5 ವರ್ಷಗಳಿಂದ ಸಮವಸ್ತ್ರ ನೀಡಿಲ್ಲ ಕಾರ್ಮಿಕರ ಆಕ್ರೋಶ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ನಗರಸಭೆಯಲ್ಲಿ 5 ವರ್ಷಗಳಿಂದ ಪೌರಕಾರ್ಮಿರಿಗೆ ಸಮವಸ್ತçಗಳನ್ನು ನೀಡಿಲ್ಲ. ಸುರಕ್ಷಾ ಪರಿಕರಗಳನ್ನು ಸಹ ಸಮರ್ಪಕವಾಗಿ ಕೊಡುವುದಿಲ್ಲ. ಸಭೆಗೆ ನಮ್ಮ ಹಣದಿಂದ ಕೊಂಡ ಸಮವಸ್ತ್ರ ಧರಿಸಿ ಬಂದಿದ್ದೇವೆ. ಇನ್ನೂ ಖಾಸಗಿ ಆಸ್ಪತ್ರೆಯಲ್ಲಿ ಪೌರ ಕಾರ್ಮಿಕರಿಗೆ ವೈದ್ಯಕೀಯ ತಪಾಸಣೆ ವರದಿಗಳನ್ನು ನೀಡುತ್ತಿಲ್ಲ. ಅಗತ್ಯ ಇರುವಷ್ಟು ಔಷಧಿಗಳನ್ನು ಕೊಡುವುದಿಲ್ಲ, ಎಂದು ಆರೋಪಿಸಿದ ಪೌರಕಾರ್ಮಿಕರು, ಸದ್ಯ ಜಿಲ್ಲಾ ಆಸ್ಪತ್ರೆ ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ ವೈದ್ಯಕೀಯ ತಪಾಸಣೆ ಮಾಡಿಸಲಾಗುತ್ತಿದೆ.

ಆದರೆ ಜನಜಂಗುಳಿಯ ನಡುವೆ ಪೌರ ಕಾರ್ಮಿಕರು ಅಗತ್ಯ ಇರುವ ಎಲ್ಲಾ ಪರೀಕ್ಷೆ ಮಾಡಿಸಿ ಚಿಕಿತ್ಸೆ ಪಡೆಯಲು ತೊಂದರೆಯಾಗುತ್ತದೆ, ಹೀಗಾಗಿ ವರ್ಷದ 365 ದಿನವೂ ಆಸ್ಪತ್ರೆಗೆ ತೆರಳಿ ಉಚಿತ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಲು ಅನುವಾಗುವಂತೆ ಆರೋಗ್ಯ ಕಾರ್ಡು ನೀಡಬೇಕು ಎಂದು ಪೌರಕಾರ್ಮಿಕರಾದ ರಾಜಪ್ಪ, ತನ್ವೀರ್ ಪಾಷ, ಕಾಮಾಕ್ಷೀ ಮನವಿ ಮಾಡಿದರು.  ಈ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಆಯೋಗದ ಅಧ್ಯಕ್ಷರು ಭರವಸೆ ನೀಡಿದರು.

- Advertisement - 

ಪರಿಹಾರ ಧನ ಪಾವತಿಸಲು ಬೇಡಿಕೆ:
ಚಿತ್ರದುರ್ಗ ನಗರಸಭೆಯಲ್ಲಿ ನೇರ ಪಾವತಿಯಡಿ ಕೆಲಸ ಮಾಡುತ್ತಿದ್ದ 3 ಸಫಾಯಿ ಕರ್ಮಚಾರಿಗಳು ಮರಣ ಹೊಂದಿದ್ದಾರೆ. ಅವರಿಗೆ ಪರಿಹಾರ ಧನ ನೀಡುವುದು ಬಾಕಿಯಿದೆ. ಇದರ ಪಾವತಿಗೆ ಕ್ರಮ ಕೈಗೊಳ್ಳಬೇಕು ಎಂದು ಪೌರ ಕಾರ್ಮಿಕ ನವೀನ್ ಕುಮಾರ್ ಅಧ್ಯಕ್ಷರಲ್ಲಿ ಕೋರಿಕೊಂಡರು.

 

- Advertisement - 

Share This Article
error: Content is protected !!
";