ಗಂಡ, ಮನೆ, ಮಕ್ಕಳನ್ನೇ ಬಿಟ್ಟು ಓಡಿ ಹೋಗಿದ್ದ ಮಹಿಳೆ ಇನ್ಸ್ಟಾಗ್ರಾಮ್​ನಲ್ಲಿ ಪರಿಚಯವಾದ ವ್ಯಕ್ತಿ ಮದುವೆ ಆಗಿದ್ದಾಳೆ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಗಂಡ, ಮನೆ, ಮಕ್ಕಳನ್ನೇ ಬಿಟ್ಟು ಓಡಿ ಹೋಗಿದ್ದ ಮಹಿಳೆಯೊಬ್ಬಳು ಇನ್ಸ್ಟಾಗ್ರಾಮ್​ನಲ್ಲಿ ಪರಿಚಯವಾದ ವ್ಯಕ್ತಿಯನ್ನು ವಿವಾಹವಾಗುವ ಮೂಲಕ ಅಚ್ಚರಿ ಮೂಡಿಸಿದ್ದಾಳೆ.
ಇನ್ಸ್ಟಾಗ್ರಾಮ್​ನಲ್ಲಿ
ಪ್ರಿಯಕರ ಜೊತೆ ಮದುವೆಯಾದ ಫೋಟೋ ಹಾಗೂ ವಿಡಿಯೋವನ್ನು ಹಂಚಿಕೊಂಡಿದ್ದನ್ನು ಪತಿ ವೀಕ್ಷಿಸಿ ಆಘಾತಗೊಂಡು ಪೊಲೀಸರಿಗೆ ದೂರು ನೀಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ಜರುಗಿದೆ.

ನೆಲಮಂಗಲ ಪೊಲೀಸ್ ಠಾಣೆಗೆ ಸಂತ್ರಸ್ತ ರಮೇಶ್ ಎಂಬುವವರು ಓಡಿ ಹೋಗಿರುವ ಪತ್ನಿ ವಿರುದ್ಧ ದೂರು ನೀಡಿದ್ದಾರೆ. 12 ವರ್ಷಗಳ ಹಿಂದೆ ನೇತ್ರಾವತಿಯನ್ನು ವಿವಾಹವಾಗಿದ್ದು, ನಮಗೆ 11 ವರ್ಷದ ಗಂಡು ಮಗುವಿದೆ. ಇನ್‌ಸ್ಟಾಗ್ರಾಮ್ನಲ್ಲಿ ಪರಿಚಯವಾದ ವ್ಯಕ್ತಿಯೊಂದಿಗೆ ಪತ್ನಿ ವಿವಾಹವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪೋಸ್ಟ್ ಮಾಡಿದ ಬಳಿಕವೇ 2ನೇ ವಿವಾಹದ ವಿಚಾರ ತಿಳಿದುಬಂದಿದೆ ಎಂದು ಸಂತ್ರಸ್ತ ರಮೇಶ್ ನೋವು ತೋಡಿಕೊಂಡಿದ್ದಾರೆ.

ಪತ್ನಿ ಮನೆ ಬಿಟ್ಟು ಓಡಿ ಹೋಗುವ ಸಂದರ್ಭದಲ್ಲಿ 50 ಲಕ್ಷ ರೂ. ಮೌಲ್ಯದ ಆಸ್ತಿ ದಾಖಲೆಗಳು ಸೇರಿದಂತೆ ಬೆಲೆ ಬಾಳುವ ವಸ್ತುಗಳನ್ನು ತೆಗೆದುಕೊಂಡು ಹೋಗಿದ್ದಾಳೆ ಎಂದು ಪತಿ ರಮೇಶ್ ಗಂಭೀರ ಆರೋಪ ಮಾಡಿದ್ದಾರೆ.

ಈ ಹಿಂದೆ ಕೂಡ ರಮೇಶ್ ತನ್ನ ಪತ್ನಿಯ ವಿರುದ್ಧ ವೈವಾಹಿಕ ಕಲಹಗಳಿಗೆ ಸಂಬಂಧಿಸಿದಂತೆ ದೂರು ನೀಡಿದ್ದರು. ಕಳೆದ ಒಂದು ವರ್ಷದ ಹಿಂದೆ ಮನೆ ಬಿಟ್ಟು ಹೋಗಿದ್ದ ನೇತ್ರಾವತಿ ಯಾರೊಂದಿಗೂ ಸಂಪರ್ಕದಲ್ಲಿರಲಿಲ್ಲ. ಪೋಷಕರ ಮನೆಗೆ ಹೋಗಿರಬೇಕೆಂದು ತಿಳಿದಿದ್ದೆ. ಅಲ್ಲೂ ಇಲ್ಲ ಎಂದು ತಿಳಿದ ಬಳಿಕ ನಾಪತ್ತೆ ದೂರು ದಾಖಲಿಸಿದ್ದೆ. ಇದೀಗ ಪತ್ನಿ ಇನ್‌ಸ್ಟಾಗ್ರಾಮ್ ನಲ್ಲಿ ಪರಿಚಯವಾದ ಸಂತೋಷ್ ಎಂಬ ವ್ಯಕ್ತಿಯೊಂದಿಗೆ ಓಡಿ ಹೋಗಿ ಮದುವೆ ಆಗಿದ್ದಾಳೆ. ನಾನು ಆಕೆಯನ್ನ ಚೆನ್ನಾಗಿಯೇ ನೋಡಿಕೊಂಡಿದ್ದರೂ ನನಗೆ ಮೋಸ ಮಾಡಿ ಓಡಿ ಹೋಗಿದ್ದಾಳೆ. ಮತ್ತೊಂದು ವಿವಾಹವಾಗಲು ಆಕೆ ನನ್ನ ವಿರುದ್ಧ ಕೌಂಟುಬಿಕ ಹಿಂಸಾಚಾರ ದೂರು ದಾಖಲಿಸಿದ್ದಾಳೆ. ಮನೆಯಲ್ಲಿದ್ದ ಎಲ್ಲಾ ಬೆಲೆ ಬಾಳುವ ವಸ್ತುಗಳನ್ನು ತೆಗೆದುಕೊಂಡು ಹೋಗಿದ್ದಾಳೆಂದು ರಮೇಶ್ ಆರೋಪಿಸಿದ್ದಾರೆ.

ಇದರ ಮಧ್ಯೆ ಓಡಿ ಹೋಗಿರುವ ಪತ್ನಿ ನೇತ್ರಾವತಿ ಕೂಡಾ ಪೊಲೀಸರ ನೆರವು ಕೋರಿದ್ದಾರೆ. ಮೊದಲ ಪತಿ ಕುಡಿತದ ಚಟಕ್ಕೆ ಬಿದ್ದಿದ್ದು, ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡಿರುವುದಾಗಿ ದೂರಿದ್ದಾಳೆ, ಅಲ್ಲದೆ ತನ್ನ ಬಟ್ಟೆ ಹಾಗೂ ಇತರೆ ವಸ್ತುಗಳನ್ನು ಪಡೆಯಲು ಪೊಲೀಸರ ನೆರವು ಕೋರಿದ್ದಾಳೆ. ಈ ಸಂಬಂಧ ನೆಲಮಂಗಲ ಪೊಲೀಸರು ದೂರು ದಾಖಲಿಸಿಕೊಂಡಿದ್ದು ವಿಚಾರಣೆ ನಡೆಸುತ್ತಿದ್ದಾರೆ.

Share This Article
error: Content is protected !!
";