ಡೆಂಗ್ಯೂ ಜ್ವರ ನಿಯಂತ್ರಣ ಮತ್ತು ಮುಂಜಾಗ್ರತಾ ಕ್ರಮಗಳ ಕುರಿತು ಕಾರ್ಯಾಗಾರ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ನೀರಿನಲ್ಲಿ ಹುಳಗಳು ಸೊಳ್ಳೆಯ ಮರಿಗಳು ಮನೆಯ ಒಳಗಡೆ ನೀರು ಶೇಖರಣ ತಾಣಗಳು ಮತ್ತು ಮಳೆಗಾಲದಲ್ಲಿ ಮನೆಯ ಹೊರಗಡೆ ಘನ ತ್ಯಾಜ್ಯ ವಸ್ತುಗಳಲ್ಲಿ ಮಳೆ ನೀರು ಶೇಖರಣೆಯಾಗಿ ನೀರಿನಲ್ಲಿ ಹುಳಗಳಾಗುತ್ತವೆ. ನೀರಿನಲ್ಲಿನ ಹುಳಗಳು ಸೊಳ್ಳೆಯ ಮರಿಗಳು ಶುದ್ಧವಾದ ನೀರಲ್ಲಿ ಬೆಳೆದ ಸೊಳ್ಳೆ ಹಗಲು ಹೊತ್ತು ಕಚ್ಚುವುದರಿಂದ ಡೆಂಗ್ಯೂ ಜ್ವರ ಮತ್ತು ಚಿಕನ್ ಗೂನ್ಯಾ ಬರುವ ಸಾಧ್ಯತೆ ಇದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಹೇಳಿದರು.

ಇಲ್ಲಿನ ಬುದ್ಧನಗರ ಆರೋಗ್ಯ ಕೇಂದ್ರದಲ್ಲಿ ಸೋಮವಾರ ಡೆಂಗ್ಯೂ ಜ್ವರ ನಿಯಂತ್ರಣ ಮತ್ತು ಮುಂಜಾಗ್ರತಾ ಕ್ರಮಗಳ ಕುರಿತು ಚಿತ್ರದುರ್ಗ ತಾಲ್ಲೂಕಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಹಾಸ್ಟೆಲ್ ವಾರ್ಡನ್‍ಗಳಿಗೆ ಆಯೋಜಿಸಿದ ಅಡ್ವೊಕೆಸಿ ಕಾರ್ಯಗಾರದಲ್ಲಿ ಅವರು ಮಾತನಾಡಿದರು.

- Advertisement - 

 ಮಳೆಗಾಲವಾದ್ದರಿಂದ ಮನೆಯ ಹೊರಗಡೆ ಘನತ್ಯಾಜ್ಯ ವಸ್ತುಗಳಲ್ಲಿ ಶುದ್ಧ ನೀರು ಶೇಖರಣೆಯಾಗುತ್ತಿದ್ದು, ಶುದ್ಧ ನೀರಿನಲ್ಲಿ ಬೆಳೆಯುವ ಸೊಳ್ಳೆಯಿಂದ ಡೆಂಗ್ಯೂ ಜ್ವರ ಮತ್ತು ಚಿಕನ್ ಗುನ್ಯಾ ಬರುವ ಸಾಧ್ಯತೆ ಇದ್ದು, ಡೆಂಗ್ಯೂ ಜ್ವರಕ್ಕೆ ನಿಗಧಿತವಾದ ಚಿಕಿತ್ಸೆ ಇಲ್ಲ ಮುಂಜಾಗ್ರತೆ ಬಹುಮುಖ್ಯ. ಘನತ್ಯಾಜ್ಯ ವಿಲೇವಾರಿ ಮನೆಯಲ್ಲಿನ ನೀರಿನ ತಾಣಗಳ ಸ್ವಚ್ಛತೆ ಕಾಪಾಡಿಕೊಂಡು ಮುಂಜಾಗ್ರತಾ ಕ್ರಮಗಳನ್ನು ಪಾಲಿಸಿ ರೋಗ ಬಾರದಂತೆ ನಿಗಾ ವಹಿಸಬೇಕೆಂದರು. 

ಜಿಲ್ಲಾ ಕೀಟಶಾಸ್ತ್ರಜ್ಞೆ ನಂದಕಡಿ ಮಾಹಿತಿ ನೀಡುತ್ತಾ, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಹಾಸ್ಟೆಲ್ ವಾರ್ಡನ್‍ಗಳ ಪಾತ್ರ ತುಂಬಾ ಮಹತ್ವದ್ದು, ಆರೋಗ್ಯ ಇಲಾಖೆ ಅಧಿಕಾರಿಗಳು ಲಾರ್ವ ಸರ್ವೆ ಕೈಗೊಂಡು ಸಾರ್ವಜನಿಕರಿಗೆ ಸೊಳ್ಳೆಯಿಂದ ಹರಡುವ ರೋಗಗಳ ಕುರಿತು ಜಾಗೃತಿ ಮೂಡಿಸುತ್ತಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಡೆಂಗ್ಯೂ ಪ್ರಕರಣಗಳು ಕಡಿಮೆಯಾಗುತ್ತಿವೆ.

- Advertisement - 

ಆದರೆ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಗ್ರಾಮ ಸ್ವಚ್ಛತೆಗೆ ಆದ್ಯತೆ ನೀಡಿ, ಗ್ರಾಮಗಳಲ್ಲಿ ಅವರವರ ಮನೆಯ ಮುಂದೆ ಸಾರ್ವಜನಿಕರು ಸ್ವಚ್ಛತೆ ಕಾಪಾಡಲು ತಿಳಿಸುವುದು ನೀರು ನಿಲ್ಲದಂತೆ ನಿಗಾವಹಿಸಿ, ಕಟ್ಟಡ ನಿರ್ಮಾಣ ಪ್ರದೇಶ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಶುದ್ಧ ನೀರಿನ ಸಂಗ್ರಹಣ ತಾಣಗಳಲ್ಲಿ ಸೊಳ್ಳೆ ಉತ್ಪತ್ತಿಯಾಗದಂತೆ ಗ್ರಾಮ ಸಭೆಯಲ್ಲಿ ಮಾಹಿತಿ ನೀಡುವುದು,

ಮುಂಜಾಗ್ರತಾ ಕ್ರಮಗಳಾದ ಸೊಳ್ಳೆ ನಿಯಂತ್ರಣ ಕುರಿತು ರೋಗ ಹರಡದಂತೆ ಸಾರ್ವಜನಿಕರ ಸಹಕಾರದಿಂದ ಮುಂಜಾಗ್ರತೆ ವಹಿಸಬೇಕು ಎಂದರು.

ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ ಅವರು ಸೊಳ್ಳೆಯ ಜೀವನಚಕ್ರ, ಸ್ವಯಂ ರಕ್ಷಣಾ ವಿಧಾನಗಳು, ಮುಂಜಾಗ್ರತಾ ಕ್ರಮಗಳ ಬಗ್ಗೆ ಜಾನಪದ ಶೈಲಿಯಲ್ಲಿ ಹಾಡಿನ ಮುಖಾಂತರ ಗಮನ ಸೆಳೆದರು. ಪೆÇೀಸ್ಟರ್ಸ್ ಪ್ರದರ್ಶನ ಕರಪತ್ರ ಹಂಚಿಕೆ ಮಾಡಲಾಯಿತು.

ಕಾರ್ಯಗಾರದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೃಷ್ಣ ನಾಯಕ್, ವೈದ್ಯಾಧಿಕಾರಿ ಡಾ. ಸುರೇಂದ್ರ. ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಪ್ರವೀಣ್ ಕುಮಾರ್, ಪಾರ್ವತಿ, ಕೇಶವ, ಮಾನ್ಯ. ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಹಾಸ್ಟೆಲ್ ವಾರ್ಡನ್‍ಗಳು, ಆರೋಗ್ಯ ಸಿಬ್ಬಂದಿಗಳಾದ ಅಕ್ಷಯ್, ನಿಂಗೇಶ್ ಇದ್ದರು.

 

 

Share This Article
error: Content is protected !!
";