ಸಿದ್ದರಾಮಯ್ಯ ಅವಧಿಯಲ್ಲಿ ಶೇ.63ರಷ್ಟು ನಾಗರಿಕರು ಏಕೆ ಲಂಚ ನೀಡಬೇಕಾಯಿತು?

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಿಎಂ ಸಿದ್ದರಾಮಯ್ಯ
ಅವರೇ, ಗುರುವಾರ ತಡರಾತ್ರಿ ನೀವು ಅದನ್ನು ಲೋಕಾಯುಕ್ತ ವರದಿ ಎಂದು ಸುಳ್ಳು ಹೇಳಿದ ನಂತರ, ಈಗ ಅದನ್ನು ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಶನಲ್ ವರದಿಎಂದು ಸದ್ದಿಲ್ಲದೆ ತಿದ್ದುಕೊಂಡಿರುವುದು ಸಂತೋಷದ ಸಂಗತಿ ಎಂದು ವಿಪಕ್ಷ ನಾಯಕ ಆರ್.ಅಶೋಕ್ ವ್ಯಂಗ್ಯವಾಡಿದ್ದಾರೆ.

ಆದರೆ ಈಗ, ಕೆಲವು ಸತ್ಯಾಂಶಗಳನ್ನು ಸ್ಪಷ್ಟಪಡಿಸೋಣ. ನ್ಯಾಯಮೂರ್ತಿ ಬಿ. ವೀರಪ್ಪ ಅವರು ಉಲ್ಲೇಖಿಸಿರುವ ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಶನಲ್ ವರದಿಯು ನವೆಂಬರ್ 2019 ರಲ್ಲಿ ಬಿಡುಗಡೆಯಾಗಿತ್ತು, ಆದರೆ ಅದು ಹಿಂದಿನ ವರ್ಷದ ಭ್ರಷ್ಟಾಚಾರದ ಕುರಿತು ನಡೆಸಿದ ಸಮೀಕ್ಷೆ ಆಗಿತ್ತು. ಇದರ ಅರ್ಥ, ಆ ವರದಿಯ ದತ್ತಾಂಶವು 2018ರ ಅವಧಿಯನ್ನು ಪ್ರತಿಬಿಂಬಿಸುತ್ತದೆ ಎಂದು ಅಶೋಕ್ ತಿಳಿಸಿದ್ದಾರೆ.

- Advertisement - 

2018ರಲ್ಲಿ ಕರ್ನಾಟಕದ ಮುಖ್ಯಮಂತ್ರಿ ಆಗಿದ್ದವರು ಯಾರು?
ಮಾನ್ಯ ಸಿದ್ದರಾಮಯ್ಯ ಅವರೇ
, ಅದು ತಾವೇ ಹೊರತು ಬೇರೆ ಯಾರೂ ಅಲ್ಲ. ಆದ್ದರಿಂದ ಈ ವರದಿಯನ್ನು ಬಿಜೆಪಿ ಕಡೆಗೆ ತಿರುಚುವ ಬದಲು, ನಿಮ್ಮ ಆಡಳಿತಾವಧಿಯಲ್ಲಿ ಕರ್ನಾಟಕದ 63% ನಾಗರಿಕರು ಏಕೆ ಲಂಚ ನೀಡಬೇಕಾಯಿತು ಎಂಬುದನ್ನು ನೀವೇ ಮೊದಲು ವಿವರಿಸಬೇಕು.

ಮತ್ತೆ ಇದೊಂದೇ ವರದಿ ನಿಮ್ಮ ಸರ್ಕಾರದ ಭ್ರಷ್ಟಾಚಾರವನ್ನು ಬಯಲಿಗೆಳೆದಿಲ್ಲ. 2017ರಲ್ಲಿ, ಮತ್ತೊಂದು ರಾಷ್ಟ್ರೀಯ ಸಮೀಕ್ಷೆಯು ಆಗ ರಾಜ್ಯದಲ್ಲಿ ಆಡಳಿತದಲ್ಲಿದ್ದ ಕಾಂಗ್ರೆಸ್ ಸರ್ಕಾರವನ್ನು ಭಾರತದ ಅತ್ಯಂತ ಭ್ರಷ್ಟ ರಾಜ್ಯ ಎಂದು ಘೋಷಿಸಿತ್ತು.

- Advertisement - 

ಕರ್ನಾಟಕ ಕಂಡ ಅತ್ಯಂತ ಭ್ರಷ್ಟಾತಿ ಭ್ರಷ್ಟ ಸರ್ಕಾರಗಳನ್ನು ಮುನ್ನಡೆಸಿದ, ಮುನ್ನಡೆಸುತ್ತಿರುವ ತಾವು ಇನ್ನೊಬ್ಬರಿಗೆ ನೀತಿ ಪಾಠ ಹೇಳುವುದು ಹಾಸ್ಯಾಸ್ಪದ ಮತ್ತು ಉದ್ಧಟತನ ಎಂದು ಅಶೋಕ್ ವಾಗ್ದಾಳಿ ಮಾಡಿದ್ದಾರೆ.

ನಿಮ್ಮ ಸರ್ವೋಚ್ಚ ನಾಯಕ ರಾಹುಲ್ ಗಾಂಧಿ ಅವರ ಮೂರ್ಖತನವನ್ನು ದೇಶವು ಕ್ಷಮಿಸಬಹುದು, ಆದರೆ ಕರ್ನಾಟಕದ ಜನತೆ ರಾಜ್ಯದ ಇತಿಹಾಸದಲ್ಲೇ ಅತ್ಯಂತ ಭ್ರಷ್ಟ ಸರ್ಕಾರಗಳನ್ನು ಮುನ್ನಡೆಸಿದ ನಿಮ್ಮನ್ನ, ನಿಮ್ಮ ಕರ್ನಾಟಕ ಕಾಂಗ್ರೆಸ್ ಪಕ್ಷದ ನಿರ್ಲಜ್ಜತೆಯನ್ನು ಎಂದಿಗೂ ಕ್ಷಮಿಸುವುದಿಲ್ಲ.

ಸಿಎಂ ಸಿದ್ದರಾಮಯ್ಯ ಅವರೇ, ಇತರರತ್ತ ಬೆರಳು ತೋರಿಸುವ ಮೊದಲು ನಿಮ್ಮದೇ ಘನ ಸರ್ಕಾರ ವರ್ಷದಿಂದ ವರ್ಷಕ್ಕೆ ಕರ್ನಾಟಕವನ್ನು ಭ್ರಷ್ಟಾಚಾರದ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಇರಿಸಲು ಕಾರಣವೇನು ಎಂಬುದಕ್ಕೆ ಮೊದಲು ಉತ್ತರಿಸಿ ಎಂದು ಅಶೋಕ್ ಆಗ್ರಹಿಸಿದ್ದಾರೆ.

 

Share This Article
error: Content is protected !!
";