂದಿರುವ ವಾಟ್ಸಾಪ್ ಸಂದೇಶ ಜನಸಾಮಾನ್ಯರ ಮೊಬೈಲ್‌ಗಳಲ್ಲಿ ಹರಿದಾಡುತ್ತಿದೆ.

ಈ ಸಂದೇಶವನ್ನು ನೋಡಿದ ಜನರು ದಿನನಿತ್ಯ ಜಿಲ್ಲಾಧಿಕಾರಿ ಕಚೇರಿ/ ತಹಶೀಲ್ದಾರರ ಕಚೇರಿ/ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ನೂರಾರು ಜನರು ಬಂದು ಸ್ಕಾಲರ್‌ಶಿಪ್ ಸೌಲಭ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಕರೆ ಹಾಗೂ ಖುದ್ದಾಗಿ ಭೇಟಿ ನೀಡುತ್ತಿದ್ದಾರೆ.  

ಅಲ್ಲದೇ ಈ ಸಂದೇಶವನ್ನೇ ಬಂಡವಾಳವನ್ನಾಗಿ ಮಾಡಿಕೊಂಡ ಮಧ್ಯವರ್ತಿಗಳು ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಬಂದು ೧೦-೧೫ ಅರ್ಜಿಗಳನ್ನು ನೀಡಬೇಕೆಂದು ಗಲಾಟೆ ಮಾಡುತ್ತಿದ್ದು, ಇದರಿಂದ ಅಮಾಯಕರನ್ನು ವಂಚಿಸಿ ಅವರಿಂದ ಹಣ ವಸೂಲಿ ಮಾಡುತ್ತಿರುವುದು ಕಂಡು ಬಂದಿದೆ.

      ಸಾರ್ವಜನಿಕರು ಸ್ಕಾಲರ್‌ಶಿಪ್‌ಗೆ ಸಂಬಂಧಿಸಿದ ಸುಳ್ಳು ಸುದ್ದಿಗೆ ಮರುಳಾಗದೆ ಎಚ್ಚರಿಕೆ ವಹಿಸಬೇಕು.  ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮೊದಲನೇ ಮಹಡಿ, ಮಹಾತ್ಮಗಾಂಧಿ ಕ್ರೀಡಾಂಗಣ, ಕುವೆಂಪು ನಗರ, ತುಮಕೂರು ಅಥವಾ ದೂ.ವಾ.ಸಂ.೦೮೧೬-೨೯೫೬೬೯೯ನ್ನು ಸಂಪರ್ಕಿಸಬೇಕೆಂದು ಅವರು ಮನವಿ ಮಾಡಿದ್ದಾರೆ.

 

 

 

 

- Advertisement -  - Advertisement -  - Advertisement - 
Share This Article
error: Content is protected !!
";