ಚಂದ್ರವಳ್ಳಿ ನ್ಯೂಸ್, ಹಿರಿಯೂರು:
“ಯುಗಾದಿ ಉಡುದಾರ ಬದಲಾಯಿಸುವುದು ಸಂಪ್ರದಾಯ ಸಮತೋಲಿತ ” ಇದಕ್ಕೆ ವೈಜ್ಞಾನಿಕ ಕಾರಣವೂ ಇದೆ.
ಹಿಂದೂ ಸಂಪ್ರದಾಯದಲ್ಲಿ ಗಂಡು ಮಕ್ಕಳ ಸೊಂಟಕ್ಕೆ ಉಡುದಾರ ಕಟ್ಟುವುದನ್ನು ಕೆಲವರು ಒಂದು ಮೂಢನಂಬಿಕೆ ಎಂದು ಕರೆಯುತ್ತಾರೆ. ಆದರೆ ಅದು ಮೂಢನಂಬಿಕೆ ಅಲ್ಲ. ಇದಕ್ಕೆ ವೈಜ್ಞಾನಿಕ ಕಾರಣವೂ ಇದೆ. ಉಡುದಾರ ಕಟ್ಟುವುದರಿಂದ ಮಕ್ಕಳ ಮೂಳೆಗಳು ಹಾಗೂ ಖಂಡಗಳು ಯಾವ ರೀತಿ ಬೆಳವಣಿಗೆ ಹೊಂದುತ್ತಿವೆ ಎಂಬುದು ಗೋಚರಿಸುತ್ತದೆ.
ಅಲ್ಲದೇ ಇದಕ್ಕೆ ವೈಜ್ಞಾನಿಕ ಕಾರಣವೂ ಇದೆ. ಕೆಲವರು ಮಕ್ಕಳಿಗೆ ತಾಮ್ರದ , ಬೆಳ್ಳಿಯ ಉಡುದಾರ ಕಟ್ಟುತ್ತಾರೆ. ಇದರಲ್ಲಿ ಮಕ್ಕಳಲ್ಲಿ ಸಕಾರಾತ್ಮಕ ಶಕ್ತಿ ಹೊರ ಬರುತ್ತದೆ ಎಂದು ತಜ್ಞರು ಹೇಳುತ್ತಾರೆ.
ಹುಟ್ಟು ಸಾವಿನ ನಡುವೆ ಕೆಲವರು ಉಡುದಾರವನ್ನು ಹುಟ್ಟು ಸಾವಿನ ನಡುವಿನ ಶಾಶ್ವತವಾದ ಆಸ್ತಿ ಎಂದು ನಂಬುತ್ತಾರೆ. ಮನುಷ್ಯ ಬೆತ್ತಲೆಯಾಗಿ ಹುಟ್ಟಿ, ಸತ್ತ ನಂತರ ಬೆತ್ತಲೆಯಾಗಿ ಹೋಗುವಾಗ ಉಡುದಾರ ಮಾತ್ರ ಆತನ ಜೊತೆಗಿನ ಆಸ್ತಿಯಾಗಿರುತ್ತದೆ.
ವ್ಯಕ್ತಿ ಏನನ್ನು ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ. ಕೊನೆಗೆ ಅವನ ಜೊತೆಗೆ ಉಳಿಯುವುದು ಉಡುದಾರ ಮಾತ್ರ ಎಂಬ ಜನಾಭಿಪ್ರಾಯವಿದೆ ಎಂದು ಹಿರಿಯ ನಾಗರಿಕ ಎಲ್.ನಾರಾಯಣಾಚಾರ್ ತಿಳಿಸಿದ್ದಾರೆ.