“ಅತ್ಯುನ್ನತ ದೇಶ ದ್ರೋಹಿ”ಗಳ ಬಾಯಿ ಬಂದ್‌ ಆಗಲಿದೆಯಾ?

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಜಾಗತಿಕ ಹೂಡಿಕೆದಾರರ ವಿಶ್ವಾಸ ಕುಗ್ಗಿಸುತ್ತಿದ್ದ
, ಅರ್ಥವ್ಯವಸ್ಥೆಯ ಮೇಲೆ ಹಾನಿ ಮಾಡುತ್ತಿದ್ದ ಹಿಂಡನ್‌ಬರ್ಗ್‌ಸಂಸ್ಥೆಯ ಬಾಗಿಲು ಮುಚ್ಚಿದೆ. ಈ ಹಿಂಡನ್‌ಬರ್ಗ್‌ಸಂಸ್ಥೆಯ ಪೂರ್ವಾಗ್ರಹ ಪೀಡಿತ ವರದಿಗಳನ್ನು ಭಾರತೀಯ ಕಾಂಗ್ರೆಸ್  ಅತಿಯಾಗಿ ನೆಚ್ಚಿಕೊಂಡಿತ್ತು. ಭಾರತವನ್ನು ತಲ್ಲಣಗೊಳಿಸಲು ಯತ್ನಿಸಿದ ಈ ಹಿಂಡನ್‌ಬರ್ಗ್‌ಜೊತೆ ಕಾಂಗ್ರೆಸ್‌ಕೈ ಜೋಡಿಸಿತ್ತು ಎಂದು ಕಾಂಗ್ರೆಸ್ ವಿರುದ್ಧ ಬಿಜೆಪಿ ವಾಗ್ದಾಳಿ ಮಾಡಿದೆ.

ಹಿಂಡನ್‌ಬರ್ಗ್‌ವರದಿಯನ್ನು ಹಿಡಿದುಕೊಂಡು ಸಂಸತ್‌ಕಲಾಪವನ್ನು ಬಲಿ ತೆಗೆದುಕೊಂಡಿದ್ದ ಕಾಂಗ್ರೆಸ್‌, ದೇಶವ್ಯಾಪಿ ಪ್ರತಿಭಟನೆಯನ್ನೂ ನಡೆಸಿತ್ತು. ಅಂತಹ ಹಿಂಡನ್‌ಬರ್ಗ್‌ಇಂದು ನಾಮಾವಶೇಷವಾಗಿದೆ. ವಿದೇಶಿ ಶಕ್ತಿಗಳನ್ನು ನಂಬಿಕೊಂಡಿದ್ದ ಕಾಂಗ್ರೆಸ್ಸಿನ ಬಾಗಿಲು ಕೂಡಾ ಮುಂದಿನ ದಿನಗಳಲ್ಲಿ ಬಂದ್‌ಆಗಲಿದೆ ಎಂದು ಬಿಜೆಪಿ ಭವಿಷ್ಯ ನುಡಿದಿದೆ.

ಕಾಂಗ್ರೆಸ್‌ನಾಯಕ ರಾಹುಲ್ ಗಾಂಧಿ ಅವರು ವಿದೇಶಿ ಸಂಸ್ಥೆಗಳ ವಕ್ತಾರರಂತೆ ವರ್ತಿಸುತ್ತಿದ್ದರು. ಅಮೇರಿಕಾದ ಶ್ರೀಮಂತ ಉದ್ಯಮಿ ಸೊರೋಸ್‌ನ ತಾಳಮೇಳಕ್ಕೆ ಕುಣಿಯುತ್ತಿದ್ದರು.

ಕಾಂಗ್ರೆಸ್‌ನೆಚ್ಚಿಕೊಂಡಿದ್ದ ವಿದೇಶಿ ಸಂಸ್ಥೆಗಳು ಒಂದೊಂದಾಗಿಯೇ ತಮ್ಮ ಅಸ್ತಿತ್ವ ಕಳಚಿಕೊಳ್ಳುತ್ತಿವೆ. ಜಾರ್ಜ್ ಸೊರೋಸ್ ನಿಯಂತ್ರಿತ ಒಸಿಸಿಆರ್‌ಪಿ ಸಂಸ್ಥೆಯ ವರದಿಗಳನ್ನು ಉಲ್ಲೇಖಿಸಿ ರಾಹುಲ್‌ಗಾಂಧಿ ನಿರಂತರವಾಗಿ ಪ್ರಧಾನಿ ಮೋದಿ ಹಾಗೂ ಭಾರತದ ಉದ್ಯಮ ದಿಗ್ಗಜರ ಮೇಲೆ ಆರೋಪ‌ಮಾಡುತ್ತಿದ್ದರು.

ಈ ಸಂಸ್ಥೆ ಕೂಡಾ ಜಾರ್ಜ್ ಸೊರೋಸ್ ಅವರಿಂದ ಕೋಟ್ಯಂತರ ಡಾಲರ್ ಹಣ ಸ್ವೀಕರಿಸಿ, ತನ್ನದೇ ಆದ ಅಜೆಂಡಾ ಹೊಂದಿ ವರದಿಗಾರಿಕೆ ಮಾಡುತ್ತದೆ ಎಂಬ ವಿಚಾರ ಬಹಿರಂಗವಾಗಿತ್ತು ಎಂದು ಬಿಜೆಪಿ ತಿಳಿಸಿದೆ.

 ಇದೀಗ ಹಿಂಡನ್‌ಬರ್ಗ್‌ಸಂಸ್ಥೆ ಕೂಡಾ ತನ್ನ ಬಾಗಿಲು ಮುಚ್ಚಿರುವುದರಿಂದ ಕಾಂಗ್ರೆಸ್‌ನಾಯಕ ರಾಹುಲ್ ಗಾಂಧಿ ಅವರು ಅಸಹಾಯಕರಾಗಿದ್ದಾರೆ. ವಿದೇಶಿ ಶಕ್ತಿಗಳೊಂದಿಗೆ ಕೈಜೋಡಿಸಿ ದೇಶವನ್ನು ಅಸ್ಥಿರಗೊಳಿಸುವ “ಅತ್ಯುನ್ನತ ದೇಶದ್ರೋಹಿ”ಗಳ ಬಾಯಿ ಬಂದ್‌ಆಗಲಿದೆಯಾ? ಎಂದು ಬಿಜೆಪಿ ಪ್ರಶ್ನಿಸಿದ್ದಾರೆ.

 

Share This Article
error: Content is protected !!
";