ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಚಳ್ಳಕೆರೆ ತಾಲೂಕಿನ ಎಂ ಎಸ್ ಹಳ್ಳಿ ವಲಯದ ಎಂ ಎಸ್ ಹಳ್ಳಿ ಕಾರ್ಯಕ್ಷೇತ್ರದ ವಾತ್ಸಲ್ಯ ಸದಸ್ಯರಾದ ಗಂಗಮ್ಮನವರಿಗೆ ವಾತ್ಸಲ್ಯ ಕಾರ್ಯಕ್ರಮದಡಿಯಲ್ಲಿ ವಾತ್ಸಲ್ಯ ಮನೆ ನಿರ್ಮಾಣಕ್ಕಾಗಿ ಕಾಮಗಾರಿಗೆ ಗುದ್ದಲಿ ಪೂಜೆ ಕಾರ್ಯಕ್ರಮ ಹಮ್ಮಿಕೊಂಡಿದ್ದು ತಾಲೂಕಿನ ಯೋಜನಾಧಿಕಾರಿ ಶಶಿಕಲಾ ನೆರವೇರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ವಿಷ್ಣುಮೂರ್ತಿ ರಾವ್, ಜನ ಜಾಗೃತಿ ವೇದಿಕೆ ಸದಸ್ಯರು ನಗರಸಭಾ ಸದಸ್ಯ ನೇತಾಜಿ, ಪ್ರಸನ್ನ, ಶಿಬಿರದ ಉಪಾಧ್ಯಕ್ಷ ಎಂ ಎನ್ ಮೃತ್ಯುಂಜಯ, ಸಿ ಎಂ ರಮೇಶ್, ಐಟಿಐ ಪ್ರಿನ್ಸಿಪಾಲ್ ಮತ್ತು ಮದ್ಯವರ್ಜನ ಶಿಬಿರ ಉಪಾಧ್ಯಕ್ಷರು ಉಪಸ್ಥಿತರಿದ್ದರು.
ಒಕ್ಕೂಟದ ಅಧ್ಯಕ್ಷೆ ಚಂದ್ರಕಲಾ, ಮೇಸ್ತ್ರಿಈಶ್ವರ್, ಗ್ರಾಮದ ಮುಖ್ಯಸ್ಥರಾದ ಗೋವಿಂದಪ್ಪ, ರುದ್ರಪ್ಪ, ಯೋಗೀಶ್, ಭಾಗ್ಯಮ್ಮ, ಸಮನ್ವಯಾಧಿಕಾರಿ ಭವಾನಿ, ಮೇಲ್ವಿಚಾರಕಿ ನೀಲಮ್ಮ, ಸೇವಾ ಪ್ರತಿನಿಧಿ ಲಕ್ಷ್ಮಿ ಮಣಿಕಂಠ, ಗ್ರಾಮದ ಮುಖ್ಯಸ್ಥರು ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.

