ಗಣತಿಗೆ ಬಂದಾಗ ಮಾದಿಗ ಎಂದೇ ಬರೆಸಿ-ಮಾದಾರ ಚನ್ನಯ್ಯ ಸ್ವಾಮೀಜಿ

News Desk

ಚಂದ್ರವಳ್ಳಿ ನ್ಯೂಸ್, ಕೋಲಾರ:
ಸುಪ್ರೀಂ ಕೋರ್ಟ್ ತೀರ್ಪಿನ ಮೇರೆಗೆ ರಾಜ್ಯ ಸರ್ಕಾರ ಒಳ ಮೀಸಲಾತಿ ಜಾರಿಗೆ ತರಲು ನಿರ್ಧಾರ ಮಿದ್ದು ದಲಿತ ಸಮುದಾಯಗಳ ನಿಖರ ಜನಸಂಖ್ಯೆಯನ್ನು ತಿಳಿಯಲು ನ್ಯಾ. ನಾಗಮೋಹನ್ ದಾಸ್ ಸಮಿತಿ ಮುಂದಾಗಿರುವ ಹಿನ್ನೆಲೆಯಲ್ಲಿ ಗಣತಿಗೆ ಬಂದಾಗ
ಮಾದಿಗಎಂದು ಮಾತ್ರ ಜಾತಿಯನ್ನು ನಮೂದಿಸುವಂತೆ ಶ್ರೀ ಬಸವಮೂರ್ತಿ ಮದಾರಚನ್ನಯ್ಯ ಸ್ವಾಮೀಜಿಯವರು ಕರೆ ನೀಡಿದರು. 

 ಕೋಲಾರ ನಗರದಲ್ಲಿ ಗುರುವಾರ ಜನಜಾಗೃತಿ ಪಾದಯಾತ್ರೆ ನಡೆಸಿ ಅವರು ಜನಾಂಗದಲ್ಲಿ ಅರಿವು ಮೂಡಿಸಿದರು. ಕೋಲಾರ ಜಿಲ್ಲೆಯ ಹಾರೋಹಳ್ಳಿ ಗ್ರಾಮದಲ್ಲಿ  ಶ್ರೀ ಶಿವಶರಣ ಮಾದಾರ ಚೆನ್ನಯ್ಯ ಸೇವಾ ಸಮಿತಿ ಸಂಯುಕ್ತಾಶ್ರಯದಲ್ಲಿ ಕರ್ನಾಟಕ ರಾಜ್ಯದ ಮಾದಿಗ ಒಕ್ಕೂಟವು ಆಯೋಜಿಸಿದ್ದ ಮೀಸಲಾತಿ ಸಮೀಕ್ಷೆಯಲ್ಲಿ ತಮ್ಮ ಮೂಲ ಜಾತಿ ಮಾದಿಗ ಎಂದೇ ಕಡ್ಡಾಯವಾಗಿ ದಾಖಲಿಸಬೇಕೆಂದು ಪರಮಪೂಜ್ಯ ಶ್ರೀ ಬಸವಮೂರ್ತಿ ಮಾದರ ಚೆನ್ನಯ್ಯ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಮಾದಿಗ ಜನಜಾಗೃತಿ ಆಂದೋಲನಕ್ಕೆ ಚಾಲನೆ ನೀಡಲಾಯಿತು.ಇದೇ ಸಂದರ್ಭದಲ್ಲಿ ಗ್ರಾಮಸ್ಥರು ಸ್ವಾಮೀಜಿಗಳಿಗೆ ಪಾದ ಪೂಜೆಯಲ್ಲಿ ಏರ್ಪಡಿಸಿದ್ದರು.

ಶ್ರೀಗಳು ಮನೆ ಮನೆಗೆ ತೆರಳಿ ಜಾತಿ ಸಮೀಕ್ಷೆಯ ಸಂದರ್ಭದಲ್ಲಿ AK, AD,AA ಯಾವುದೇ ಇರಲಿ ತಮ್ಮ ಮೂಲ ಜಾತಿ ಮಾದಿಗ ಎಂದೇ ನಮೂದಿಸಬೇಕೆಂದು ಕರೆ ನೀಡಿದರು.
ಮಾಜಿ ಕೇಂದ್ರ ಸಚಿವ ಆನೇಕಲ್ ನಾರಾಯಣಸ್ವಾಮಿ ಸೇರಿದಂತೆ ಜಿಲ್ಲೆಯ ವಿವಿಧ ಗ್ರಾಮಗಳ ಸ್ಥಳೀಯ ಮುಖಂಡರು, ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಇದ್ದರು.

Share This Article
error: Content is protected !!
";