ಮಹಿಳಾ ವಿಚಾರ ಗೋಷ್ಠಿ ಕಾರ್ಯಕ್ರಮ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ದೊಡ್ಡಬಳ್ಳಾಪುರ ತಾಲ್ಲೂಕಿನ, ಮಧುರೆ ಹೋಬಳಿ  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇವರ ವತಿಯಿಂದ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.

ಮಹಿಳಾ ವಿಚಾರ ಗೋಷ್ಠಿ  ಉದ್ಘಾಟನೆ ಮಾಡಿದ ಡಾ.ಆಂಜನಪ್ಪ, ವರಲಕ್ಷ್ಮಿ ಪಿಎಸ್ಐ ದೊಡ್ಡಬೆಳವಂಗಲ ಉಮಾರಬ್ಬ ನಿರ್ದೇಶಕರು ಬೆಂಗಳೂರು ಗ್ರಾಮಾಂತರ ಜಿಲ್ಲೆ ನಂತರ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮ ಕುರಿತು ಮಾತನಾಡಿದ ಡಾ.ಆಂಜನಪ್ಪ ಇತ್ತಿಚಿನ ದಿನಗಳಲ್ಲಿ ಥೈರಾಯ್ಡ್ ಹಾರ್ಮೋನ್ ಸಮಸ್ಯೆ ಹೆಚ್ಚಾಗುತ್ತಿದ್ದು ಹದಿಹರೆಯದ ವಯಸ್ಸಿನಲ್ಲಿ ಥೈರಾಯ್ಡ್ ಗ್ರಂಥಿ ಸಮಸ್ಯೆ ಬರುತ್ತಿದ್ದು ಸೂಕ್ತ ಚಿಕಿತ್ಸೆ ಪಡೆಯುವಂತೆ ತಿಳಿಸಿದರು.

ಕಿಡ್ನಿ ಸಮಸ್ಯೆ ಬಗ್ಗೆ ಜಾಗೃತಿ ಮೂಡಿಸಿದರು. ಚಿಕ್ಕ ವಯಸ್ಸಿನಲ್ಲೇ ಹೃದಯಾಘಾತ ವಾಗುವುದು ಹೆಚ್ಚಾಗುತ್ತಿದೆ ಇದಕ್ಕೆಲ್ಲ ನಮ್ಮ ಆಹಾರ ಪದ್ಧತಿ ಹಾಗೂ ಜೀವನ ಶೈಲಿ ಕಾರಣ ಎಂದು ತಿಳಿಸಿದರು. 

ಮಹಿಳೆಯರಲ್ಲಿ ಅತೀ ಹೆಚ್ಚು ಕಂಡುಬರುತ್ತಿರುವ ಗರ್ಭಕೋಶದ ಕ್ಯಾನ್ಸರ್ ಬಗ್ಗೆ ಮಾಹಿತಿ ನೀಡುತ್ತಾ ಇತ್ತಿಚಿನ ದಿನಗಳಲ್ಲಿ  ಆಹಾರ ಪದ್ಧತಿ ಯಿಂದ ಗರ್ಭಕೋಶದ ಸಮಸ್ಯೆ ಬರುತ್ತಿದ್ದು ಇದರಿಂದ ಮರಣದ ಸಂಖ್ಯೆ ಹೆಚ್ಚುತ್ತಿದೆ ಇದರ ಬಗ್ಗೆ ಗಮನ ಹರಿಸಿ ಸೂಕ್ತ ಚಿಕಿತ್ಸೆ ಪಡೆಯುವಂತೆ ಸೂಚಿಸಿದರು.

ಜಿಲ್ಲಾ ನಿರ್ದೇಶಕರಾದ ಉಮಾರಬ್ಬ ಮಾತನಾಡಿ ಮಹಿಳೆಯರಿಗೆ ಆತ್ಮವಿಶ್ವಾಸವೇ ಮೂಡಿಸಲು ಜ್ಞಾನ ವಿಕಾಸದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 

ಮಹಿಳೆಯರಿಗೆ, ಕಾನೂನು, ಆರೋಗ್ಯದ ಬಗ್ಗೆ ಪ್ರತಿ ತಿಂಗಳು ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ನೀಡಲಾಗುತ್ತಿದೆ.

 ಈ ಕಾರ್ಯಕ್ರಮದಲ್ಲಿ ತಾಲೂಕಿನ ಯೋಜನಾಧಿಕಾರಿ ಸುಧಾ ಭಾಸ್ಕರ್  ಒಕ್ಕೂಟದ ಅಧ್ಯಕ್ಷೆ ವಸಂತಾ ಸಮನ್ವಾಯಾದಧಿಕಾರಿ ಛಾಯಾ ಕುಮಾರಿ, ಕೃಷಿ ಮೇಲ್ವಿಚಾರಕ ಲೋಹಿತ್ ಗೌಡ, ವಲಯ ಮೇಲ್ವಿಚಾರಕಿ ಗಿರಿಜಾ, ರೇಣುಕಾ ಪ್ರಸಾದ್  ಹಾಗೂ  ಸಂಘದ ಸೇವಾ ಪ್ರತಿನಿಧಿಗಳು , VLE ಸೇವಾದಾರರು, ಸಂಘದ ಸದಸ್ಯರು ಹಾಜರಿದ್ದರು.

 ಇತ್ತಿಚಿನ ದಿನಗಳಲ್ಲಿ ಖಿನ್ನತೆ ಇಂದ ಕೆಲಸದ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಳ್ಳುವವರು ಹೆಚ್ಚಾಗಿದ್ದು ಇದರ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಆಗಬೇಕಿದೆ. 

ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ ಪ್ರಕರಣದಲ್ಲಿ ಸರ್ಕಾರ ಸಕಾಲದಲ್ಲಿ ನ್ಯಾಯ ಒದಗಿಸುವ ಕೆಲಸ ಮಾಡುತ್ತಿದೆ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿದಲ್ಲಿ ಮುಂದೆ ಉತ್ತಮ ನಾಗರಿಕ ರಾಗುತ್ತಾರೆ”.
ವರಲಕ್ಷ್ಮಿ, ಪಿಎಸ್ಐ, ದೊಡ್ಡಬೆಳವಂಗಲ ಠಾಣೆ.

 

- Advertisement -  - Advertisement - 
Share This Article
error: Content is protected !!
";