ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಗೃಹ ಸಚಿವರೇ ಈ ನೀಚನ ಬಂಧನ ಯಾವಾಗ ? ಎಂದು ಜೆಡಿಎಸ್ ತೀಕ್ಷ್ಣವಾಗಿ ಪ್ರಶ್ನಿಸಿದೆ.
ಭದ್ರಾವತಿಯ ಕರ್ನಾಟಕ ಕಾಂಗ್ರೆಸ್ ಶಾಸಕ ಬಿ.ಕೆ. ಸಂಗಮೇಶ್ ಮತ್ತು ಅವರ ಪುತ್ರನ ದರ್ಪ, ದೌರ್ಜನ್ಯ, ನಿಂದನೆ, ಕಿರುಕುಳ ಪ್ರಕರಣಗಳು ಮಿತಿಮೀರಿದೆ. ಇದು ಶಾಸಕರ ಮಗ ಬಸವ ಎಂಬ ಅಯೋಗ್ಯನ ಸಂಭಾಷಣೆಯ ಸ್ಯಾಂಪಲ್. ಈತ ಬಾಯಿ ತೆಗೆದರೆ ಬರೀ ಸೊಂಟದ ಕೆಳಗಿನ ಭಾಷೆ. ಕೇಳಲು ಕಠೋರ, ಅಸಹ್ಯ. ಈ ಹಿಂದೆಯೂ ಕರ್ತವ್ಯನಿರತ ಮಹಿಳಾ ಅಧಿಕಾರಿಗೆ ಅವಾಚ್ಯ ಶಬ್ದಗಳಲ್ಲಿ ನಿಂದಿಸಿದ್ದು ಸುದ್ದಿಯಾಗಿತ್ತು.
ಭದ್ರಾವತಿಯ ತಾಲ್ಲೂಕನ್ನು ರಿಪಬ್ಲಿಕ್ ಮಾಡಿಕೊಂಡು ಮರಳು ದಂಧೆ ಮತ್ತು ಇಸ್ಪಿಟ್ ದಂಧೆ ಸೇರಿದಂತೆ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿರುವ ಶಾಸಕ ಸಂಗಮೇಶ್, ಅವರ ಪುತ್ರ ಭದ್ರಾವತಿ ಕ್ಷೇತ್ರದ ಜನರ ಪಾಲಿಗೆ ರಕ್ಕಸರಾಗಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರೇ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರೇ, ಭದ್ರಾವತಿ ಶಾಸಕರ ಪುತ್ರನ ವಿರುದ್ಧ ಇನ್ನಾದರೂ ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಜೆಡಿಎಸ್ ಪಕ್ಷವು ಆಗ್ರಹಿಸುತ್ತದೆ.

