ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ವಿಧಾನಸೌಧದಲ್ಲಿ ಪಾಕಿಸ್ತಾನಕ್ಕೆ ಜೈ ಎನ್ನುವವರ ಪರ ನಿಲ್ಲುವುದಕ್ಕಿಂತ..
ಸಂವಿಧಾನ ಬದ್ಧವಾಗಿ ಸ್ಥಾಪನೆಯಾದ ಕಾನೂನಿನ ರಕ್ಷಣೆ ಒದಗಿಸುವ ಪೊಲೀಸ್ ಠಾಣೆಗಳಿಗೆ ಬೆಂಕಿ ಹಚ್ಚುವವರ ಪರ ನಿಲ್ಲುವುದಕ್ಕಿಂತ..
ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನದ ಪ್ರಕಾರ ಮೀಸಲಾತಿಯಿಂದ ಗೆದ್ದ ಶಾಸಕನ ಮನೆಗೆ ಬೆಂಕಿ ಹಚ್ಚುವವರ ಪರ ನಿಲ್ಲುವುದಕ್ಕಿಂತ..
ನಮ್ಮ ಹೆಮ್ಮೆಯ ರಾಷ್ಟ್ರ ಧ್ವಜದಲ್ಲಿರುವ ಮೂರು ಬಣ್ಣಗಳಲ್ಲಿ ಒಂದಾಗಿರುವ “ಕೇಸರಿ” ಪರ ನಿಂತರೆ ತಪ್ಪೇನು? ಎಂದು ಜೆಡಿಎಸ್ ತೀಕ್ಷ್ಣವಾಗಿ ಪ್ರಶ್ನಿಸಿದೆ.
ಕೇಸರಿಯನ್ನು ನಾವು ಗೌರವಿಸುತ್ತೇವೆ. ತ್ರಿವರ್ಣ ಧ್ವಜದ ಭಾಗವಾಗಿರುವ ಕೇಸರಿ ನಮ್ಮ ಹೆಮ್ಮೆ. ಒಡೆದು ಅಳುವ ಕಾಂಗ್ರೆಸ್ ಇಂಥ ಹೆಮ್ಮೆಗಳೇ ಇಲ್ಲ.
ಕೇಸರಿ ಎಂದರೆ ಧೈರ್ಯ, ತ್ಯಾಗ ಮತ್ತು ಬಲಿದಾನದ ಸಂಕೇತ. ಜಾತ್ಯತೀತ ಎಂದು ಕರೆಸಿಕೊಳ್ಳಲು ನಮಗೆ ಹೆಮ್ಮೆ ಇರುವಂತೆ ಕೇಸರಿಯೂ ನಮ್ಮ ಹೆಮ್ಮೆ.
ಸಂವಿಧಾನದ ಪುಸ್ತಕ ಕೈಯಲ್ಲಿ ಹಿಡಿದು, ಜನರನ್ನು ಯಾಮಾರಿಸುತ್ತಿರುವ ಭಾರತೀಯ ಕಾಂಗ್ರೆಸ್ ಪಕ್ಷದ ಗುಲಾಮರಿಗೆ ಕೇಸರಿ ಕಂಡರೆ ಯಾಕಿಷ್ಟು ಭಯ? ಇದು ಭಾರತದ ತ್ರಿವರ್ಣ ಧ್ವಜಕ್ಕೆ ಮಾಡುತ್ತಿರುವ ಅವಮಾನ ಅಲ್ಲವೇ? ಸಂವಿಧಾನಕ್ಕೆ ವಿರುದ್ಧವಾಗಿ ನಡೆಯುತ್ತಿರುವ ಕರ್ನಾಟಕ ಕಾಂಗ್ರೆಸ್ ಪಕ್ಷಕ್ಕೆ ಧಿಕ್ಕಾರವಿರಲಿ ಎಂದು ಜೆಡಿಎಸ್ ತಿಳಿಸಿದೆ.

