ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ವತಿಯಿಂದ Cyber Security and Internet Safty ವಿಷಯದ ಕುರಿತು ಮೇಲೆ ಫೆಬ್ರವರಿ 05 ರಿಂದ 07ರ ವರೆಗೆ ಮೂರು ದಿನಗಳ ಕಾರ್ಯಾಗಾರವನ್ನು ಅಕಾಡೆಮಿಯ ಕಚೇರಿಯಲ್ಲಿ ಹಮ್ಮಿಕೊಳಲಾಗಿದೆ.
ಈ ಕಾರ್ಯಾಗಾರದಲ್ಲಿ Cyber Security and Internet Safty ಬಗ್ಗೆ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಆನ್ಲೈನ್ ವಂಚನೆಗಳನ್ನು ತಡೆಗಟ್ಟಲು ತೆಗೆದುಕೊಳ್ಳಬೇಕಾದ ಮುಂಜಾಗ್ರತ ಕ್ರಮಗಳು ಮತ್ತು ಅಂತರ್ಜಾಲ ಸುರಕ್ಷತೆ ಉಪಯೋಗದ ಬಗ್ಗೆ ವಿವಿಧ ನುರಿತ ತಜ್ಞರಿಂದ ಉಪನ್ಯಾಸಗಳನ್ನು ಏರ್ಪಡಿಸಲಾಗುವುದು.
ಸ್ನಾತಕೋತ್ತರ ವಿಜ್ಞಾನ ವಿದ್ಯಾರ್ಥಿಗಳು, ಸಂಶೋಧನಾ ವಿದ್ಯಾರ್ಥಿಗಳು ಪ್ರಾಧ್ಯಾಪಕರು ಭಾಗವಹಿಸಬಹುದಾಗಿದ್ದು, ಆಸಕ್ತರು 2025ನೇ ಜನವರಿ 31ರ ಒಳಗಾಗಿ Google form https://forms.gle/9fds6N5vjzLpjNGX7 ಮೂಲಕ ನೊಂದಾಯಿಸಿಕೊಳ್ಳಬಹುದಾಗಿದೆ. ನೊಂದಣಿ ಶುಲ್ಕ ರೂ 2000/-ಗಳನ್ನು ನಿಗದಿಪಡಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಶ್ರೀನಿವಾಸು ವಿ.ಕೆ. ಮೊ.ಸಂ: 9620767819ನ್ನು ಅಥವಾ ಸ್ಥಿರ ದೂರವಾಣಿ ಸಂ. 29721550 ಸಂಪರ್ಕಿಸಬಹುದು. ಅಥವಾ ಅಕಾಡೆಮಿಯ ವೆಬ್ ಸೈಟ್ https://:kstacademy.in ವೀಕ್ಷಿಸಬಹುದಾಗಿದೆ ಎಂದು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಎ.ಎಂ. ರಮೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

