ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ :
ಇತ್ತೀಚೆಗೆ ಶಿವಮೊಗ್ಗ ನಗರದಲ್ಲಿ ನಡೆದ ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಪೂರ್ವ ಮೆರವಣಿಗೆ ಬಂದೋಬಸ್ತ್ ಗೆ ಮಫ್ತಿಯಲ್ಲಿ ಭಾಗಿಯಾಗಿದ್ದ, ಮಹಿಳಾ ಪೊಲೀಸ್ ಸಿಬ್ಬಂದಿಯೋರ್ವರ ಮಾಂಗಲ್ಯ ಸರ ಕಳುವಾಗಿರುವ ಸಂಬಂಧ, ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಶಿವಮೊಗ್ಗ ಸಿಇಎನ್ ಪೊಲೀಸ್ ಠಾಣೆಯಸಿಬ್ಬಂದಿ ನಾಗರತ್ನ ಎಂಬುವರೇ ಮಾಂಗಲ್ಯ ಸರ ಕಳೆದುಕೊಂಡವರಾಗಿದ್ದಾರೆ. ಕಳುವಾದ ಮಾಂಗಲ್ಯ ಸರ ದ ಮೌಲ್ಯ ಸರಿಸುಮಾರು 44 ಸಾವಿರ ರೂ.ಗಳೆಂದು ಅಂದಾಜಿಸಲಾಗಿದೆ.
ಮಫ್ತಿ ಕರ್ತವ್ಯದಲ್ಲಿದ್ದ ಮಹಿಳಾ ಸಿಬ್ಬಂದಿಯು, ಗೋಪಿ ಸರ್ಕಲ್ ಗೆ ಆಗಮಿಸಿದಾಗ ಕೊರಳಲ್ಲಿನ ಮಾಂಗಲ್ಯ ಸರ ಇಲ್ಲದಿರುವುದು ಗೊತ್ತಾಗಿದೆ. ಸರ್ಕಲ್ ನಲ್ಲಿಯೇ ಸರ ಕಳುವಾಗಿರುವ ಅನುಮಾನ ವ್ಯಕ್ತಪಡಿಸಲಾಗಿದೆ. ದೊಡ್ಡಪೇಟೆ ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.