ನರ್ಸಿಂಗ್ ಕಾಲೇಜಿನಲ್ಲಿ ವಿಶ್ವ ನ್ಯೂಮೋನಿಯ ದಿನಾಚರಣೆ

News Desk

 ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಶ್ರೀ ರಾಮ ನರ್ಸಿಂಗ್ ಕಾಲೇಜ್ ಸಹಯೋಗದಲ್ಲಿ ವಿಶ್ವ “ನ್ಯುಮೋನಿಯಾ ದಿನಾಚರಣೆಯ”ಕಾರ್ಯಕ್ರಮವನ್ನು ಶ್ರೀ ರಾಮ ನರ್ಸಿಂಗ್ ಕಾಲೇಜ್ ದೊಡ್ಡಬಳ್ಳಾಪುರದಲ್ಲಿ ಸಸಿಗೆ ನೀರು ಹಾಕುವ ಮೂಲಕ ಜಿಲ್ಲಾ ಆರ್ ಸಿ ಹೆಚ್ ಡಾಕ್ಟರ್ ಸೀಮಾ ರವರು ಉದ್ಘಾಟಿಸಿ ಮಾತನಾಡಿ ನ್ಯುಮೋನಿಯಾ ಕಾಯಿಲೆ ಹರಡುವ ವಿಧಾನ ಆದರ ಪರಿಣಾಮ ಹಾಗೂ ನ್ಯುಮೋನಿಯಾ ಕಾಯಿಲೆಯನ್ನು ತಡೆಗಟ್ಟುವ ವಿಧಾನದ ಬಗ್ಗೆ ಸವಿವರವಾಗಿ ವಿವರಿಸಿದರು.

 ತಾಲ್ಲೂಕು ಆರೋಗ್ಯಾಧಿಕಾರಿ ಡಾಕ್ಟರ್ ಶಾರದ ರವರು  ಮಾತನಾಡಿ ಚಿಕ್ಕ ಚಿಕ್ಕ ಮಕ್ಕಳಿಗೆ ಹೆಚ್ಚಾಗಿ ನ್ಯುಮೋನಿಯಾ ಕಾಯಿಲೆ ಹರಡುತ್ತದೆ ಮುಂಜಾಗ್ರತೆ ಕ್ರಮವಹಿಸುವುದರಿಂದ ಕೈಗಳನ್ನು ಶುದ್ಧವಾಗಿ ತೊಳೆದು ಕೊಳ್ಳುವುದರಿಂದ ಶುಭ್ರವಾದ ಬಟ್ಟೆ ನಿಯಮಿತ ಆಹಾರವನ್ನು ಸೇವಿಸುವುದರಿಂದ ನ್ಯುಮೋನಿಯಾ ಕಾಯಿಲೆ ತಡೆಗಟ್ಟಬಹುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಡಾ ಹೆಚ್ ಜಿ ವಿಜಯಕುಮಾರ್ ರವರು ನ್ಯುಮೋನಿಯಾ ಕಾಯಿಲೆ ಹತೋಟಿ ಮಾಡದೆ ಹೊದರೆ ಅದರ ಜೊತೆಗೆ ಬೇರೆ ಬೇರೆ ಕಾಯಿಲೆಗಳು ಕಂಡು ಬರುವ ಸಂಭವವಿರುತ್ತದೆ.

ಅದುದರಿಂದ ಪ್ರಾರಂಭದಲ್ಲೇ ನ್ಯುಮೋನಿಯಾ ಕಾಯಿಲೆ ಹತೋಟಿಗೆ ತರಬೇಕು ಎಂದು ಹೇಳಿದರು ಕಾರ್ಯಕ್ರಮದಲ್ಲಿ ಶ್ರೀ ಸೂರ್ಯ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಎಂ ಸಿ ಮಂಜುನಾಥ್ ಉಪನ್ಯಾಸಕರಾದ ಅಂಜಲಿ ಮಿಥುನ್ ಶ್ರೀ ರಾಮ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.

- Advertisement -  - Advertisement -  - Advertisement - 
Share This Article
error: Content is protected !!
";