ಧರ್ಮಸ್ಥಳ ಪ್ರಕರಣ ಮರು ತನಿಖೆ ಮಾಡಲು ಮಹಿಳೆಯರ ಒತ್ತಾಯ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ವಿವಿಧ ಮಹಿಳಾ ಸಂಘಟನೆಗಳ ಸದಸ್ಯರು, ಲೇಖಕಿಯರು ಹಾಗೂ ಮಹಿಳಾ ಹೋರಾಟಗಾರ್ತಿಯರ ನಿಯೋಗದವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ, ಧರ್ಮಸ್ಥಳ ಪ್ರಕರಣದ ತನಿಖೆಯಲ್ಲಿ ಎಸ್‌ಐಟಿಯ ಸ್ವಾತಂತ್ರ್ಯ ರಕ್ಷಣೆ, ಹಿಂದಿನ ಪ್ರಕರಣಗಳು ಹಾಗೂ ಸಾಕ್ಷಿಗಳ ಸಾವಿನ ಪ್ರಕರಣಗಳ ಮರುತನಿಖೆ ಮಾಡುವಂತೆ ಮನವಿ ಮಾಡಿದ್ದಾರೆ.

ಈ ಪ್ರಕರಣದಲ್ಲಿ ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳ ಮೇಲೆ ಕ್ರಮ ಜರುಗಿಸುವುದು ಹಾಗೂ ಮಹಿಳೆಯರ ಸುರಕ್ಷತೆಗಾಗಿ ಸೂಕ್ತ ಭದ್ರತಾ ಕ್ರಮಗಳನ್ನು ಕೈಗೊಳ್ಳುವುದು ಇನ್ನು ಮುಂತಾದ ವಿಷಯಗಳ ಬಗ್ಗೆ ಚರ್ಚಿಸಿ,

- Advertisement - 

ಮನವಿ ಸಲ್ಲಿಸಿ, ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ತಡೆಗಟ್ಟಲು ಉಗ್ರಪ್ಪ ಸಮಿತಿಯ ವರದಿ ಜಾರಿಗೆ ಮುಂದಾಗಿರುವ ಸರ್ಕಾರದ ನಿಲುವಿಗೆ ಮಹಿಳೆಯರ ನಿಯೋಗ ಧನ್ಯವಾದ ಸಲ್ಲಿಸಿದರು.

 

- Advertisement - 

 

 

Share This Article
error: Content is protected !!
";