ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ರಾಜ್ಯದಲ್ಲಿ ವಿದ್ಯಾವಂತರು ಪದವೀಧರರು ಕಾಂಗ್ರೆಸ್ ಸರ್ಕಾರದ ವಿರುದ್ಧ ಇದ್ದಾರೆ ಆದ್ದರಿಂದ ಮುಂಬರುವ ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಭಾಜಪ ಅಭ್ಯರ್ಥಿಯು ಗೆಲ್ಲಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯರಾದ ವೈ.ಎ ನಾರಾಯಣಸ್ವಾಮಿ ಹೇಳಿದರು.
ಚಿತ್ರದುರ್ಗ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಆಗ್ನೇಯ ಪದವೀಧರ ಕ್ಷೇತ್ರದ ಮತದಾರರ ಪಟ್ಟಿಯ ಪರಿಷ್ಕರಣೆಯ ಬಗ್ಗೆ ಸಮಾಲೋಚನೆ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಆಗ್ನೇಯ ಪದವೀಧರ ಕ್ಷೇತ್ರ ಆದಾಗಿ ನಿಂದಲೂ 50 ವರ್ಷಗಳಿಂದ ಈ ಕ್ಷೇತ್ರಕ್ಕೆ ಭಾಜಪ ಅಭ್ಯರ್ಥಿಯೇ ಹೆಚ್ಚು ಬಾರಿ ಗೆದ್ದಿದ್ದಾರೆ ಈ ಕ್ಷೇತ್ರ ಮತ್ತೊಮ್ಮೆ ಭಾಜಪ ಗೆಲ್ಲುವುದಕ್ಕೆ ವೇದಿಕೆ ಸೃಷ್ಟಿ ಮಾಡಿಕೊಳ್ಳಲು ನಾವೆಲ್ಲರೂ ಮುಂದಾಗಬೇಕೆಂದು ಆಗ್ನೇಯ ಪದವೀಧರ ಕ್ಷೇತ್ರ ಕಳೆದ ಬಾರಿ 1.50,000 ಮತದಾರರು ಈ ಕ್ಷೇತ್ರದಲ್ಲಿ ಇದ್ದರೂ ಆದರೆ ಈ ಬಾರಿ ಎರಡುವರೆ ಲಕ್ಷದಿಂದ 3, ಲಕ್ಷ ಮತದಾರರು ನೋಂದಣಿಯಾಗುವ ನಿರೀಕ್ಷೆ ಇದೆ ಎಂದರು.
ಕಾಂಗ್ರೆಸ್ ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ ಹಾಗೂ ಪದವೀಧರ ಕ್ಷೇತ್ರಕ್ಕೆ ಯಾವುದೇ ಅಭಿವೃದ್ಧಿ ಮಾಡದೇ ಅವರನ್ನು ಅವಕಾಶಗಳಿಂದ ವಂಚಿತರನ್ನಾಗಿ ಮಾಡಿದೆ ರಾಜ್ಯದಲ್ಲಿ ಐದು ಗ್ಯಾರಂಟಿಗಳ ಮುಖಾಂತರ ಐದನೇ ಗ್ಯಾರೆಂಟಿಯಾಗಿ ನಿರುದ್ಯೋಗಿ ಪದವೀಧರರಿಗೆ ಭತ್ಯೆ ನೀಡುವುದಾಗಿ ಹೇಳಿ ರಾಜ್ಯದಲ್ಲಿ ಎರಡು ಪರ್ಸೆಂಟ್ ಭತ್ಯೆ ನೀಡಿಲ್ಲ ಆತ್ಮೀಯ ಪದವೀಧರ ಕ್ಷೇತ್ರದಲ್ಲಿ ಪ್ರಜ್ಞಾವಂತ ಮತದಾರರು ಈ ಬಾರಿ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯನ್ನು ಬೆಂಬಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಚಿತ್ರದುರ್ಗ ಜಿಲ್ಲೆಯಲ್ಲಿ ದಾಖಲೆಯ ರೀತಿಯಲ್ಲಿ ಈ ಬಾರಿ ಹೆಚ್ಚಿನ ಪದವೀಧರರು ತಮ್ಮ ಹೆಸರನ್ನು ನೊಂದಾಯಿಸಿಕೊಂಡಿದ್ದಾರೆ, ಈ ಭಾರಿ ಚಿತ್ರದುರ್ಗದಲ್ಲಿ ದುಪ್ಪಟ್ಟು ದಾಖಲಾಗಿದೆ ಇದರಲ್ಲಿ ಚಿತ್ರದುರ್ಗ ತಾಲ್ಲೂಕಿನಲ್ಲಿ ಅತಿ ಹೆಚ್ಚು ಅಂದರೆ 12,799 ಜನ ಪದವೀಧರ ಮತದಾರರು ತಮ್ಮ ಹೆಸರನ್ನು ನೊಂದಾಯಿಸಿದ್ದಾರೆ ತದ ನಂತರ ಚಳ್ಳಕೆರೆ 7110, ಹೊಳಲ್ಕರೆ 3780, ಹಿರಿಯೂರು 6446. ಹೂಸದುರ್ಗ 4728, ಮೊಳಕಾಲ್ಮೂರು 3142 ಒಟ್ಟು 38005 ಪದವೀಧರರು ತಮ್ಮ ಹೆಸರನ್ನು ನೊಂದಾಯಿಸಿದ್ದಾರೆ. ಈಗ ನ-25ರಿಂದ ಎರಡನೇ ಹಂತದಲ್ಲಿ ಹೆಸರನ್ನು ನೊಂದಾಯಿಸಲು ಸರ್ಕಾರ ಆವಕಾಶವನ್ನು ನೀಡಿದೆ ಇದುವರೆವಿಗೆ ತಮ್ಮ ಹೆಸರನ್ನು ನೊಂದಾಯಿಸಿ ಕೊಳ್ಳದಿರುವವರು ಹೆಸರನ್ನು ನೊಂದಾಯಿಸುವಂತೆ ಮನವಿ ಮಾಡಿದರು.
ಆಗ್ನೇಯ ಪದವೀಧರ ಕ್ಷೇತ್ರ ಆದಾಗಿನಿಂದಲೂ 50 ವರ್ಷಗಳಿಂದ ಈ ಕ್ಷೇತ್ರಕ್ಕೆ ಭಾಜಪ ಅಭ್ಯರ್ಥಿಯೇ ಹೆಚ್ಚು ಬಾರಿ ಗೆದ್ದಿದ್ದಾರೆ. ಈ ಕ್ಷೇತ್ರ ಮತ್ತೊಮ್ಮೆ ಭಾಜಪ ಗೆಲ್ಲುವುದಕ್ಕೆ ವೇದಿಕೆ ಸೃಷ್ಟಿ ಮಾಡಿಕೊಳ್ಳಲು ನಾವೆಲ್ಲರೂ ಮುಂದಾಗಬೇಕೆಂದು ಹೇಳಿದ ಅವರು. ಬಿಹಾರದ ಚುನಾವಣೆ ಫಲಿತಾಂಶ ಕೂಡ ಈ ಕ್ಷೇತ್ರದ ಚುನಾವಣೆ ಮೇಲೆ ಪ್ರಭಾವ ಬೀರಲಿದೆ ಕಾಂಗ್ರೆಸ್ ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ ಹಾಗೂ ಪದವೀಧರ ಕ್ಷೇತ್ರಕ್ಕೆ ಯಾವುದೇ ಅಭಿವೃದ್ಧಿ ಮಾಡದೇ ಅವರನ್ನು ಅವಕಾಶಗಳಿಂದ ವಂಚಿತರನ್ನಾಗಿ ಮಾಡಿದೆ. ರಾಜ್ಯದಲ್ಲಿ ಐದು ಗ್ಯಾರಂಟಿಗಳ ಮುಖಾಂತರ ಐದನೇ ಗ್ಯಾರೆಂಟಿಯಾಗಿ ನಿರುದ್ಯೋಗಿ ಪದವೀಧರರಿಗೆ ಭತ್ಯೆ ನೀಡುವುದಾಗಿ ಹೇಳಿ ರಾಜ್ಯದಲ್ಲಿ ಎರಡು ಪಸೆರ್ಂಟ್ ಭತ್ಯೆ ಕೂಡ ನೀಡಿಲ್ಲ ಎಂದು ದೂರಿದರು.
ಈ ಸಮಾಲೋಚನಾ ಸಭೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ, ಪ್ರಧಾನ ಕಾರ್ಯದರ್ಶಿ ಬಾಳೆಕಾಯಿ ರಾಮದಾಸ್, ತಿಪ್ಪೇಸ್ವಾಮಿ, ಸಂಪತ್, ಮಂಡಲಗಳ ಸಂಚಾಲಕ ಸಹ ಸಂಚಾಲಕರು, ಹಾಜರಿದ್ದರು.

