ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಳ್ಳಕೆರೆ ನಗರದ ವೆಂಕಟೇಶ್ವರ ನಗರದಲ್ಲಿನ ನಮ್ಮ ಕ್ಲಿನಿಕ್‍ನಲ್ಲಿ ಗುರುವಾರ ವಿಶ್ವ ದೃಷ್ಠಿ ದಿನ ಆಚರಿಸಲಾಯಿತು.
ವಿಶ್ವ ದೃಷ್ಠಿ ದಿನದ ಅಂಗವಾಗಿ ಸಾರ್ವಜನಿಕರಿಗೆ ದೃಷ್ಠಿ ಸಮಸ್ಯೆ ಕುರಿತು ನಮ್ಮ ಕ್ಲಿನಿಕ್ ವೈದ್ಯಾಧಿಕಾರಿಗಳು ಜಾಗೃತಿ ಮೂಡಿಸಿದರು. ಯಾರಿಗಾದರೂ ಕಣ್ಣಿನ ಪೊರೆ ಬಂದರೆ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಲು ತಿಳಿಸಿದರು.
ಕಾರ್ಯಕ್ರಮದಲ್ಲಿ ನಮ್ಮ ಕ್ಲಿನಿಕ್ ವೈದ್ಯಾಧಿಕಾರಿಗಳಾದ ಡಾ.ಅಭಿಲಾಶ್, ಪಿಹೆಚ್‍ಸಿಒ ಸೌಭಾಗ್ಯಮ್ಮ, ಹೆಚ್‍ಐಒ ರೇಷ್ಮಾ ಭಾನು, ಪ್ರಯೋಗ ಶಾಲಾ ತಂತ್ರಜ್ಞ ಮಂಜುನಾಥ್, ನಮ್ಮ ಕ್ಲಿನಿಕ್ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಇದ್ದರು.

