ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಬೆಂಗಳೂರಿನ ರಾಜೇಂದ್ರ ಪ್ರಸಾದ್ ಅಂತಾರಾಷ್ಟ್ರೀಯ ಸಮ್ಮೇಳನ ಸಭಾಂಗಣದಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗ ಸಮಾವೇಶದಲ್ಲಿ ಪಾಲ್ಗೊಂಡಿದ್ದ ದೊಡ್ಡಬಳ್ಳಾಪುರದ ಯೋಗಪಟು ಎ.ಜಿ.ಯಶಸ್ವಿನಿ, ಕೂರ್ಮಾಸನ ಭಂಗಿಯಲ್ಲಿ 186 ಕೆಜಿ ಭಾರ ಹೊರುವ ಮೂಲಕ ಗ್ಲೋಬಲ್‌ರೆಕಾರ್ಡ್ ಪ್ರಶಸ್ತಿ ಪಡೆದು ಕೊಂಡಿದ್ದಾರೆ.
ಇಲ್ಲಿನ ಶ್ರೀ ರಾಮಕೃಷ್ಣ ಯೋಗ ಶಿಕ್ಷಣ ಕೇಂದ್ರದ ಯೋಗ ತರಬೇತಿ ಪಡೆದು ಈ ಸಾಧನೆ ಮಾಡಿರುವ ಯಶಸ್ವಿನಿ ಅವರಿಗೆ ಶಾಸಕ ಧೀರಜ್ ಮುನಿರಾಜು ಸೇರಿದಂತೆ ಹಲವು ಗಣ್ಯರು ಅಭಿನಂದಿಸಿದ್ದಾರೆ.

