ಹೋಲಿಕೆಗೆ ಯಾರುಂಟು ನೀವೇ ಹೇಳ್ರಪ್ಪ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಹೋಲಿಕೆಗೆ ಯಾರುಂಟು ನೀವೇ ಹೇಳ್ರಪ್ಪ.

ತಾಯಿ ಚಾಮುಂಡೇಶ್ವರಿ ಮೈಸೂರಿಗೆ
ತಾಯಿ ಏಕನಾಥೇಶ್ವರಿ ದುರ್ಗಕ್ಕೆ

- Advertisement - 

ನಾಡಿಗೆ ಮೈಸೂರು ಅರಸರಾದರೆ
ದುರ್ಗಕ್ಕೆ ಮದಕರಿ ನಾಯಕರು

ಕಿತ್ತೂರು ಚೆನ್ನಮ್ಮ ಬೆಳಗಾವಿಗೆ
ರಾಣಿ ಅಬ್ಬಕ್ಕ ಮಂಗಳೂರಿಗಾದರೆ
ಒನಕೆ ಓಬವ್ವ ದುರ್ಗಕ್ಕೆ

- Advertisement - 

ಸಿದ್ದಗಂಗಾ ಮಠ ತುಮಕೂರಿಗೆ
ಮುರುಘಮಠ ನಮ್ಮ ದುರ್ಗಕ್ಕೆ

ಹಾಸನಕ್ಕೆ ಅನಕೃ, ಎಸ್.ಎಲ್ ಭೈರಪ್ಪ ಆದ್ರೆ
ತರಾಸು
, ಬಿ.ಎಲ್ ವೇಣು ನಮ್ಮ ದುರ್ಗಕ್ಕೆ

ಶಿವಮೊಗ್ಗದ ಅಭಿವೃದ್ಧಿಗೆ ಯಡಿಯೂರಪ್ಪ
ದಾವಣಗೆರೆಯ ಬೆಳೆವಣಿಗೆಗೆ ಶಾಮನೂರು ಶಿವಶಂಕರಪ್ಪ
ಇವರ ಹೋಲಿಕೆಗೆ ನಮ್ಮ ದುರ್ಗದಲ್ಲಿ ಯಾರುಂಟು ನೀವೇ ಹೇಳ್ರಪ್ಪ.
ಕವಿತೆ:ವೆಂಕಟೇಶ ಹೆಚ್ ಚಿತ್ರದುರ್ಗ,(ನವ ದೆಹಲಿ) 7760023887.

 

 

Share This Article
error: Content is protected !!
";