ತಿಪಟೂರಿನಲ್ಲಿಂದು ವಿಭಿನ್ನ-ವಿಶೇಷ ತೆಂಗಿನ ಖಾದ್ಯ ಸವಿಯಲು ನೀವು ಬನ್ನಿ

WhatsApp
Telegram
Facebook
Twitter
LinkedIn

ಚಂದ್ರವಳ್ಳಿ ನ್ಯೂಸ್, ತಿಪಟೂರು:
ಕಲಾಕೃತಿ ಸಂಸ್ಥೆ ಪ್ರಧಾನ ಪ್ರಾಯೋಜಕತ್ವದಲ್ಲಿ ಸೆ.2 ಸೋಮವಾರ ತಿಪಟೂರಿನ ಎಸ್.ಎನ್.ಎಸ್. ಕನ್ವೆನ್ಷನ್ ಹಾಲ್‌ನಲ್ಲಿ ನವದೆಹಲಿಯ ಭಾರತೀಯ ಕಾರ್ಯನಿರತ ಪತ್ರಕರ್ತರ 78ನೇ ರಾಷ್ಟ್ರೀಯ ಮಂಡಳಿ ಸಮಾವೇಶ, ವಿಚಾರ ಸಂಕಿರಣ ಹಾಗೂ ತೆಂಗು ಉತ್ಪನ್ನಗಳ ಪ್ರದರ್ಶನ ಮತ್ತು ಗೋಷ್ಠಿ ಏರ್ಪಡಿಸಲಾಗಿದೆ ಎಂದು ಕಲಾಕೃತಿ ಸಂಸ್ಥೆಯ ಅಧ್ಯಕ್ಷ ಡಾ.ಶ್ರೀಧರ್ ತಿಳಿಸಿದರು.

ತಿಪಟೂರು ನಗರದ ಕೌಸ್ತುಭ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯನಿರತ ಪತ್ರಕರ್ತರ ಒಂದು ದಿನದ ವಿಚಾರ ಸಂಕಿರಣ, ಭಾರತ ಸ್ವಾತಂತ್ರೋತ್ಸವದ 75ನೇ ವರ್ಷದ ನೆನಪಿನಲ್ಲಿ ಬೃಹತ್ ಅಂಚೆಚೀಟಿ, ಲಕೋಟೆ ಮತ್ತು ಭಾರತದ ಸ್ವಾತಂತ್ರ್ಯ ನಂತರದ ಅಮೂಲ್ಯ ನಾಣ್ಯಗಳ ಪ್ರದರ್ಶನ ಹಾಗೂ ವಿಶ್ವ ತೆಂಗು ದಿನದ ಅಂಗವಾಗಿ ತೆಂಗು ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಪತ್ರಕರ್ತರ ಒಂದು ರಾಷ್ಟ್ರೀಯ ಸಮ್ಮೇಳನ ತಿಪಟೂರಿನಲ್ಲಿ ನಡೆಯುತ್ತಿರುವುದು ಒಂದು ಸುದೈವ. ವಸ್ತು ಪ್ರದರ್ಶನದಲ್ಲಿ ತೆಂಗಿನಕಾಯಿ, ಒಣಕೊಬ್ಬರಿ, ತೆಂಗಿನ ಸಂಸ್ಕರಿಸಿದ ಒಣಪುಡಿ, ತೆಂಗಿನ ಗಾಣದ ಎಣ್ಣೆ, ನೀರಾ, ಕೊಬ್ಬರಿ ಮಿಠಾಯಿ ಸೇರಿದಂತೆ ತೆಂಗಿನಿಂದ ಉತ್ಪಾದಿಸಬಹುದಾದ ನಾನಾ ಉತ್ಪನ್ನಗಳ ಪ್ರದರ್ಶನ, ತೆಂಗಿನ ಸಸಿಗಳು, ಅಡಿಕೆ ಸಸಿಗಳು ಹಾಗೂ ಇತರೆ ಸಾವಯವ ವಸ್ತುಗಳ ಪ್ರದರ್ಶನ ಇರುತ್ತದೆ ಎಂದರು. 

ಬೆಳಿಗ್ಗೆ 10ಗಂಟೆಗೆ ಗೃಹ ಸಚಿವ ಜಿ.ಪರಮೇಶ್ವರ್ ಪತ್ರಕರ್ತರ ರಾಷ್ಟ್ರೀಯ ಸಮಾವೇಶ ಉದ್ಘಾಟಿಸಲಿದ್ದು, ಶಾಸಕ ಕೆ.ಷಡಕ್ಷರಿ ವಸ್ತುಪ್ರದರ್ಶನ ಮತ್ತು ಅಂಚೆ ಚೀಟಿ ಪ್ರದರ್ಶನ ಉದ್ಘಾಟಿಸಲಿದ್ದಾರೆ. 

ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಮಲ್ಲಿಕಾರ್ಜುನ್ ಅಧ್ಯಕ್ಷತೆ ವಹಿಸಲಿದ್ದು, ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಕಲ್ಪಶ್ರೀ ಸ್ಪರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. 

 ಮಧ್ಯಾಹ್ನ 12 ಗಂಟೆಗೆ ಪತ್ರಕರ್ತರ ರಾಷ್ಟ್ರೀಯ ಮಂಡಳಿ ಸಮಾವೇಶ ನಂತರ ಮಧ್ಯಾಹ್ನ 2.30ಕ್ಕೆ ಪತ್ರಿಕೆಗಳ ಮೇಲೆ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಪರಿಣಾಮ ವಿಷಯದ ಬಗ್ಗೆ ಗೋಷ್ಠಿ ನಂತರ 3.30ಕ್ಕೆ ತಿಪಟೂರು ಉಂಡೆ ಕೊಬ್ಬರಿ ಮಾರುಕಟ್ಟೆ ಸಮಸ್ಯೆ ಮತ್ತು ಪರಿಹಾರ ಮಾರ್ಗಗಳುಎಂಬ ವಿಷಯದ ಬಗ್ಗೆ ಗೋಷ್ಠಿ ಏರ್ಪಡಿಸಲಾಗಿದ್ದು ದೇಶದಾದ್ಯಂತ ಎಲ್ಲ ರಾಜ್ಯಗಳಿಂದ ಪತ್ರಕರ್ತರು ಮತ್ತು ರೈತ ಮುಖಂಡರು, ಬೆಳೆಗಾರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. 

ಸುದ್ದಿಗೋಷ್ಠಿಯಲ್ಲಿ ಕಲಾಕೃತಿ ಸಂಸ್ಥೆಯ ಜ್ಯೋತಿ ಗಣೇಶ್, ಎ.ಟಿ.ಪ್ರಸಾದ್, ಕೆ.ಎಂ.ರಾಜಣ್ಣ, ಕಸಾಪ ಅಧ್ಯಕ್ಷ ಬಸವರಾಜಪ್ಪ, ಹಾಜರಿದ್ದರು.

 

News Desk   About Us
For Feedback - [email protected]

LATEST Post

error: Content is protected !!
WhatsApp Icon Telegram Icon