ಧರ್ಮಸ್ಥಳ ತನಿಖೆಗಾಗಿ ಎಸ್​​ಐಟಿ ರಚಿಸಿದಾಗ ಬಿಜೆಪಿ ಯಾಕೆ ಮೌನವಾಗಿತ್ತು-ಸಿಎಂ

News Desk

ಚಂದ್ರವಳ್ಳಿ ನ್ಯೂಸ್, ಮೈಸೂರು:
ಧರ್ಮಸ್ಥಳ ಪ್ರಕರಣದ ತನಿಖೆಗಾಗಿ ಎಸ್​​ಐಟಿ ರಚಿಸಿದಾಗ ಯಾಕೆ ಬಿಜೆಪಿ ಅವರು ಯಾತ್ರೆ ಮಾಡಲಿಲ್ಲ‌
? ಇದು ಡೋಂಗಿತನ ಅಲ್ವಾ?, ಬಿಜೆಪಿ ರಾಜಕೀಯವಾಗಿ ಯಾತ್ರೆ ಮಾಡುತ್ತಿದೆ, ಮಾಡಲಿ ಬಿಡಿ. ಇದರಿಂದ ಬಿಜೆಪಿಗೆ ರಾಜಕೀಯ ಲಾಭ ಸಿಗಲ್ಲ‌ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ತವರೂರು ಸಿದ್ದರಾಮನ ಹುಂಡಿಯಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿಯಿಂದ ಚಾಮುಂಡಿ ಚಲೋ ವಿಚಾರವಾಗಿ ಪ್ರತಿಕ್ರಿಯಿಸಿದರು.

- Advertisement - 

ಬಿಜೆಪಿ ಅವರು ಹಿಂದುತ್ವ ಗಟ್ಟಿ ಆಗುತ್ತೆ ಎಂದು ಪ್ಲಾನ್ ಮಾಡಿ ಯಾತ್ರೆ ಮಾಡುತ್ತಿದೆ. ಇವರಿಂದ ಹಿಂದುತ್ವ ಗಟ್ಟಿಯಾಗಲ್ಲ. ನಾನು ಕೂಡ ಹಿಂದೂ, ನಾವೆಲ್ಲರೂ ಕೂಡ ಹಿಂದೂ, ನಾನು ನಮ್ಮ ಊರಲ್ಲಿ ರಾಮ ಮಂದಿರ ಕಟ್ಟಿಸಿದ್ದೇನೆ. ಹಿಂದೂಗಳು ಎಂದರೆ ಸುಳ್ಳು ಹೇಳುವುದು, ಅಪಪ್ರಚಾರ ಮಾಡುವುದಲ್ಲ, ಮನುಷ್ಯತ್ವ ಇರುವವರು ಹಿಂದೂಗಳು.‌ಅಮಾನವೀಯ ನಡವಳಿಕೆ ತೋರುವವರು ಹಿಂದೂಗಳಲ್ಲ ಎಂದು ಬಿಜೆಪಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ಮಾಡಿದರು.

ಮೈಸೂರು ದಸರಾದಲ್ಲೂ ರಾಜಕೀಯ ಮಾಡುತ್ತಿದ್ದಾರೆ. ಅವರ ಮನೆನೂ ರಾಜಕೀಯಕ್ಕೆ ಬೇಕಾದರೆ ಬಳಸಿ ಕೊಳ್ಳುತ್ತಾರೆ. ಸುಳ್ಳು ಹೇಳುವುದು ಬಿಟ್ಟು ಬಿಜೆಪಿಗೆ ಏನು ಗೊತ್ತು? ಬಿಜೆಪಿ ಹೋರಾಟದಿಂದ ದಸರಾ ಮೇಲೆ ಕೆಟ್ಟ ಪರಿಣಾಮ ಬೀರಲ್ಲ. ಹಿಂದೂಗಳೆಲ್ಲಾ ಬಿಜೆಪಿ ಜೊತೆ ಇಲ್ಲ‌ಎಂದು ಸಿದ್ದರಾಮಯ್ಯ ಹೇಳಿದರು.

- Advertisement - 

ನನಗೆ ಗೊತ್ತಿಲ್ಲ:
ಚಾಮುಂಡಿ ಬೆಟ್ಟ ಹಿಂದೂಗಳದ್ದಲ್ಲ ಎಂಬ ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಹೇಳಿಕೆಗೆ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿ
, ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿನೇ ಇರಬಹುದು. ಈಗ ವಿಚಾರ ಇರುವುದು ದಸರಾ. ಚಾಮುಂಡಿ ಬೆಟ್ಟದ್ದು ಅಲ್ಲ. ದಸರಾ ನಾಡಹಬ್ಬ ಎಲ್ಲರಿಗೂ ಸೇರಿದ್ದು. ಡಿ. ಕೆ. ಶಿವಕುಮಾರ್​ ಹೇಳಿದ್ದು ನನಗೆ ಗೊತ್ತಿಲ್ಲ. ದಸರಾ ವಿಚಾರದ ಬಗ್ಗೆ ಮಾತ್ರ ಈಗ ಚರ್ಚೆಯಲ್ಲಿ ಇದೆ. ಚಾಮುಂಡಿ ಬೆಟ್ಟದ್ದು ಅಲ್ಲ ಎಂದು ಸಿಎಂ ತಿಳಿಸಿದರು.

ಹೊಸ ಕಟ್ಟಡ ನಿರ್ಮಾಣ:
ನನ್ನ ಸ್ವಗ್ರಾಮದಲ್ಲಿ ನಾನು ಐದರಿಂದ ಏಳನೇ ತರಗತಿ ವರೆಗೆ ಓದಿದ ಶಾಲೆಗೆ ಹೊಸ ಕಟ್ಟಡ ಕಟ್ಟಿಸಿದ್ದೇನೆ. ಈ ಊರಿಗೆ ಪ್ರಾಥಮಿಕ ಶಾಲೆ
, ಹೈಸ್ಕೂಲ್, ಪಿಯು ಕಾಲೇಜ್ ಆಗಿದೆ. ವಿದ್ಯಾರ್ಥಿಗಳು ಸಿಗಲ್ಲ ಅಂತಾ ಡಿಗ್ರಿ ಕಾಲೇಜ್ ಮಾತ್ರ ಮಾಡಿಲ್ಲ. ಎಲ್ಲಾ ರೀತಿಯ ವೈದ್ಯಕೀಯ ಸೇವೆ ಕಲ್ಪಿಸಿದ್ದೇನೆ. ಊರಿನ ಋಣ ಯಾವಾಗಲೂ ಇದ್ದೇ ಇರುತ್ತದೆ. ಅದು ಯಾವಾಗಲೂ ಮುಗಿಯದ ಋಣ ಎಂದು ಸಿದ್ದರಾಮಯ್ಯ ಹೇಳಿದರು.

ಉದ್ಘಾಟನೆಗೆ ಆಹ್ವಾನ :
ಬಾನು ಮುಷ್ತಾಕ್ ಅವರಿಗೆ ಬೂಕರ್ ಪ್ರಶಸ್ತಿ ದೊರಕಿದೆ. ಎಷ್ಟು ಜನಕ್ಕೆ ಈ ಪ್ರಶಸ್ತಿ ಲಭಿಸಿದೆ ಎಂದ ಮುಖ್ಯಮಂತ್ರಿಗಳು
, ಅವರನ್ನು ಗೌರವಿಸಲು ದಸರಾ ಉದ್ಘಾಟನೆಗೆ ಅವಕಾಶ ನೀಡಲಾಗಿದೆ ಎಂದು ಹೇಳಿದರು.

Share This Article
error: Content is protected !!
";