ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಕಂದಾಯ ಇಲಾಖೆ, ಸರ್ವೇ ಇಲಾಖೆ ಮತ್ತು ನೋಂದಣಿ ಇಲಾಖೆಯಲ್ಲಿ ಸರ್ವರ್ ಸಮಸ್ಯೆ ಮಿತಿ ಮೀರಿದ್ದು ಕೂಡಲೇ ಸರಿಪಡಿಸುವಂತೆ ಪ್ರಗತಿಪರ ರೈತ, ಜನಪರ ಹೋರಾಟಗಾರ ಪಿಟ್ಲಾಲಿ ಶ್ರೀನಿವಾಸ್ ಅಗ್ರಹ ಮಾಡಿದ್ದಾರೆ.
ಕಂದಾಯ ಇಲಾಖೆ ವ್ಯಾಪ್ತಿಗೆ ಬರುವ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಕಳೆದ 15 ದಿನಗಳಿಂದ ಕಾವೇರಿ ತಂತ್ರಾಂಶದಲ್ಲಿ ವ್ಯತ್ಯಯ ಉಂಟಾಗಿ ಜಮೀನುಗಳ ಶೇರಿಂಗ್ ನಲ್ಲಿ, ಸರ್ವೇ ಸ್ಕೆಚ್ ಗಳಲ್ಲಿ, ಆಧಾರ ರದ್ಧತಿಯಲ್ಲಿ, ಬಡವರ ಬಗರ್ ಹುಕುಂ ಜಮೀನುಗಳ ಪೂಡಿ ಆಗುತ್ತಿಲ್ಲ ಇದರಿಂದ ನಾನಾ ತರವಾದ ಸಮಸ್ಯೆಗಳಾಗುತ್ತಿವೆ. ಈ ತರ ನೋಂದಣಿ, ಭೂಮಾಪನ, ಕಂದಾಯ ಇಲಾಖೆ ಸಮಸ್ಯೆಗಳು ಉಂಟಾಗಿದೆ ಎಂದು ಪಿಟ್ಲಾಲಿ ಶ್ರೀನಿವಾಸ್ ಹೇಳಿದರು.
ಸಾಮಾಜಿಕ ಕಾರ್ಯಕರ್ತ ಕಸವನಹಳ್ಳಿ ರಮೇಶ್ ಮಾತನಾಡಿ, ಸರ್ವರ್ ಸಮಸ್ಯೆಯಿಂದಾಗಿ ರೈತರು ನಾಗರೀಕರು ಪರದಾಡುವಂತೆ ಆಗಿದೆ ಪ್ರತಿದಿನ ಇಲಾಖೆಗೆ ಬರುವುದು ವಾಪಸ್ ಹೋಗುವುದು. ಕೆಲವೊಂದು ವ್ಯಾಜ್ಯಗಳು ನ್ಯಾಯಾಲಯದಲ್ಲಿ ಹಾಗೂ ಸ್ವತಃ ತೀರ್ಮಾನ ಮಾಡಿಕೊಂಡು ನೋಂದಣಿಗೆ ಬಂದಿದ್ದಾಗ ಅಲ್ಲಿ ನೋಂದಣಿ ಆಗದೆ ಇದು ಕೌಟುಂಬಿಕ ವ್ಯಾಜ್ಯ ವಿಸ್ತರಣೆಯಾಗುತ್ತಿವೆ.
ಕರ್ನಾಟಕದಲ್ಲಿ ವಿಶ್ವಕ್ಕೆ ಕೊಡುವಷ್ಟು ಸಾಫ್ಟವೇರ್ ಡೆವಲಪ್ ಆಗಿದೆ. ಆದರೆ ದೀಪದ ಕೆಳಗೆ ಕತ್ತಲು ಎನ್ನುವಂತೆ ಕರ್ನಾಟಕದ ಸರ್ಕಾರಿ ಕಚೇರಿಗಳಲ್ಲಿ ಬ್ಯಾಂಕುಗಳಲ್ಲಿ ಸರ್ವರ್ ಸಮಸ್ಯೆಗಳಿಂದ ನಾಗರೀಕರಿಗೆ ರೈತರಿಗೆ ನಾನಾ ಸಮಸ್ಯೆ ಉಂಟಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ತಾವುಗಳು ಇಲಾಖೆಯ ಪರಿಶೀಲನೆಗೆ ಆಧುನೀಕರಣಕ್ಕೆ ನಾನಾ ರೀತಿಯ ಪ್ರಯತ್ನ ಪಟ್ಟಿದ್ದರೂ ಅದು ಫಲ ಕೊಡುತ್ತಿಲ್ಲ. ಭ್ರಷ್ಟಾಚಾರ ನಿಲ್ಲುತ್ತಿಲ್ಲ ಸುಲಿಗೆ ಕಡಿಮೆಯಾಗುತ್ತಿಲ್ಲ ಜನಸಾಮಾನ್ಯರಿಗೆ ಇಲಾಖೆಯ ಕೆಲಸಗಳು ದುಬಾರಿಯಾಗುತ್ತಿವೆ.

ಅಧಿಕಾರ ಶಾಶ್ವತವಲ್ಲ ನೀವು ಅಧಿಕಾರದಲ್ಲಿ ಇರುವ ಸಮಯದಲ್ಲಿ ಜನಸಾಮಾನ್ಯರಿಗೆ ಕಂದಾಯ ಇಲಾಖೆಯನ್ನು ಮುಕ್ತವಾಗಿ ಸೇವೆ ಮಾಡುವಂತೆ ಭ್ರಷ್ಟಾಚಾರ ರಹಿತ, ಮಾಡಿಸಿಕೊಡಬೇಕೆಂದು ಅವರು ಮನವಿ ಮಾಡಿದರು.

