ಯೋಗವು ಕೇವಲ ದೈಹಿಕ ವ್ಯಾಯಾಮವಲ್ಲ. ಇದು ಮಾನಸಿಕ ಶಾಂತಿ, ಸ್ಪಷ್ಟತೆ, ದೈಹಿಕ ಸ್ವಾಸ್ತ್ಯತೆ-ಹೆಚ್ ಡಿಕೆ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ತಮಿಳುನಾಡಿನ ಸೇಲಂ ಉಕ್ಕು ಸ್ಥಾವರದ ಆವರಣದಲ್ಲಿ ನಡೆದ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಹೆಚ್.ಡಿ ಕುಮಾರಸ್ವಾಮಿ ಪಾಲ್ಗೊಂಡಿದ್ದರು.

ರಾಷ್ಟ್ರದ ಬೆನ್ನೆಲುಬಾಗಿರುವ ಉಕ್ಕು ಕ್ಷೇತ್ರದ ಕುಟುಂಬದೊಂದಿಗೆ ಯೋಗದ ಅನನ್ಯತೆ, ಅವಿಸ್ಮರಣೆಯ ಕ್ಷಣಗಳನ್ನು ಅನುಭವಿಸುವ ಭಾಗ್ಯ ನನ್ನದಾಯಿತು ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ತಿಳಿಸಿದರು.

- Advertisement - 

 ಸೇಲಂ ಟೌನ್‌ಶಿಪ್‌ನಲ್ಲಿರುವ ಹಿಲ್ ವ್ಯೂ ಕ್ರೀಡಾಂಗಣದಲ್ಲಿ ಸ್ಥಾವರದ ನೂರಾರು ಉದ್ಯೋಗಿಗಳು ಮತ್ತು ಅವರ ಕುಟುಂಬಗಳು ಯೋಗಾಭ್ಯಾಸ ಮಾಡಲು ಒಟ್ಟುಗೂಡಿದರು. ಇದು ಜಗತ್ತಿಗೆ ಭಾರತ ನೀಡಿರುವ ಶಾಶ್ವತ ಕೊಡುಗೆಯಾಗಿದೆ ಎಂದು ಹೇಳಿದರು.

ಯೋಗವು ಕೇವಲ ದೈಹಿಕ ವ್ಯಾಯಾಮವಲ್ಲ. ಇದು ಮಾನಸಿಕ ಶಾಂತಿ, ಮಾನಸಿಕ ಸ್ಪಷ್ಟತೆ, ದೈಹಿಕ ಸ್ವಾಸ್ತ್ಯತೆ ಮತ್ತು ಸಾಮೂಹಿಕ ಯೋಗಕ್ಷೇಮಕ್ಕೆ ಪರಿಣಾಮಕಾರಿ ಮಾರ್ಗವಾಗಿದೆ ಎಂದು ಕುಮಾರಸ್ವಾಮಿ ಅಭಿಪ್ರಾಯಪಟ್ಟರು. ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಯೋಗವು ಜಗತ್ತನ್ನೇ ಒಗ್ಗೂಡಿಸಿದೆ. ಜಗತ್ತಿನ ಯೋಗ ಕ್ಷೇಮಕ್ಕೆ ನಮ್ಮ ಪಾರಂಪರಿಕ ಯೋಗವು ಮಹೋನ್ನತ ಕೊಡುಗೆ ನೀಡುತ್ತಿದೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಅಭಿಪ್ರಾಯಪಟ್ಟರು.

- Advertisement - 

 

Share This Article
error: Content is protected !!
";