ಹೆಚ್‍ಆರ್‍ಎಂಎಸ್-2 ಹಾಗೂ ಖಜಾನೆ-2 ತಂತ್ರಾಂಶ ಕುರಿತು ತಿಳಿಯಬೇಕು

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ಚಿತ್ರದುರ್ಗ ತಾಲ್ಲೂಕು ವ್ಯಾಪ್ತಿಯ ಎಲ್ಲ ಬಟವಾಡೆ ಅಧಿಕಾರಿಗಳು (ಡಿಡಿಓ) ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಹೆಚ್ಆರ್ಎಂಎಸ್2 ಹಾಗೂ ಖಜಾನೆ2 ತಂತ್ರಾಂಶ ಕುರಿತು ಕಾರ್ಯಾಗಾರ ನಡೆಸಲಾಯಿತು.

ಜಿಲ್ಲಾ ಖಜಾನೆ ಉಪನಿರ್ದೇಶಕ ಹೆಚ್.ಟಿ. ಅಶೋಕ ಅವರು ಸಸಿಗೆ ನೀರೆರೆಯುವುದರ ಮೂಲಕ ಕಾರ್ಯಾಗಾರಕ್ಕೆ ಚಾಲನೆ ನೀಡಿ, ಖಜಾನೆ2ರಲ್ಲಿ ಬಿಲ್ಲನ್ನು ಸೃಜಿಸಿ ಸಲ್ಲಿಸುವಾಗ ಅನುಸರಿಸಬೇಕಾದ ನಿಯಮಾಳಿಗಳ ಬಗ್ಗೆ ತಿಳಿಸಿದರು.

- Advertisement - 

ಪ್ರತಿ ಮಾಹೆ ವೆಚ್ಚ ತಖ್ತೆಃ, ಜಿ.ಎಸ್.ಟಿ. ಸಮನ್ವಯೀಕರಣ, ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಲೆಕ್ಕ ಸಮನ್ವಯೀಕರಣವನ್ನು ನಿಗದಿತ ಅವಧಿಯೊಳಗೆ ಮಾಡುವಂತೆ ಸಲಹೆ ನೀಡಿದರು.

ವರ್ಷಾಂತ್ಯ ಸಮೀಪಿಸುತ್ತಿರುವುದರಿಂದ ಡಿ.ಎಸ್.ಸಿ ನವೀಕರಣ, ಪ್ರಯಾಣ ಭತ್ಯೆ ಬಿಲ್ಲುಗಳು, ಜಿ.ಪಿ.ಎಫ್ ಬಿಲ್ಲುಗಳು, ಹೆಚ್‍ಆರ್‍ಎಂಎಸ್-2, ಎನ್.ಪಿ.ಎಸ್ ಹಾಗೂ ಆನ್‍ಲೈನ್ ಕಚೇರಿ ಆದೇಶ ಸೃಜನೆ ಬಗ್ಗೆ ವಿವರಿಸಿದರು.
ದಾವಣಗೆರೆ ಇ-ಪ್ರಕ್ಯೂರ್‍ಮೆಂಟ್ ಸೆಲ್‍ನ ಸಂಪನ್ಮೂಲ ವ್ಯಕ್ತಿ ವೀರೇಶ್ ಅವರು, ಇ-ಪ್ರಕ್ಯೂರ್‍ಮೆಂಟ್ ಪೋರ್ಟಲ್‍ನಲ್ಲಿ ವರ್ಕ್ ಬಿಲ್ ಸೃಜನೆಯ ಬಗ್ಗೆ ತರಬೇತಿ ನೀಡಿದರು.

- Advertisement - 

ಈ ಸಂದರ್ಭದಲ್ಲಿ ಜಿಲ್ಲಾ ಖಜಾನೆ ಇಲಾಖೆಯ ಸಹಾಯಕ ನಿರ್ದೇಶಕ ಎನ್.ಬೋರಯ್ಯ, ಸಹಾಯಕ ಖಜನಾಧಿಕಾರಿ ಬಿ.ವೀರಭದ್ರಪ್ಪ, ಕಾರ್ಯಪಾಲಕ ಅಭಿಯಂತರ ಹೆಚ್.ಪಿ.ಅಮರನಾಥ್ ಜೈನ್, ಅರಣ್ಯ ಇಲಾಖೆ ಎಸಿಎಫ್ ಎಂ.ಎಸ್.ನ್ಯಾಮತಿ ಇದ್ದರು.  

 

Share This Article
error: Content is protected !!
";