ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ನಾಡ ಹಬ್ಬ ಮೈಸೂರು ದಸರಾ ಮಹೋತ್ಸವದಲ್ಲಿ ಮೈಸೂರಿನ ವಸ್ತು ಪ್ರದರ್ಶನದ ಕಾಳಿಂಗರಾವ್ ಸಭಾಂಗಣದಲ್ಲಿ ನಡೆದ ರಾಜ್ಯಮಟ್ಟದ ದಸರಾ ಯೋಗ ಸ್ಪರ್ಧೆ –2025ರಲ್ಲಿ
ದೊಡ್ಡಬಳ್ಳಾಪುರದ ನಿಸರ್ಗ ಯೋಗ ಕೇಂದ್ರದ ಯೋಗ ಪಟುಗಳಾದ ಪಿ.ಎಸ್ ಶಶಾಂಕ್, ಜಿ.ನವನೀತ್, ಎಂ.ಆರ್ ಜಾಹ್ನವಿ, ವಿ.ವರ ಪ್ರಸಾದ್, ಕೆ.ವಿನಯ ಕುಮಾರ್, ಎ.ಆರ್ ಕೌಶಿಕ್ ಕುಮಾರ್, ಎ.ಹಿತೇಶ್ ಬಹುಮಾನ ಪಡೆದು ದೊಡ್ಡಬಳ್ಳಾಪುರಕ್ಕೆ ಕೀರ್ತಿ ತಂದಿರುತ್ತಾರೆ.

