ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಾಮಾಜಿಕ, ನ್ಯಾಯ, ಕುಟುಂಬ, ಶಿಕ್ಷಣ ವ್ಯವಸ್ಥೆಯನ್ನು ಒಂದೊಂದಾಗಿ ನಾವೇ ಸರ್ಕಾರಕ್ಕೆ ಒಪ್ಪಿಸಿದ್ದೇವೆ. ಸಮಾಜ ಸರಕಾರದ ಅಧೀನವಾಗುವುದು ದೈನ್ಯ ಪರಿಸ್ಥಿತಿಯಾಗಿದೆ. ಪ್ರತಿಯೊಂದು ವ್ಯವಸ್ಥೆಯಲ್ಲಿ ಸಮಾಜದ ಜನರು ಧರ್ಮದ ಆಧಾರವನ್ನು ಇಟ್ಟುಕೊಂಡು ಜೀವನ ನಡೆಸಿದರೆ ನಮ್ಮ ಸರ್ವಾಂಗೀಣ ಉನ್ನತಿಯಾಗುತ್ತದೆ. ಸರ್ಕಾರದ ಹಸ್ತಕ್ಷೇಪದಿಂದ ದೇವಸ್ಥಾನಗಳನ್ನು ಹಿಂಪಡೆದರ ಮಾತ್ರ ಪುನಃ ಸಮಾಜದ ಅಭಿವೃದ್ಧಿ ಮಾಡಲು ಸಾಧ್ಯವಾಗಬಹುದು ಎಂದು ಶ್ರೀ ಅಭಿನವ ಶಂಕರ ಭಾರತಿ ಮಹಾಸ್ವಾಮೀಜಿ ಹೇಳಿದರು.
ದೇವಸ್ಥಾನಗಳ ಸಂಸ್ಕೃತಿಯ ರಕ್ಷಣೆಗಾಗಿ ಕರ್ನಾಟಕ ಮಂದಿರ ಮಹಾಸಂಘ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಆಯೋಜಿತ ‘ಕರ್ನಾಟಕ ರಾಜ್ಯ ದ್ವಿತೀಯ ಮಂದಿರ ಅಧಿವೇಶನ‘ವು ಗಂಗಮ್ಮ ತಿಮ್ಮಯ್ಯ ಕನ್ವೆಂಷನ್ ಹಾಲ್, ಬಸವೇಶ್ವರ ನಗರ, ಬೆಂಗಳೂರಿನಲ್ಲಿ ಎರಡನೆಯ ದಿನದ ಕಾರ್ಯಕ್ರಮದಲ್ಲಿ ಸನಾತನ ಪಂಚಾಂಗ ಆ್ಯಂಡ್ರಾಯ್ಡ್ ಆ್ಯಪ್ 2025 ಇದರ ಲೋಕಾರ್ಪಣೆ ಮಾಡಿ ಆಯುರ್ವೇದ ಪಾಲಿಸಿ ಔಷಧಿಗಳಿಲ್ಲದೇ ಆರೋಗ್ಯವಂತರಾಗಿ ಇದರ ಈ-ಪುಸ್ತಕ ಬಿಡುಗಡೆ ಮಾಡಿ ಸ್ವಾಮೀಜಿ ಮಾತನಾಡಿದರು.
ಧರ್ಮ ಪಾಲನೆಯಿಂದಲೇ ವಿಶ್ವದ ಶಾಂತಿ ಸಾಧ್ಯ!
ಸಂಸ್ಕೃತಿಯನ್ನು ಬೆಳೆಸುವ ಕಾರ್ಯ ದೇವಸ್ಥಾನ ಮಾಡಬಲ್ಲದು. ವೇದ ಪಾರಾಯಣ , ಸಾಮೂಹಿಕ ಪೂಜೆ, ಯಜ್ಞ ಇತ್ಯಾದೆಗಳ ಮೂಲಕ ದೇವಸ್ಥಾನ ಮತ್ತು ಮಠಗಳಲ್ಲಿ ಜಾಗೃತಿ ಮೂಡಿಸಬೇಕು. ಧರ್ಮದಿಂದಲೇ ವಿಶ್ವದಶಾಂತಿ, ಮಾನವ ಧರ್ಮದ ಮೌಲ್ಯವನ್ನು ಎತ್ತಿಹಿಡಿದಾಗ ವಿಶ್ವಕಲ್ಯಾಣ ಸಾಧ್ಯ. ವಿಶ್ವವೇ ನಮ್ಮ ಮನೆ, ಲೋಕಾ ಸಮಸ್ತಾ ಸುಖಿನೋ ಭವಂತು| ಎಂಬ ಧ್ಯೇಯವನ್ನಿಟ್ಟು ಧರ್ಮದ ರಕ್ಷಣೆ ಮಾಡಲು ಸ್ಕಂದೇಶ್ವರ ಸ್ವಾಮಿ ದೇವಸ್ಥಾನದ ಪೂಜ್ಯ ಸಿಧ್ಧಲಿಂಗ ಸ್ವಾಮೀಜಿ ತಿಳಿಸಿದರು.
ಹಿಂದೂ ಸಂಸ್ಕೃತಿ ಉಳಿವಿಗಾಗಿ ಜಾಗೃತಿ ಅಗತ್ಯ-
ಹಿಂದೂ ಧರ್ಮ, ಮತ್ತು ಸಂಸ್ಕೃತಿ ಉಳಿಸಿ ಬೆಳೆಸುವ ಮತ್ತು ಹಿಂದೂ ಧರ್ಮ ಜಾಗೃತಿ ಕಾರ್ಯ ಪ್ರತಿಯೊಂದು ದೇವಸ್ಥಾನದಲ್ಲಿ ಆಗಬೇಕೆಂಬುದರ ಮಹತ್ವವನ್ನು ವೇದ ಬ್ರಹ್ಮ ಶ್ರೀ ಇಂದ್ರಾಚಾರ್ಯರು ತಿಳಿಸಿದರು.
ಪಾಕಿಸ್ತಾನದಲ್ಲಿ ಸನಾತನ ಬೋರ್ಡ್ ಇಲ್ಲ, ಬಾಂಗ್ಲಾದೇಶದಲ್ಲಿ ಸನಾತನ ಬೋರ್ಡ್ ಇಲ್ಲ, ಹಾಗಿದ್ದರೆ ಭಾರತದಲ್ಲಿ ವಕ್ಫ್ ಬೋರ್ಡ್ ಯಾಕೆ? ಎಂದು ಸುನಿಲ್ ಘನವಟ್ ಪ್ರಶ್ನಿಸಿದರು.
ಇಂದು ದೇವಸ್ಥಾನಗಳ ಪವಿತ್ರ ಭೂಮಿ ಒಂದು ರಾಕ್ಷಸಿ ಕಾನೂನಿನ ಮೂಲಕ ವಕ್ಫ್ ಬೋರ್ಡ್‌ನ ವಶವಾಗುತ್ತಿದೆ. ವಕ್ಫ್ ಬೋರ್ಡ್‌ನ ಮೂಲಕ ಯಾರ ಭೂಮಿಯೇ ಇರಲಿ, ಅದಕ್ಕೆ ಒಂದು ನೋಟಿಸ್ ಕೊಟ್ಟು ಭೂಮಿಯನ್ನು ವಕ್ಫ್ ವಶಪಡಿಸಿಕೊಳ್ಳಬಹುದು. ಕೇವಲ ನಾಗರಿಕರದ್ದಲ್ಲ, ಕರ್ನಾಟಕ ರಾಜ್ಯದ ಸುಮಾರು ೨೫೦೦೦ ಎಕರೆ ಭೂಮಿಯ ಮೇಲೆ ವಕ್ಫ್ ದಾವೆ ಹೂಡಿದೆ.
ಭಾರತದಲ್ಲಿ ಇಂತಹ ಅನೇಕ ಕ್ಷೇತ್ರಗಳನ್ನು ವಕ್ಫ್ ಬೋರ್ಡ್ ಅನಧಿಕೃತವಾಗಿ ವಶಪಡಿಕೊಂಡಿದೆ. ಭಾರತದಲ್ಲಿ ೯ ಲಕ್ಷ ೫೦ ಸಾವಿರ ಎಕರೆ ಜಾಮೀನು ವಕ್ಫ್ ಬೋರ್ಡ್ ದ್ದಾಗಿದೆ. ದೇವಸ್ಥಾನಕ್ಕೆ ಸಂಬಂಧಿಸಿದ ಕಾಗದಪತ್ರಗಳನ್ನು, ದಾಖಲೆಗಳನ್ನು ನವೀಕರಿಸಿ ವಕ್ಫ್ ಬೋರ್ಡ್ ನ ಸಂಕಟದಿಂದ ದೇವಸ್ಥಾನಗಳನ್ನು ರಕ್ಷಿಸಿ ಎಂದು ಸುನಿಲ್ ಘನವಟ್ ಕರೆ ನೀಡಿದರು.
ಕರ್ನಾಟಕ ಮಂದಿರ ಅಧಿವೇಶನಕ್ಕೆ ತುಮಕೂರು ಮತ್ತು ಬೆಂಗಳೂರು ಜಿಲ್ಲೆಯಿಂದ 34 ಕ್ಕೂ ಅಧಿಕ ದೇವಸ್ಥಾನದ ವಿಶ್ವಸ್ಥರು ಪಾಲ್ಗೊಂಡಿದ್ದು ಇಲ್ಲಿ ನಡೆದ ಗುಂಪು ಚರ್ಚೆಗಳಲ್ಲಿ ತಮ್ಮ ತಮ್ಮ ಜಿಲ್ಲೆಯಲ್ಲಿನ ಮಂದಿರಗಳಲ್ಲಿ ಧರ್ಮ ಶಿಕ್ಷಣ ವರ್ಗಗಳನ್ನು ಪ್ರಾರಂಭಿಸುವುದು, ಧರ್ಮ ಶಿಕ್ಷಣ ನೀಡುವ ಫಲಕಗಳನ್ನು ಅಳವಡಿಸುವುದು, ಸರಕಾರೀಕರಣದ ವಿರುದ್ಧ ಹೋರಾಡುವುದು, ಮಂದಿರ ಮಹಾಸಂಘದೊಂದಿಗೆ ಕೈಜೋಡಿಸಿ ಪ್ರತಿಯೊಂದು ಉಪಕ್ರಮಗಳಲ್ಲಿ ಸಹಭಾಗಿ ಆಗುವಂತೆ ಸಂಕಲ್ಪ ಮಾಡಿದರು.
ತುಮಕೂರು ಜಿಲ್ಲೆಯ ಡಾ.ಆರ್.ಎಲ್.ರಮೇಶ್ ಬಾಬು, ಸಿ.ಆರ್. ಮೋಹನ್ ಕುಮಾರ್, ಎಂ.ಮನೋಜ್, ಆನಂದ್ ಗುರೂಜೀ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು ಎಂದು ಕರ್ನಾಟಕ ಮಂದಿರ ಮಹಾಸಂಘದ ರಾಜ್ಯ ಸಂಯೋಜಕ ಮೋಹನ ಗೌಡ ತಿಳಿಸಿದ್ದಾರೆ.