ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
“ಡಿಕೆ ಶಿವಕುಮಾರ್ ಅವರೇ ನೀವೇನೋ ಉಪಮುಖ್ಯಮಂತ್ರಿಯೋ ? ಬೀದಿ ರೌಡಿಯೋ ? ಎಂದು ಜೆಡಿಎಸ್ ತೀಕ್ಷ್ಣವಾಗಿ ಪ್ರಶ್ನಿಸಿದೆ.
ಅನ್ನ ಕೊಡುವ ರೈತರ ಬಳಿ ಈ ರೀತಿಯ ದೌಲತ್ತು, ದರ್ಪ, ದೌರ್ಜನ್ಯ ಖಂಡನೀಯ. ಪ್ರತಿಭಟನಾನಿರತ ರೈತರಸಮಸ್ಯೆಗಳನ್ನು ಕೇಳುವ ಸಂಯಮ, ತಾಳ್ಮೆ, ಸಂವೇದನೆ ಇಲ್ಲದಿರುವ ನೀವೆಂತಹ ಜನಪ್ರತಿನಿಧಿ ? ಎಂದು ಜೆಡಿಎಸ್ ಹರಿಹಾಯ್ದಿದೆ.
ರೌಡಿ ಕೊತ್ವಾಲ್ ಜೊತೆಗಿನ ನಿಮ್ಮ ಒಡನಾಟವನ್ನು ಇನ್ನೂ ಮರೆತಿಲ್ಲ ಎನ್ಮುವುದು ನಡವಳಿಕೆಯಲ್ಲಿ ಎದ್ದು ಕಾಣುತ್ತಿದೆ. ಅನ್ನದಾತರ ಜೊತೆ ಸೌಜನ್ಯದಿಂದ ವರ್ತಿಸುವುದನ್ನು ರೂಢಿಸಿಕೊಳ್ಳಿ ಎಂದು ಜೆಡಿಎಸ್ ತಾಕೀತು ಮಾಡಿದೆ.

