ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನಮ್ಮ ಮೆಟ್ರೋ – ನಮ್ಮ ಹೆಮ್ಮೆ ! ಹಳದಿ ಮಾರ್ಗ ಸೇರ್ಪಡೆ ಬಳಿಕ ಒಂದೇ ದಿನದಲ್ಲಿ ನಮ್ಮ ಮೆಟ್ರೋ ಮೂಲಕ 10.48 ಲಕ್ಷ ಜನ ಪ್ರಯಾಣಿಸಿ ದಾಖಲೆ ಬರೆದಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ನೇರಳೆ ಮಾರ್ಗದಲ್ಲಿ 4,51,816, ಹಸಿರು ಮಾರ್ಗದಲ್ಲಿ 2,91,677, ಹಳದಿ ಮಾರ್ಗದಲ್ಲಿ 52,215 ಹಾಗೂ ಇಂಟರ್ ಚೇಂಜ್‌ನಲ್ಲಿ 2,52,323 ಜನರು ಮೆಟ್ರೋ ಮೂಲಕ ಪ್ರಯಾಣಿಸಿದ್ದಾರೆ ಎಂದು ಡಿಸಿಎಂ ತಿಳಿಸಿದ್ದಾರೆ.
ಇದೇ ರೀತಿ ಎಲ್ಲರು ಹೆಚ್ಚಾಗಿ ಸಾರ್ವಜನಿಕ ಸಾರಿಗೆ ಸೇವೆಗಳನ್ನು ಬಳಸಿ, ಬೆಂಗಳೂರಿನ ವಾಹನ ದಟ್ಟಣೆಯನ್ನು ಕಡಿಮೆ ಮಾಡಲು ಸಹಕರಿಸಬೇಕು ಎಂದು ಡಿಸಿಎಂ ಶಿವಕುಮಾರ್ ಮನವಿ ಮಾಡಿದ್ದಾರೆ.

