ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ತಾಲೂಕಿನ ಹಿರೇಗುಂಟದೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರಾಷ್ಟೀಯ ಆಯುಷ್ಮಾನ್ ಆರೋಗ್ಯ ಅಭಿಯಾನದ ಅಡಿಯಲ್ಲಿ ಉಚಿತ ಯೋಗ ಚಿಕಿತ್ಸಾ ಸೌಲಭ್ಯ ಪ್ರಾರಂಭಿಸಿದ್ದು ಅದರ ಪ್ರಚಾರದ ಅಂಗವಾಗಿ ಜಿಲ್ಲಾ ಪಂಚಾಯಿತಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಚಿತ್ರದುರ್ಗ ಇವರುಗಳ ಸಹಯೋಗದಲ್ಲಿ ಶನಿವಾರ ಗ್ರಾಮದ ತರಳಬಾಳು ಶ್ರೀ ದ್ಯಾಮಲಾಂಬಿಕಾ ಪ್ರೌಢಶಾಲಾ ಮಕ್ಕಳಿಗೆ ಉಚಿತ ಯೋಗ ತರಬೇತಿ ಹಮ್ಮಿಕೊಳ್ಳಲಾಗಿತ್ತು.
ಇದೇ ಸಂದರ್ಭದಲ್ಲಿ ಗ್ರಾಮದ ಬೀದಿಗಳಲ್ಲಿ ಶಾಲಾ ಮಕ್ಕಳು ಹಾಗೂ ಶಿಕ್ಷಕರ ಸಹಯೋಗದಲ್ಲಿ ಯೋಗ ಪ್ರಚಾರ ಜಾಥಾ ಹಮ್ಮಿಕೊಳ್ಳಲಾಗಿತ್ತು.
ಯೋಗ ತರಬೇತಿ ಮತ್ತು ಯೋಗ ಪ್ರಚಾರ ಜಾತದ ನೇತೃತ್ವ ವಹಿಸಿ ಮಾತನಾಡಿದ ಯೋಗ ತರಬೇತಿದಾರ ರವಿ ಕೆ ಅಂಬೇಕರ್ ಮಾತನಾಡಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಬಳಿಕ ಯೋಗಾಭ್ಯಾಸ ಜಾಗತಿಕವಾಗಿ ಮಾತ್ರವಲ್ಲದೆ, ಭಾರತದಲ್ಲೂ ಹೆಚ್ಚು ಪ್ರಾಮುಖ್ಯ ಪಡೆಯಲಾರಂಭಿಸಿದೆ. ಅಧಿಕ ರಕ್ತದೊತ್ತಡ, ಮಧು ಮೇಹ, ಕ್ಯಾನ್ಸರ್‌ಮತ್ತಿತರ ಅಸಾಂಕ್ರಾಮಿಕ ಕಾಯಿಲೆಗಳನ್ನು ತಡೆಯುವುದಕ್ಕಾಗಿ ಉಚಿತ ಯೋಗಾಭ್ಯಾಸವನ್ನು ರಾಜ್ಯದ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರ (ಪಿಎಚ್‌ಸಿ)ಗಳಲ್ಲಿ ಆರಂಭಿಸಿರುವುದು ಈ ನಿಟ್ಟಿನಲ್ಲಿ ಹೊಸ ಹೆಜ್ಜೆ.
ಅದೇ ರೀತಿ ಹಿರೇಗುಂಟನೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗ್ರಾಮಸ್ಥರಿಗಾಗಿ ಉಚಿತ ಯೋಗ ತರಬೇತಿ ವಿಭಾಗ ಪ್ರಾರಂಭಿಸಲಾಗಿದೆ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಇದರ ಪ್ರಯೋಜನ ಪಡೆದುಕೊಳ್ಳಬೇಕಾಗಿದೆ ಎಂದು ತಿಳಿಸಿದರು.
ಶಾಲೆಯ ಮುಖ್ಯಯೊಪಾಧ್ಯಾಯ ಧನಂಜಯ್ ಟಿ ಮಾತನಾಡಿ ರಾಷ್ಟ್ರೀಯ ಅಯುಷ್ಮಾನ್ ಯೋಜಯನೆ ಅಡಿಯಲ್ಲಿ ಸರ್ಕಾರಿ ಪ್ರಾಥಮಿಕ ಅಯೋಗ್ಯ ಕೇಂದ್ರಗಳ ಮೂಲಕ ಗ್ರಾಮೀಣ ಪ್ರದೇಶಗಳ ಜನರಿಗೆ ಹಾಗೂ ಗ್ರಾಮೀಣ ಶಾಲೆಗಳ ಮಕ್ಕಳಿಗೆ ಉಚಿತವಾಗಿ ಯೋಗ ತರಬೇತಿ ನೀಡುತ್ತಿರುವುದು ಜನರ ಅರೋಗ್ಯ ಸುಧಾರಣೆಗೆ ಸಹಕರಿಯಾಗಿದೆ ಎಂದು ಅಭಿಪ್ರಾಯ ಪಟ್ಟರು.
ಹಿರೇಗುಂಟನೂರು ದ್ಯಾಮಲಂಬಿಕಾ ಪ್ರೌಢಶಾಲೆಯ ದೈಹಿಕ ಶಿಕ್ಷಕ ಪುರುಷೋತ್ತಮ ಪಿ. ಹಾಗೂ ಶಿಕ್ಷಕರಾದ ತಿಪ್ಪೇಸ್ವಾಮಿ, ಚಿಕ್ದುರಪ್ಪನವರ ಸಿದ್ದನಗೌಡ, ವಿದ್ಯಾಶ್ರೀ, ಮರುಳುಸಿದ್ದಯ್ಯ ಭಾಗವಹಿಸಿದ್ದರು.