ಚಂದ್ರವಳ್ಳಿ ನ್ಯೂಸ್, ಮಂಡ್ಯ:
ಕೇಂದ್ರ ಸರ್ಕಾರಕ್ಕೆ ನ್ಯಾ.ರೋಹಿಣಿ ಆಯೋಗ ಕೊಟ್ಟ ವರದಿ ಜಾರಿ ಮಾಡದ ವಿಚಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿ, ಬಿಜೆಪಿ, RSSಗೆ ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇಲ್ಲ. ಬದ್ಧತೆ ಇಲ್ಲ. ನೂರು ವರ್ಷದ ಇತಿಹಾಸ ನೋಡಿದರೆ ಅವರು ವಿರೋಧ ಮಾಡಿಕೊಂಡೆ ಬಂದಿದ್ದಾರೆ. RSS ಆರಂಭವಾಗಿ ನೂರು ವರ್ಷವಾಗುತ್ತಿದೆ.
RSS ಯಾವತ್ತು ಮೀಸಲಾತಿ ಒಪ್ಪಿಲ್ಲ. ವರದಿ ಜಾರಿಗೆ ಕಳೆದ 2 ವರ್ಷಗಳಿಂದ ರಾಹುಲ್‌ಗಾಂಧಿ ಒತ್ತಾಯಿಸಿದ್ದರು. ಅದಕ್ಕೆ ಪ್ರಣಾಳಿಕೆಯಲ್ಲಿ ಸೇರಿಸಿದ್ದೆವು. ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡಬೇಕು. ಶೇ.50ರಷ್ಟು ಇರುವ ಸೀಲಿಂಗ್ ತೆಗೆಯಬೇಕು, ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ತರಬೇಕು ಎಂದು ಮೋದಿಯವರಿಗೆ ಸಿಎಂ ಒತ್ತಾಯಿಸಿದರು.
ರೋಹಿಣಿ ಆಯೋಗದ ವರದಿ ಯಾವಾಗ ಜಾರಿಗೆ ಮಾಡುತ್ತೀರಾ ಎಂಬುದನ್ನು ಖಚಿತವಾಗಿ ಹೇಳಬೇಕು. ರೋಹಿಣಿ ಆಯೋಗದ ಮೀಸಲಾತಿ ಜೊತೆ ಜಾತಿ ಗಣತಿಯನ್ನು ಮಾಡಬೇಕು ಎಂದು ಸಿದ್ದರಾಮಯ್ಯ ಆಗ್ರಹ ಮಾಡಿದರು.
ಸ್ಪೀಕರ್ ಮತ್ತು ನನಗೂ ಬೆದರಿಕೆ ಕರೆ ಬಂದಿತ್ತು: ಯ.ಟಿ. ಖಾದರ್‌ಗೆ ಬೆದರಿಕೆ ಕರೆ ಬಂದ ವಿಚಾರಕ್ಕೆ ಸಿಎಂ ಪ್ರತಿಕ್ರಿಯೆ ನೀಡಿ, ನನಗೂ ಬೆದರಿಕೆ ಕರೆಗಳು ಬರುತ್ತವೆ. ಬಂದಿವೆ. ಸ್ಪೀಕರ್‌ಗೆ ಬಂದ ಬೆದರಿಕೆ ಕರೆ ಬಗ್ಗೆ ಪತ್ತೆ ಹಚ್ಚಿ ಕ್ರಮವಹಿಸಲು ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.