ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲ್ಯೂಜೆ) ದಾವಣಗೆರೆ ಜಿಲ್ಲಾ ಸಮಿತಿ ಮತ್ತು ರಾಜ್ಯಸಮಿತಿಯ ಶಿಫಾರಸ್ಸಿನಂತೆ ಎಸ್ ಕೆ ಒಡೆಯರ್ ಇವರನ್ನು ದಾವಣಗೆರೆ ಜಿಲ್ಲೆಯಿಂದ ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟ(ಐ ಎಫ್ ಡಬ್ಲ್ಯೂ ಜೆ)ನವದೇಹಲಿಯ ರಾಷ್ಟ್ರೀಯ ಮಂಡಳಿಯ ಸದಸ್ಯರನ್ನಾಗಿ ಒಮ್ಮತದಿಂದ ಆಯ್ಕೆಮಾಡಲಾಗಿತ್ತು.
ಅದರಂತೆ ರಾಷ್ಟ್ರೀಯ ಅಧ್ಯಕ್ಷರಾದ ಬಿ ವಿ ಮಲ್ಲಿಕಾರ್ಜುನಯ್ಯ ರವರು ಎಸ್ ಕೆ ಒಡೆಯರ್ ಅವರನ್ನು ರಾಷ್ಟ್ರೀಯ ಮಂಡಳಿಯ ಸದಸ್ಯರನ್ನಾಗಿ ನೇಮಕ ಮಾಡಿ ಆದೇಶಿಸಿದ್ದರು.
ಪ್ರಸ್ತುತ ಅಧಿಕಾರದ ಅವಧಿಯು 2025 ಮಾರ್ಚ್ 31,ಕ್ಕೆ ಮುಕ್ತಾಯವಾಗಬೇಕಿತ್ತು ಆದರೆ ಎಸ್ ಕೆ ಒಡೆಯರ್ ರವರನ್ನು ಇನ್ನೊಂದು ಅವದಿಗೆ ಮುಂದುವರಿಸಲು ರಾಷ್ಟ್ರೀಯ ಅಧ್ಯಕ್ಷರು ತೀಮಾರ್ಮಾನಿಸಿದ್ದರಿಂದ ಎಸ್ ಕೆ ಒಡೆಯರ್ ರವರನ್ನು ಮತ್ತೊಂದು ಅವಧಿಗೆ ರಾಷ್ಟ್ರೀಯ ಮಂಡಳಿಯ ಸದಸ್ಯರನ್ನಾಗಿ ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ರಾಷ್ಟ್ರೀಯ ಅಧ್ಯಕ್ಷರಾದ ಬಿ ವಿ ಮಲ್ಲಿಕಾರ್ಜುನಯ್ಯ ರವರು ಮರು ನೇಮಕಮಾಡಿ ಆದೇಶ ನೀಡಿದ್ದಾರೆ. ಈ ಅವಧಿಯು 2027ಮಾರ್ಚ್ 31,ರ ವರೆಗೆ ಮುಂದು ವರಿಯಲಿದೆ ಎಂದು ತಿಳಿಸಿದ್ದಾರೆ.