ದೇಶದ್ರೋಹಿ ಎಸ್‌ಡಿಪಿಐ, ಪಿಎಫ್ಐ ಜೊತೆಗಿನ ನೆಂಟಸ್ತಿಕೆ ಬೆಳೆಸಿದ್ದು ಯಾರು ಖರ್ಗೆ ಅವರೇ?

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಗಾಜಿನ ಮನೆಯಲ್ಲಿ ಕುಳಿತು ಕಲ್ಲು ತೂರುವ ಅಭ್ಯಾಸವಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ
, ನೆನಪಿನ ಶಕ್ತಿ ಕಡಿಮೆಯಾಗಿದ್ದರಿಂದ ಕಾಂಗ್ರೆಸ್-ಭಯೋತ್ಪಾದಕರ ಜೊತೆಗಿನ ಮಧುರ ಬಾಂಧವ್ಯ ಮರೆತು ಹೋಗಿದೆ! ಎಂದು ಬಿಜೆಪಿ ಟ್ವೀಟ್ ಮಾಡಿ ಗಂಭೀರ ಆರೋಪ ಮಾಡಿದೆ.

ಕಾಶ್ಮೀರದಲ್ಲಿ ನರಮೇಧ ನಡೆಸಿದ್ದ ಭಯೋತ್ಪಾದಕ ಯಾಸಿನ್ ಮಲಿಕ್‌ನೊಂದಿಗೆ ಅಂದು ಡಾ.ಮನಮೋಹನ್ ಸಿಂಗ್ ಹಸ್ತಲಾಘವ ಮಾಡಿ, ದೇಶದ ಭದ್ರತೆಯೊಂದಿಗೆ ರಾಜಿ ಮಾಡಿಕೊಂಡಿದ್ದು, ಯಾವ ಪಕ್ಷದವರು ಖರ್ಗೆಯವರೇ?

ಸಿಖ್ ಹತ್ಯಾಕಾಂಡದ ರೂವಾರಿಯನ್ನು ಮೆರವಣಿಗೆ ಮಾಡಿದ್ದು, ಮುಂಬೈ ದಾಳಿಯ ಉಗ್ರನಿಗೆ ರಾಜಾತಿಥ್ಯ ನೀಡಿದ್ದು, ದೇಶದ್ರೋಹಿ ಎಸ್‌ಡಿಪಿಐ, ಪಿಎಫ್ಐ ಜೊತೆಗಿನ ನೆಂಟಸ್ತಿಕೆ ಬೆಳೆಸಿದ್ದು, ದೇಶವಿರೋಧಿಗಳ ಮೇಲಿನ ಕೇಸ್ ವಾಪಸ್ ಪಡೆದಿದ್ದು ತಮ್ಮದೇ ಪಕ್ಷವಲ್ಲವೇ

ಅತಿಯಾದ ಓಲೈಕೆ, ಹಿಂದು ವಿರೋಧಿ ನೀತಿಗಳಿಂದಲೇ ಕಾಂಗ್ರೆಸ್ ಅಧ:ಪತನ ತಲುಪಿದ್ದು ಎಂಬ ವರದಿ ನೀಡಿದ್ದು, ತಮ್ಮದೇ ಪಕ್ಷದ ಎ.ಕೆ. ಆ್ಯಂಟನಿ. ಆ ವರದಿ ಓದಿಲ್ಲವೇ? ಬಿಡುವಿದ್ದರೇ ಒಮ್ಮೆ ಓದಿ ಖರ್ಗೆಯವರೇ.!  ಎಂದು ಬಿಜೆಪಿ ಖಾರವಾಗಿ ಪ್ರಶ್ನಿಸಿದೆ.

- Advertisement -  - Advertisement - 
Share This Article
error: Content is protected !!
";